AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ಶಾಖೆಗೆ ದಂಡ: ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ನೋಟ್ ಬ್ಯಾನ್ ಆದ 2016 ರ ಸಂದರ್ಭದಲ್ಲಿ ನಗರದ ವಾಸಿ ಮಹೇಶ ಎಂಬುವವರು ಬಿಎಸ್ಎನ್ಎಲ್, ವಿದ್ಯುತ್, ನೀರು ಸೇರಿದಂತೆ ಇತರೆ ಬಿಲ್ ಪಾವತಿ ಮಾಡಲು ಚೆಕ್​ಗಳನ್ನು ಬರೆದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಟ್ರೆಜರಿ ಶಾಖೆಗೆ ಹಾಕಿದ್ದರು.

SBI ಶಾಖೆಗೆ ದಂಡ: ಪರಿಹಾರ ನೀಡಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ
ಎಸ್​ಬಿಐ ಬ್ಯಾಂಕ್
sandhya thejappa
| Updated By: ಆಯೇಷಾ ಬಾನು|

Updated on: Jan 26, 2021 | 12:44 PM

Share

ವಿಜಯಪುರ: ಬ್ಯಾಂಕ್ ಹಾಕಿದ್ದ ಚೆಕ್​ಗಳನ್ನು ಸ್ವೀಕರಿಸದೇ ಗ್ರಾಹಕನಿಗೆ ವಾಪಸ್ ನೀಡಿ ಸರಿಯಾಗಿ ಸ್ಪಂದಿಸದ ಕಾರಣ ವಿಜಯಪುರ ನಗರ ಎಸ್​ಬಿಐ ಬ್ಯಾಂಕ್​ನ ಶಾಖೆಯೊಂದಕ್ಕೆ ದಂಡ ಹಾಕಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮೂರು ವರ್ಷಗಳ ಕಾಲ ಸತತ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎಸ್​ಬಿಐ ಟ್ರೆಜರಿ ಶಾಖೆಯೇ ದಂಡಕ್ಕೆ ಗುರಿಯಾದ ಶಾಖೆಯಾಗಿದೆ.

ಹಿನ್ನೆಲೆ ನೋಟ್ ಬ್ಯಾನ್ ಆದ 2016 ರ ಸಂದರ್ಭದಲ್ಲಿ ನಗರದ ವಾಸಿ ಮಹೇಶ ಎಂಬುವವರು ಬಿಎಸ್ಎನ್ಎಲ್, ವಿದ್ಯುತ್, ನೀರು ಸೇರಿದಂತೆ ಇತರೆ ಬಿಲ್ ಪಾವತಿ ಮಾಡಲು ಚೆಕ್​ಗಳನ್ನು ಬರೆದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಟ್ರೆಜರಿ ಶಾಖೆಗೆ ಹಾಕಿದ್ದರು. ಮಹೇಶರವರ ಬ್ಯಾಂಕ್ ಖಾತೆಯೂ ಇದೇ ಶಾಖೆಯಲ್ಲಿತ್ತು. ಚೆಕ್ ನೀಡಿದ ಬಳಿಕ ಅದನ್ನು ಸಂಬಂಧಿಸಿದ ಕಚೇರಿಗೆ ನೀಡದೇ ಬ್ಯಾಂಕ್ ಸಿಬ್ಬಂದಿ, ಗ್ರಾಹಕ ಮಹೇಶರವರಿಗೆ ವಾಪಸ್ ಮಾಡಿದ್ದರು. ಮೊದಲೇ ನೋಟ್ ಬ್ಯಾನ್ ಆದ ಸಂದರ್ಭ. ಜನರು ಹಣ ಪಡೆಯಲು ಸರದಿಯಲ್ಲಿ ಬ್ಯಾಂಕ್​ಗಳ ಮುಂದೆ ನಿಲ್ಲುವ ಸ್ಥಿತಿ ಉಂಟಾಗಿತ್ತು. ಈ ವೇಳೆ ತನ್ನ ಚೆಕ್​ಗಳನ್ನು ವಾಪಸ್ ನೀಡಿರುವ ಬಗ್ಗೆ ಮಹೇಶ ಬ್ಯಾಂಕ್​ಗೆ ತೆರಳಿ ವಿಚಾರಿಸಿದ್ದಾಗ ಬ್ಯಾಂಕ್ ಸಿಬ್ಬಂದಿಗಳು ಸರಿಯಾಗಿ ಸ್ಪಂದನೆ ನೀಡದೆ ಅಸಡ್ಡೆಯಿಂದ ಉತ್ತರ ನೀಡಿದ್ದರು.

