ಯೋಗ ಕಲಿಯಲು ಬಂದು ‘ಲಾಕ್​ ಆದ’ ಆಸ್ಟ್ರೇಲಿಯಾ ಮಹಿಳೆ! ಪೊಲೀಸ್ರು ಏನ್ ಮಾಡಿದ್ರು?

| Updated By: ಸಾಧು ಶ್ರೀನಾಥ್​

Updated on: May 29, 2020 | 2:11 PM

ಧಾರವಾಡ: ಯೋಗ ಮತ್ತು ಮೆಡಿಟೇಶನ್ ಕಲಿಯಲು ಕರ್ನಾಟಕಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಮಹಿಳೆ ಲಾಕ್​ಡೌನ್​ನಿಂದಾಗಿ ಕಳೆದ 2 ತಿಂಗಳಿಂದ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡಿದ್ದಳು. ಆಸ್ಟ್ರೇಲಿಯಾ ಮೂಲದ ನೈಶಾ ತವರಿಗೆ ಹೋಗಲು ಕಷ್ಟ ಪಡುತ್ತಿದ್ದು, ಮಹಿಳೆಯ ಕಷ್ಟಕ್ಕೆ ಸ್ಪಂಧಿಸಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ಮಹಿಳೆಗೆ ಆಸ್ಟ್ರೇಲಿಯಾಕ್ಕೆ ತೆರಳಲು ಸಹಾಯ ಮಾಡಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಮಹಿಳೆ ಇದ್ದಳು. ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಳು. ಅಲ್ಲೇ ಇದ್ದ ಎಸ್ಪಿ ವರ್ತಿಕಾ […]

ಯೋಗ ಕಲಿಯಲು ಬಂದು ‘ಲಾಕ್​ ಆದ’ ಆಸ್ಟ್ರೇಲಿಯಾ ಮಹಿಳೆ! ಪೊಲೀಸ್ರು ಏನ್ ಮಾಡಿದ್ರು?
Follow us on

ಧಾರವಾಡ: ಯೋಗ ಮತ್ತು ಮೆಡಿಟೇಶನ್ ಕಲಿಯಲು ಕರ್ನಾಟಕಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಮಹಿಳೆ ಲಾಕ್​ಡೌನ್​ನಿಂದಾಗಿ ಕಳೆದ 2 ತಿಂಗಳಿಂದ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡಿದ್ದಳು. ಆಸ್ಟ್ರೇಲಿಯಾ ಮೂಲದ ನೈಶಾ ತವರಿಗೆ ಹೋಗಲು ಕಷ್ಟ ಪಡುತ್ತಿದ್ದು, ಮಹಿಳೆಯ ಕಷ್ಟಕ್ಕೆ ಸ್ಪಂಧಿಸಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಮಹಿಳೆಗೆ ಆಸ್ಟ್ರೇಲಿಯಾಕ್ಕೆ ತೆರಳಲು ಸಹಾಯ ಮಾಡಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿ ಮಹಿಳೆ ಇದ್ದಳು. ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಳು. ಅಲ್ಲೇ ಇದ್ದ ಎಸ್ಪಿ ವರ್ತಿಕಾ ಕಟಿಯಾರ್ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದು, ಅವಳನ್ನ ಆಸ್ಟ್ರೇಲಿಯಾಗೆ ಕಳುಹಿಸಲು ಮುಂದಾಗಿದ್ದಾರೆ. ಇಂದು ಕ್ಯಾಬ್ ಮೂಲಕ ಬೆಂಗಳೂರಿಗೆ ಕಳುಹಿಸಿ ನಂತ್ರ ಅಲ್ಲಿಂದ ಆಸ್ಟ್ರೇಲಿಯಾದ ರಾಯಭಾರಿ ಜೊತೆ ಮಾತುಕತೆ ನಡೆಸಿ ದೆಹಲಿ ಮಾರ್ಗವಾಗಿ ಮತ್ತೆ ತನ್ನೂರಿಗೆ ಕಳುಹಿಸುವ ಭರವಸೆಯನ್ನ ಆಕೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Published On - 1:58 pm, Fri, 29 May 20