ಬೆಂಗಳೂರು: ಕೊರೊನಾದಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಿತ್ತು. ಸೋಂಕು ನಿಯಂತ್ರಣಕ್ಕೆ ಬಂದ ಕಾರಣ ಸುಮಾರು ಎರಡು ತಿಂಗಳಿಕ್ಕಿಂತ ಹೆಚ್ಚು ಲಾಕ್ ಆಗಿದ್ದ ರಾಜ್ಯ ಅನ್ಲಾಕ್ ಆಗಿದೆ. ಆದರೆ ಶಾಲೆ ಕಾಲೇಜುಗಳನ್ನು ಇನ್ನು ತೆರೆದಿಲ್ಲ. ಹೀಗಾಗಿ ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಜುಲೈ ಮೂರನೇ ವಾರದ ಬಳಿಕ ಶಾಲೆ ಅರಂಭಿಸಲು ಚರ್ಚೆ ನಡೆಸಲಾಗುತ್ತಿದೆ.
ಶಿಕ್ಷಣ ತಜ್ಞರ ಒತ್ತಾಯ
ಶಾಲೆ ಆರಂಭಿಸಲು ಸರ್ಕಾರಕ್ಕೆ ಶಿಕ್ಷಣ ತಜ್ಞರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶಾಲೆ ಆರಂಭಿಸುವಂತೆ ಶಿಕ್ಷಣ ತಜ್ಞರು ಮನವಿ ಮಾಡಿದ್ದಾರೆ. ಶಿಕ್ಷಣ ತಜ್ಞರ ಒತ್ತಾಯದ ಬೆನ್ನಲೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊವಿಡ್ ತಾಂತ್ರಿಕ ಸಮಿತಿ ಸಲಹೆಯಂತೆ ಶಾಲೆ ಆರಂಭಿಸಲು ಒತ್ತಾಯಿಸಿದೆ.
ಕೊರೊನಾದಿಂದ ಸುಮಾರು 15 ತಿಂಗಳಿನಿಂದ ಶಾಲೆ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಿಯಾಗಿ ಆನ್ಲೈನ್ ಶಿಕ್ಷಣ ಸಿಕ್ಕಿಲ್ಲ. ಹೀಗಾಗಿ ರಾಜ್ಯದಲ್ಲಿ ಶಾಲೆ ಆರಂಭಿಸಲು ಶಿಕ್ಷಣ ತಜ್ಞರು ಒತ್ತಾಯಿಸುತ್ತಿದ್ದಾರೆ. ಶಾಲೆ ಆರಂಭಿಸಿ ಮಕ್ಕಳಿಗೆ ಕ್ಷಿರಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ
ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್ಲೈನ್ಗೆ ಅನ್ನದಾನಿ ಎಚ್ಚರಿಕೆ
(Karnataka School Reopen countdown started across the state)
Published On - 10:24 am, Sat, 10 July 21