Earthquake in New Zealand ನ್ಯೂಜಿಲ್ಯಾಂಡ್​ನಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ

ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಅಗಾಧ ಪ್ರಮಾಣದ ಭೂಕಂಪ ದಾಖಲಾಗಿದೆ. ತಾಜಾ ವರದಿಗಳ ಪ್ರಕಾರ ನ್ಯೂಜಿಲ್ಯಾಂಡ್​ ಮತ್ತು ನೆರೆಯ ಆಸ್ಟ್ರೇಲಿಯಾಕ್ಕೂ ಸುನಾಮಿ ಭೀತಿ ಎದುರಾಗಿದೆ. ಪ್ರವಾಸೋದ್ಯಮವನ್ನು ಕೈಬೀಸಿ ಕರೆಯುವ ಪುಟ್ಟ ದ್ವೀಪರಾಷ್ಟ್ರಕ್ಕೆ ಸುನಾಮಿ ಅಪ್ಪಳಿಸಿದರೆ ಭಾರೀ ಅಪಾಯ ಎದುರಾದಂತಾಗುತ್ತದೆ. ಕೆರ್ಮಡೆಕ್ ದ್ವೀಪಗಳ (Kermadec Islands) ದಕ್ಷಿಣ ಭಾಗಕ್ಕೆ ಅಂದ್ರೆ ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಿಂದ 300 ಕಿಮೀ ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 1 ಗಂಟೆಯಲ್ಲಿ […]

Earthquake in New Zealand ನ್ಯೂಜಿಲ್ಯಾಂಡ್​ನಲ್ಲಿ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ
Follow us
ಸಾಧು ಶ್ರೀನಾಥ್​
|

Updated on:Jun 18, 2020 | 10:12 PM

ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಲ್ಲಿ ಭಾರೀ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಅಗಾಧ ಪ್ರಮಾಣದ ಭೂಕಂಪ ದಾಖಲಾಗಿದೆ. ತಾಜಾ ವರದಿಗಳ ಪ್ರಕಾರ ನ್ಯೂಜಿಲ್ಯಾಂಡ್​ ಮತ್ತು ನೆರೆಯ ಆಸ್ಟ್ರೇಲಿಯಾಕ್ಕೂ ಸುನಾಮಿ ಭೀತಿ ಎದುರಾಗಿದೆ. ಪ್ರವಾಸೋದ್ಯಮವನ್ನು ಕೈಬೀಸಿ ಕರೆಯುವ ಪುಟ್ಟ ದ್ವೀಪರಾಷ್ಟ್ರಕ್ಕೆ ಸುನಾಮಿ ಅಪ್ಪಳಿಸಿದರೆ ಭಾರೀ ಅಪಾಯ ಎದುರಾದಂತಾಗುತ್ತದೆ.

ಕೆರ್ಮಡೆಕ್ ದ್ವೀಪಗಳ (Kermadec Islands) ದಕ್ಷಿಣ ಭಾಗಕ್ಕೆ ಅಂದ್ರೆ ನ್ಯೂಜಿಲ್ಯಾಂಡ್​ನ ಈಶಾನ್ಯ ಭಾಗದಿಂದ 300 ಕಿಮೀ ದೂರದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 1 ಗಂಟೆಯಲ್ಲಿ ಈ ಭಾರೀ ಕಂಪನ ಉಂಟಾಗಿದ್ದು, ಸಾವಿರಾರು ಮಂದಿ ದುಃಸ್ವಪ್ನ ಕಂಡವರಂತೆ ಎದ್ದು, ಮನೆಗಳಿಂದ ಹೊರಬಂದಿದ್ದಾರೆ.

2010 ರ ಸೆಪ್ಟೆಬರ್​ನಲ್ಲಿ ಕ್ರೈಸ್ಟ್​ಚರ್ಚ್​ನಲ್ಲಿ ಸರಿಸುಮಾರು ಇದೇ ಪ್ರಮಾಣದ ಭೂಕಂಪ ಉಂಟಾಗಿತ್ತು. ಈ ಭಾರಿ ಸಮುದ್ರದಾಳದಲ್ಲಿ (33 ಕಿ.ಮೀ ) ಭೂಕಂಪ ಸಂಭವಿಸಿದ್ದು, ನೆಲಪ್ರದೇಶಗಳಲ್ಲಿ ಹೆಚ್ಚು ಭೂಕಂಪದ ಪರಿಣಾಮ ಕಂಡುಬಂದಿಲ್ಲ. ಆದ್ರೆ ಸಮುದ್ರದೊಡಲಲ್ಲಿ ಕಂಪನಗಳು ಘಟಿಸಿವೆ. ಇದರಿಂದ ಸುನಾಮಿ ಆತಂಕ ಮನೆ ಮಾಡಿದೆ.

Published On - 9:42 pm, Thu, 18 June 20