ಈ ಬಾರಿ‌ ಭಕ್ತರಿಗಿಲ್ಲ ಹಾಸನಾಂಬೆಯ ನೇರ ದರ್ಶನ.. ಮತ್ತೆ ದರ್ಶನ ಪಡೆಯೋದು ಹೇಗೆ?

ಹಾಸನ: ಜಿಲ್ಲೆಯ ಅಧಿದೇವತೆಯಾದ ಹಾಸನಾಂಬೆಯ ದೇವಸ್ಥಾನದಲ್ಲಿ ಈ ಬಾರಿ ಭಕ್ತಾದಿಗಳಿಗೆ ನೇರ ದರ್ಶನ ಪಡೆಯುವ ಅವಕಾಶ ಇರುವುದಿಲ್ಲ. ಈ ಬಾರಿ ಹಾಸನಾಂಬೆಯ ದರ್ಶನವನ್ನು ಪಡೆಯಲು ಆನ್​ಲೈನ್​ನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದ್ದಾರೆ. ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲನ್ನು ಈ ವರ್ಷ ನವೆಂಬರ್ 5ರಿಂದ 17 ರವರೆಗೆ ತೆರೆಯಲಾಗುವುದು. ಆದರೆ, ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಹಾಸನಾಂಬೆಯ ಉತ್ಸವವು ಈ ಸಲ ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿರುವುದು. ಪ್ರತಿವರ್ಷ ದೇವಿ […]

ಈ ಬಾರಿ‌ ಭಕ್ತರಿಗಿಲ್ಲ ಹಾಸನಾಂಬೆಯ ನೇರ ದರ್ಶನ.. ಮತ್ತೆ ದರ್ಶನ ಪಡೆಯೋದು ಹೇಗೆ?
ಹಾಸನಾಂಬೆ ದೇವಾಲಯ (ಸಂಗ್ರಹ ಚಿತ್ರ)
Edited By:

Updated on: Oct 02, 2020 | 12:35 PM

ಹಾಸನ: ಜಿಲ್ಲೆಯ ಅಧಿದೇವತೆಯಾದ ಹಾಸನಾಂಬೆಯ ದೇವಸ್ಥಾನದಲ್ಲಿ ಈ ಬಾರಿ ಭಕ್ತಾದಿಗಳಿಗೆ ನೇರ ದರ್ಶನ ಪಡೆಯುವ ಅವಕಾಶ ಇರುವುದಿಲ್ಲ. ಈ ಬಾರಿ ಹಾಸನಾಂಬೆಯ ದರ್ಶನವನ್ನು ಪಡೆಯಲು ಆನ್​ಲೈನ್​ನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದ್ದಾರೆ.

ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲನ್ನು ಈ ವರ್ಷ ನವೆಂಬರ್ 5ರಿಂದ 17 ರವರೆಗೆ ತೆರೆಯಲಾಗುವುದು. ಆದರೆ, ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಹಾಸನಾಂಬೆಯ ಉತ್ಸವವು ಈ ಸಲ ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿರುವುದು.

ಪ್ರತಿವರ್ಷ ದೇವಿ ದರ್ಶನ ಪಡೆಯಲು ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದರು. ಆದರೆ, ಕೊವಿಡ್ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಮೊದಲ ಹಾಗೂ ಕೊನೆಯ ದಿನ‌ ಮಾತ್ರ ಸರಳ‌ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾದಿಕಾರಿ ಆರ್ ಗಿರೀಶ್ ಹೇಳಿದ್ದಾರೆ.

ದೇವಿಯ ದರ್ಶನದ ಲೈವ್ ಟೆಲಿಕಾಸ್ಟ್​ ಮಾಡಿ ಆನ್​ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ, LED ಪರದೆಗಳ ಮೂಲಕವೂ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವ ಚಿಂತನೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯ ಬಳಿಕ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತವು ತಿಳಿಸಿದೆ.