Tv9 Facebook Live | ‘ಬೆಂಗಳೂರು ಮಿಷನ್ 2020’ ಘೋಷಣೆಗೆ ಬಿಬಿಎಂಪಿ ಚುನಾವಣೆಯಷ್ಟೇ ಉದ್ದೇಶವೇ?

ಬೆಂಗಳೂರು ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ರಸ್ತೆ, ಭದ್ರತೆ, ಸಾರಿಗೆ ಅವ್ಯವಸ್ಥೆ ಎಲ್ಲವೂ ಈಗ ಮುನ್ನೆಲೆಗೆ ಬರಲಿದೆ. ಆದರೆ ಈ ಭರವಸೆ ಎಷ್ಟರ ಮಟ್ಟಿಗೆ ಕಾರ್ಯಸಾಧು ಎನ್ನುವ ಪ್ರಶ್ನೆಯನ್ನು ಕೇಂದ್ರಿಕರಿಸಿ ಗುರುವಾರ ಟಿವಿ9 ಫೇಸ್​ಬುಕ್ ಲೈವ್ ಸಂವಾದ ನಡೆಸಿತು.

Tv9 Facebook Live | ‘ಬೆಂಗಳೂರು ಮಿಷನ್ 2020’ ಘೋಷಣೆಗೆ ಬಿಬಿಎಂಪಿ ಚುನಾವಣೆಯಷ್ಟೇ ಉದ್ದೇಶವೇ?
ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್, ನಮ್ಮ ಬೆಂಗಳೂರು ಫೌಡೆಂಶನ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ
Edited By:

Updated on: Dec 17, 2020 | 6:17 PM

ಬೆಂಗಳೂರು: ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸುತ್ತೇವೆ, ನಾಗರಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುತ್ತೇವೆ ಎಂದು ಗುರುವಾರ ರಾಜ್ಯ ಸರ್ಕಾರ ‘ಬೆಂಗಳೂರು ಮಿಷನ್ 2022’ರ ಕುರಿತು ಭರವಸೆಯ ಮಾತುಗಳನ್ನು ಆಡಿದೆ. ಈ ಯೋಜನೆಯಿಂದ ಎರಡೇ ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಿಸುತ್ತೇವೆಂದು ಆಡಳಿತದ ಚುಕ್ಕಾಣಿ ಹಿಡಿದವರು ಹೇಳುತ್ತಾರೆ.

ಬೆಂಗಳೂರು ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ರಸ್ತೆ, ಭದ್ರತೆ, ಸಾರಿಗೆ ಅವ್ಯವಸ್ಥೆ ಎಲ್ಲವೂ ಈಗ ಮುನ್ನೆಲೆಗೆ ಬರಲಿದೆ. ಆದರೆ ಈ ಭರವಸೆ ಎಷ್ಟರ ಮಟ್ಟಿಗೆ ಕಾರ್ಯಸಾಧು ಎನ್ನುವ ಪ್ರಶ್ನೆಯನ್ನು ಕೇಂದ್ರಿಕರಿಸಿ ಗುರುವಾರ ಟಿವಿ9 ಫೇಸ್​ಬುಕ್ ಲೈವ್ ಸಂವಾದ ನಡೆಸಿತು. ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ, ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್ ಹಾಗೂ ನಮ್ಮ ಬೆಂಗಳೂರು ಫೌಡೆಂಶನ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಂವಾದದಲ್ಲಿ ಭಾಗವಹಿಸಿದ್ದರು. ಆ್ಯಂಕರ್ ಆನಂದ್ ಬುರಲಿ ಕಾರ್ಯಕ್ರಮ ನಡೆಸಿಕೊಟ್ಟರು.

‘ಸುಗಮ ಸಂಚಾರ, ಸ್ವಚ್ಛತೆ, ಹಸಿರು ಬೆಂಗಳೂರು ಹಾಗೂ ಮೂಲ ಸೌಕರ್ಯ ಎಂಬ ನಾಲ್ಕು ವಿಭಾಗಗಳನ್ನು ಬೆಂಗಳೂರು ಮಿಷನ್ 2022ರಲ್ಲಿ ಗುರುತಿಸಿಕೊಳ್ಳಲಾಗಿದೆ. ಅದರ ಆಧಾರದ ಮೇಲೆ ನಗರವನ್ನು ಪೂರ್ಣ ಅಭಿವೃದ್ಧಿಗೊಳಸಿ ಜನರಿಗಾಗಿ ಸುಂದರ ಬೆಂಗಳೂರು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಈ ಸೌಲಭ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾಗುತ್ತದೆ. ಇದನ್ನು ಕಾರ್ಯರೂಪಕ್ಕೆ ತರಲು ವೈಜ್ಞಾನಿಕ ಯೋಜನೆಯು ಅನಿವಾರ್ಯ’ ಎಂದು ನಮ್ಮ ಬೆಂಗಳೂರು ಫೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಹೇಳಿದರು.

ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಮಾತನಾಡಿ, ‘ಬಿಜೆಪಿ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಗಾಗಿ ದೊಡ್ಡ ಯೋಜನೆಯನ್ನು ಜಾರಿ ಮಾಡಲು ಸಿದ್ಧವಾಗಿದೆ. ಇದಕ್ಕೆ ಬೇಕಾಗುವ ಆರ್ಥಿಕ ಮತ್ತು ಆಡಳಿತಾತ್ಮಕ ನೆರವು ಕೊಡಲು ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬೆಂಗಳೂರು ಮಿಷನ್ 2022ರ ಅಡಿಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ರಸ್ತೆ, ಟ್ರಾಫಿಕ್, ನೀರು, ಸಾರಿಗೆ, ಭದ್ರತೆ, ಮಾಲಿನ್ಯದಂಥ ಸಮಸ್ಯೆಗಳತ್ತ ಗಮನ ಹರಿಸಲಾಗುವುದು. ಸಮಸ್ಯೆಗಳಲ್ಲಿ ಪರಿಹರಿಸಲು ಅಗತ್ಯವಿರುವ ಸವಲತ್ತುಗಳನ್ನು ತರಲು ಸರ್ಕಾರ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ ಎಂದರು.

ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್ ಮಾತನಾಡಿ, ‘ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ಪ್ರವೀಣರು. 2014ರಿಂದ ಇವರ ಸುಳ್ಳು ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ. ಮೊದಲಿನಿಂದ ಬುಲೆಟ್ ರೈಲು, ಉದ್ಯೋಗ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ನೀಡಿದ ಭರವಸೆಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇಲ್ಲ. ಇಂದು ನೀಡಿದ ಇಂಥ ದೊಡ್ಡ ಭರವಸೆಗೆ ಕೇವಲ ಬಿಬಿಎಂಪಿ ಚುನಾವಣೆಯಿದೆ’ ಎಂದು ಅಭಿಪ್ರಾಯಪಟ್ಟರು.

 

Karnataka Chief Minister B S Yediyurappa Press Meet Live Updates ಕರ್ನಾಟಕ ಮುಖ್ಯಮಂತ್ರಿ B.S. ಯಡಿಯೂರಪ್ಪ ಸುದ್ದಿಗೋಷ್ಠಿ

 

Published On - 6:16 pm, Thu, 17 December 20