ಅಮೆರಿಕ ರಕ್ಷಣಾ ಕಾಯ್ದೆಗೇ ಕೊಕ್ಕೆ ಹಾಕಿ ಕುಳಿತ ಟ್ರಂಪ್: ಭಾರತದ ಮೇಲೇನು ಪರಿಣಾಮ?
ಭಾರತ ಮೂಲದ ಅಮೆರಿಕ ಸಂಸದ ರಾಜಾ ಕೃಷ್ಣಮೂರ್ತಿ ಅವರು ಮಸೂದೆಯಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಗೆ ಕಡಿವಾಣ ಹಾಕುವ ತಿದ್ದುಪಡಿ ಸೂಚಿಸಿದರು. ಭಾರತಕ್ಕೆ ಸಹಕಾರಿಯಾಗಬಲ್ಲ ಈ ಮಸೂದೆ ಕಾನೂನಾಗಲೇಬೇಕೆಂಬ ಪ್ರಬಲ ಒತ್ತಾಸೆಯನ್ನು ರಾಜಾ ಕೃಷ್ಣಮೂರ್ತಿಯವರು ಹೊಂದಿದ್ದಾರೆ.
ವಾಷಿಂಗ್ಟನ್: ಭಾರತ ಸೇರಿ ತನ್ನ ಮಿತ್ರದೇಶಗಳ ರಕ್ಷಣೆಗೆ ಅನುಕೂಲವಾಗಬಲ್ಲ ‘ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ’ಗೆ (National Defense Authorization Act – NDAA) NDAA) ಅಮೆರಿಕದ ಕಾಂಗ್ರೆಸ್ ಮತ್ತು ಸೆನೆಟ್ನಲ್ಲಿ ಅನುಮೋದನೆ ದೊರೆತಿದೆ. 740 ಶತಕೋಟಿ ಡಾಲರ್ ಮೊತ್ತದ ಈ ರಕ್ಷಣಾ ಕಾಯ್ದೆಯು ತನ್ನ ನೆರೆಹೊರೆಯ ದೇಶಗಳ ಕುರಿತು ಚೀನಾ ಹೊಂದುವ ಆಕ್ರಮಣಕಾರಿ ಧೋರಣೆಗೆ ಪೆಟ್ಟು ನೀಡಲಿದೆ. ಈ ವರ್ಷದ ಮೇ ತಿಂಗಳಿನಿಂದಲೂ ಉದ್ವಿಗ್ನ ಸ್ಥಿತಿಯಲ್ಲಿಯೇ ಇರುವ ಭಾರತ-ಚೀನಾ ವಾಸ್ತವ ನಿಯಂತ್ರಣ ರೇಖೆಯಲ್ಲಿ (Line Of Actual Control – LAC) ಚೀನಾದ ಹುಮ್ಮಸ್ಸನ್ನು ಹದ್ದುಬಸ್ತಿನಲ್ಲಿಡಲು ಮಸೂದೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಕಾನೂನಾಗುತ್ತಾ ಮಸೂದೆ? ಡೊನಾಲ್ಡ್ ಟ್ರಂಪ್ ಸಹಿ ಹಾಕಿದರೆ ಮಾತ್ರ ಈ ಮಸೂದೆ ಕಾನೂನಾಗಿ ಜಾರಿಗೊಳ್ಳಲಿದೆ. ಆದರೆ ಟ್ರಂಪ್ ಈ ಮಸೂದೆಯೊಂದಿಗೆ ಸಾಮಾಜಿಕ ಜಾಲತಾಣಗಳ ನಿಯಂತ್ರಣವನ್ನೂ ಹೆಣೆದು, ಗೊಂದಲ ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಗಿರುವ ಕಾನೂನು ರಕ್ಷಣೆಯನ್ನು ರದ್ದುಗೊಳಿಸಿದರೆ ಮಾತ್ರ ಈ ಮಸೂದೆಗೆ ಸಹಿಹಾಕುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೂ ಕಳೆದ 59 ವರ್ಷಗಳಿಂದ ಅಮೇರಿಕಾ ಸಂಸತ್ತು NDAA ಕಾಯ್ದೆಯನ್ನು ಅಂಗೀಕರಿಸುತ್ತಲೇ ಬಂದಿದೆ. ಈ ಬಾರಿ ಟ್ರಂಪ್ ಏನು ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಭಾರತ ಮೂಲದ ಅಮೆರಿಕ ಸಂಸದ ರಾಜಾ ಕೃಷ್ಣಮೂರ್ತಿ ಅವರು ಮಸೂದೆಯಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಗೆ ಕಡಿವಾಣ ಹಾಕುವ ತಿದ್ದುಪಡಿ ಸೂಚಿಸಿದರು. ಭಾರತಕ್ಕೆ ಸಹಕಾರಿಯಾಗಬಲ್ಲ ಈ ಮಸೂದೆ ಕಾನೂನಾಗಲೇಬೇಕೆಂಬ ಪ್ರಬಲ ಒತ್ತಾಸೆಯನ್ನು ರಾಜಾ ಕೃಷ್ಣಮೂರ್ತಿಯವರು ಹೊಂದಿದ್ದಾರೆ. ಭಾರತದ ಭೂಪ್ರದೇಶದ ಮೇಲೆ ಆಕ್ರಮಣಕಾರಿ ಧೋರಣೆ ತಾಳುವ ಚೀನಾಕ್ಕೆ ಈ ಮಸೂದೆ ಪ್ರತಿಕೂಲವಾಗಿ ಪರಿಣಮಿಸಲಿದೆ. ಅಲ್ಲದೇ, ಭಾರತ- ಚೀನಾ ನಡುವಿನ ವಿವಾದಿತ ವಾಸ್ತವ ಗಡಿರೇಖೆಯ ವಿಚಾರದಲ್ಲಿ ಚೀನಾದ ತಂಟೆಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.
ಇತರ ದೇಶಗಳ ಜೊತೆಯೂ ಚೀನಾ ಕ್ಯಾತೆ ಚೀನಾ ಭಾರತದೊಂದಿಗೊಂದೆ ಮಾತ್ರವಲ್ಲ, ತನ್ನ ನೆರೆಯ ಇತರ ರಾಷ್ಟ್ರಗಳ ಜೊತೆಯೂ ಗಡಿ ತಕರಾರು ಹೊಂದಿದೆ. ಚೀನಾದ ಪೂರ್ವ ಮತ್ತು ದಕ್ಷಿಣ ಸಮುದ್ರಗಳಿಗೆ ಹೊಂದಿಕೊಂಡಿರುವ ಮಲೇಷಿಯಾ, ವಿಯೆಟ್ನಾಂ, ಫಿಲಿಫೈನ್ಸ್, ಬ್ರೂನಿ ಮತ್ತು ತೈವಾನ್ ದೇಶಗಳ ಜೊತೆಗೂ ಒಂದಿಲ್ಲೊಂದು ರಗಳೆ ಮಾಡುತ್ತಲೇ ಇದೆ. ಅಲ್ಲದೇ, ಹೇರಳ ತೈಲ ಮತ್ತು ಖನಿಜ ನಿಕ್ಷೇಪಗಳು ದೊರಕುವ ದ್ವೀಪಗಳ ಮೇಲೂ ತನ್ನ ಬಾವುಟ ಹಾರಿಸುವ ಹುಕಿಯಲ್ಲಿದೆ. ಈ ಮಸೂದೆ ಕಾನೂನಾಗಿ ಬದಲಾದಲ್ಲಿ ಚೀನಾ ಕ್ಯಾತೆಗೆ ಕೊಡಲಿಯೇಟು ಬೀಳುವ ನಿರೀಕ್ಷೆಯಿದೆ.
ಫೇಸ್ಬುಕ್ ವಿರುದ್ಧ ಅಮೆರಿಕ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