Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮುಖ ನಿಮಗೆ ಬೇಸರವಾಗಿದೆಯೆ? ಜಪಾನಿನಲ್ಲಿ ಲಭ್ಯ ತ್ರಿಡಿ ಮುಖವಾಡ!

ಇದನ್ನು ಯಾರು ಧರಿಸಿದರೂ ಜಪಾನಿ ಮುಖಲಕ್ಷಣಗಳನ್ನು ಹೊಂದಿದ ಸುಂದರ ಯುವಕನಂತೆ ಕಂಗೊಳಿಸುತ್ತಾರೆ!

ನಿಮ್ಮ ಮುಖ ನಿಮಗೆ ಬೇಸರವಾಗಿದೆಯೆ? ಜಪಾನಿನಲ್ಲಿ ಲಭ್ಯ ತ್ರಿಡಿ ಮುಖವಾಡ!
ಜಪಾನಿನಲ್ಲಿ ತಯಾರಾದ ಅತೀನೈಜ ಮುಖವಾಡಗಳು
Follow us
guruganesh bhat
| Updated By: ಆಯೇಷಾ ಬಾನು

Updated on:Dec 18, 2020 | 6:27 AM

ಟೋಕಿಯೋ: ನಿಮಗೆ ನೀವೇ ಅಪರಿಚಿತರಂತೆ ಕಾಣುವ ಅತೀ ನೈಜ ಮುಖವಾಡಗಳು ಇದೀಗ ಜಪಾನಿನಲ್ಲಿ ಮಾರಾಟಕ್ಕೆ ಸಜ್ಜಾಗಿವೆ. ತ್ರಿಡಿ ಮಾದರಿಯಲ್ಲಿ ಇಲ್ಲಿಯ ವ್ಯಾಪಾರಿಯೊಬ್ಬರು ಇವುಗಳನ್ನು ತಯಾರಿಸಿದ್ದಾರೆ.

ಶುಹೈ ಒಕಾವಾರಾ ತಯಾರಿಸಿದ ಈ ಮುಖವಾಡಗಳು ನಿಮ್ಮನ್ನು ಮತ್ತು ನಿಮ್ಮೆದುರಿನವರನ್ನು ಯಾವುದೇ ಬಗೆಯ ವೈರಸ್​ಗಳಿಂದ ರಕ್ಷಿಸಲಾರವು ಎಂಬುದನ್ನು ನೆನಪಿಡಿ. ಏಕೆಂದರೆ ಇಡೀ ವರ್ಷ ಕೊರೋನಾದಿಂದ ದೂರವಿರಲು ಬಗೆಬಗೆಯ ಮಾಸ್ಕ್​ಗಳನ್ನು ಧರಿಸುತ್ತಿರುವ ನಮಗೆ ಇದೂ ಕೂಡ ಅದಕ್ಕೆ ಸಂಬಂಧಿಸಿದ್ದೇ? ಅನ್ನಿಸುವುದು ಸಹಜ. ಆದರೆ ಇದನ್ನು ಯಾರು ಧರಿಸಿದರೂ ಜಪಾನಿ ಮುಖಲಕ್ಷಣಗಳನ್ನು ಹೊಂದಿದ ಸುಂದರ ಯುವಕನಂತೆ ಕಂಗೊಳಿಸುತ್ತಾರೆ!

‘ವೆನೀಸ್​ನ ಮಾಸ್ಕ್ ಅಂಗಡಿಗಳಲ್ಲಿ ಮುಖಗಳನ್ನು ಮಾರುವುದಿಲ್ಲ. ಇದೆಲ್ಲವೂ ರೋಚಕ ಕಥೆಗಳಲ್ಲಿ ಮಾತ್ರ ನಡೆಯುವಂಥದ್ದು. ನಾವು ಇದನ್ನು ರೂಪಿಸುತ್ತಿರುವಾಗ ಮೊದಮೊದಲು ತಮಾಷೆಗೆ ಅಂತಷ್ಟೇ ಭಾವಿಸಿದೆವು’ ಎನ್ನುತ್ತಾರೆ ಒಕಾವಾರಾ.

ಈಗಾಗಲೇ ಇವರು ತಯಾರಿಸಿದ ಮುಖವಾಡಗಳು ಬಹಳಷ್ಟು ಜನಪ್ರಿಯಗೊಂಡಿದ್ದು ಪಾರ್ಟಿಗಳಲ್ಲಿ, ರಂಗಭೂಮಿಗಳಲ್ಲಿ  ಬಳಕೆಯಾಗುತ್ತಿರುತ್ತವೆ. ಮುಂದಿನ ವರ್ಷದ ಹೊತ್ತಿಗೆ ಟೋಕಿಯೋದ ಕಮೆನ್ಯ ಒಮೋಟ್ ಮಳಿಗೆಯಲ್ಲಿ ಈಗ ತಯಾರುಗೊಂಡ ಮುಖವಾಡ 98,000 ಯೆನ್​ಗೆ ಮಾರಾಟವಾಗುವ ಸಾಧ್ಯತೆ ಇದೆ.

‘ಅಕ್ಟೋಬರ್​ನಲ್ಲಿ ಈ ಯೋಜನೆ ಪ್ರಾರಂಭವಾದಾಗ ಐದು ಸ್ಲೈಡ್​ ಶೋ ಬಿಡುಗಡೆಗೊಳಿಸಲಾಯಿತು. 100ಕ್ಕೂ ಹೆಚ್ಚು ರೂಪದರ್ಶಿಗಳು ಅರ್ಜಿ ಹಾಕಿದರು. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರಿಗೆ 40,000 ಯೆನ್ ಸಂಭಾವನೆ ನೀಡಿದೆವು ನಂತರ ತ್ರಿಡಿ ಕಲಾವಿದರು ಆ ರೂಪದರ್ಶಿಯ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಅತೀ ನೈಜವಾಗಿ ಕಾಣುವ ತ್ರೀಡಿ ಮಾಸ್ಕ್ ತಯಾರಿಸಿದರು. ನನ್ನ ಅಂಗಡಿಗಳಿಗೆ ಬರುವ ಗ್ರಾಹಕರು ನಿರ್ಧಿಷ್ಟ ಉದ್ದೇಶಗಳಿಗೆ ಮುಖವಾಡಗಳನ್ನು ಖರೀದಿಸದೆ ಅವುಗಳನ್ನು ಕಲಾಕೃತಿಗಳಂತೆ ಪರಿಭಾವಿಸುವುದೇ ಹೆಚ್ಚು’ ಎನ್ನುತ್ತಾರೆ ಒಕಾವಾರಾ.

Published On - 6:27 am, Fri, 18 December 20