ಆರೋಗ್ಯ ಇಲಾಖೆ ಎಡವಟ್ಟು: ಡಿಸ್ಚಾರ್ಜ್ ಆದ ಕಾನ್ಸ್‌ಟೇಬಲ್​ಗೆ ಸೋಂಕು

| Updated By:

Updated on: Jul 08, 2020 | 2:49 PM

ಬೆಂಗಳೂರು: ಕಿಲ್ಲರ್ ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣದೆ ಮನುಷ್ಯರ ದೇಹ ಸೇರುತ್ತಿದೆ. ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿರುವ ಎಡವಟ್ಟುಗಳು ಸೋಂಕು ಮತ್ತಷ್ಟು ಬಲಿಷ್ಠವಾಗಿ ಹರಡುವುದಕ್ಕೆ ಸಹಾಯ ಮಾಡಿದಂತಿದೆ. ಈಗ ಆರೋಗ್ಯ ಇಲಾಖೆ ಮತ್ತೊಂದು ಮಹಾ ಎಡವಟ್ಟು ಮಾಡಿದೆ. ಇದರಿಂದ ಕೊರೊನಾ ಸೋಂಕಿನ ಭಯ ಮತ್ತಷ್ಟು ಹೆಚ್ಚಾಗಿದೆ. ಜೂನ್ 26ರಂದು ಚಾಮರಾಜಪೇಟೆ ಕಾನ್ಸ್‌ಟೇಬಲ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಜುಲೈ 3ರಂದು ಆಸ್ಪತ್ರೆಯಿಂದ ಆತನನ್ನು ಡಿಸ್ಚಾರ್ಜ್ ಮಾಡಿದ್ದರು. ಡಿಸ್ಚಾರ್ಜ್ ಮಾಡುವುದಕ್ಕೂ ಮುನ್ನ ಕೊವಿಡ್ ಟೆಸ್ಟ್ […]

ಆರೋಗ್ಯ ಇಲಾಖೆ ಎಡವಟ್ಟು: ಡಿಸ್ಚಾರ್ಜ್ ಆದ ಕಾನ್ಸ್‌ಟೇಬಲ್​ಗೆ ಸೋಂಕು
Follow us on

ಬೆಂಗಳೂರು: ಕಿಲ್ಲರ್ ಕೊರೊನಾ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣದೆ ಮನುಷ್ಯರ ದೇಹ ಸೇರುತ್ತಿದೆ. ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿರುವ ಎಡವಟ್ಟುಗಳು ಸೋಂಕು ಮತ್ತಷ್ಟು ಬಲಿಷ್ಠವಾಗಿ ಹರಡುವುದಕ್ಕೆ ಸಹಾಯ ಮಾಡಿದಂತಿದೆ. ಈಗ ಆರೋಗ್ಯ ಇಲಾಖೆ ಮತ್ತೊಂದು ಮಹಾ ಎಡವಟ್ಟು ಮಾಡಿದೆ. ಇದರಿಂದ ಕೊರೊನಾ ಸೋಂಕಿನ ಭಯ ಮತ್ತಷ್ಟು ಹೆಚ್ಚಾಗಿದೆ.

ಜೂನ್ 26ರಂದು ಚಾಮರಾಜಪೇಟೆ ಕಾನ್ಸ್‌ಟೇಬಲ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಜುಲೈ 3ರಂದು ಆಸ್ಪತ್ರೆಯಿಂದ ಆತನನ್ನು ಡಿಸ್ಚಾರ್ಜ್ ಮಾಡಿದ್ದರು. ಡಿಸ್ಚಾರ್ಜ್ ಮಾಡುವುದಕ್ಕೂ ಮುನ್ನ ಕೊವಿಡ್ ಟೆಸ್ಟ್ ಮಾಡಿಲ್ಲ. ಟೆಸ್ಟ್ ಮಾಡದೆ ಆಸ್ಪತ್ರೆಯ ಸಿಬ್ಬಂದಿ ಕಾನ್ಸ್‌ಟೇಬಲ್​ನ ಮನೆಗೆ ಕಳಿಸಿದ್ದರು.

ನಂತರ ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ಅಂದ್ರೆ ಜುಲೈ 4ರಂದು ಕೊವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಪಿಸಿಗೆ ಸೋಂಕು ಇರುವುದು ದೃಢವಾಗಿದೆ. ಈಗ ಕಾನ್ಸ್‌ಟೇಬಲ್ ಜತೆಗಿದ್ದವರಿಗೆ ಕೊರೊನಾ ಸೋಂಕಿನ ಭೀತಿ ಶುರುವಾಗಿದೆ. ಡಿಸ್ಚಾರ್ಜ್​ಗೂ ಮುನ್ನ ಕೊರೊನಾ ಟೆಸ್ಟ್ ಮಾಡಬೇಕು ಎಂಬ ಸಂಗತಿ ಮರೆತು ಆರೋಗ್ಯ ಇಲಾಖೆಯ ಎಡವಟ್ಟು ಮಾಡಿದೆ. ಈ ಎಡವಟ್ಟಿನಿಂದ ಕೊರೊನಾ ಆತಂಕ ಹೆಚ್ಚಾಗಿದೆ.

Published On - 9:55 am, Wed, 8 July 20