ವಿವಿಧ ಬಿಲ್ ಪಾವತಿಯಾಗದ ಕಾರಣ ದಂಡ ತೆತ್ತ ಗ್ರಾಹಕ ಚೆಕ್​ಗಳು ವಾಪಸ್ ಬಂದಿದ್ದ ಕಾರಣ ಬಿಲ್ ಪಾವತಿ ಬಾಕಿಯಾಗಿ ಉಳಿದಿತ್ತು. ಬಿಲ್ ಸಕಾಲದಲ್ಲಿ ಪಾವತಿ ಆಗದ ಕಾರಣ ಮಹೇಶ ದಂಡ ಕಟ್ಟಬೇಕಾದ ಅನಿವಾರ್ಯತೆ ಉಂಟಾಗಿತ್ತು. ತಾನು ಸರಿಯಾಗಿ ಚೆಕ್ ಹಾಕಿದರೂ ಬ್ಯಾಂಕ್ ಸಿಬ್ಬಂದಿ ಚೆಕ್ ವಾಪಸ್ ನೀಡಿದ್ದು ಹಾಗೂ ಸರಿಯಾಗಿ ಸ್ಪಂದನೆ ಮಾಡದ ಕಾರಣ ದಂಡ ವಿಧಿಸುವಂತಾಯಿತು ಎಂದು ಗ್ರಾಹಕ ಮಹೇಶ ಅಸಮಾಧಾನ ವ್ಯಕ್ತಪಡಿಸಿದ್ದರು. ನನಗಾದಂತೆ  ಬೇರೆ ಯಾವುದೇ ಗ್ರಾಹಕರಿಗೂ ಈ ಸಮಸ್ಯೆ ಆಗಬಾರದು ಎಂದು ಬ್ಯಾಂಕ್ ಹಾಗೂ ಸಿಬ್ಬಂದಿ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಚೆಕ್ ಸ್ವೀಕೃತವಾಗದ ಕಾರಣ ಎಸ್​ಬಿಐ ಬ್ಯಾಂಕ್ ಹಾಗೂ ಸಿಬ್ಬಂದಿಗಳ ತಪ್ಪಿದೆ ಎಂದು ಗ್ರಾಹಕ ಮಹೇಶ 2017ರ ಮೇ 4ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರಕ್ಕೆ ದೂರು ನೀಡಿದರು. 68/2017 ಸಂಖ್ಯೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕಿನ ಖಾತೆದಾರರು ಮತ್ತು ಗ್ರಾಹಕರಾಗಿರುವ ವ್ಯಕ್ತಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಬ್ಯಾಂಕ್ ಹಾಗೂ ಸಿಬ್ಬಂದಿ ವಿಫಲವಾಗಿದೆ. ಅಲ್ಲದೇ, ಕಾರಣವಿಲ್ಲದೆ ಚೆಕ್​ಗಳನ್ನು ಹಿಂದಿರುಗಿಸಿದ್ದು ಸೇವೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ

ದಂಢ ವಿಧಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕಿನ ಖಾತೆದಾರರ ವಾದವನ್ನು ಎತ್ತಿ ಹಿಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕನಿಗೆ 10,000 ಪರಿಹಾರ ನೀಡಬೇಕು. ಜೊತೆಗೆ ಪ್ರಕರಣ ದಾಖಲು ಮಾಡಿದ ದಿನದಿಂದ ಇಂದಿನವರೆಗೆ ವಾರ್ಷಿಕವಾಗಿ ಶೇ.6 ರಷ್ಟು ಬಡ್ಡಿ ಹಣವನ್ನು ಸೇರಿಸಿ ನೀಡಬೇಕು. ಚೆಕ್​ಗಳನ್ನು ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಮಾನಸಿಕ ನೋವಿಗೆ ಪರಿಹಾರವಾಗಿ 5,000 ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣ ಖರ್ಚು ವೆಚ್ಚಕ್ಕೆಂದು 2,000 ಪರಿಹಾರ ನೀಡಬೇಕೆಂದು ಆದೇಶ ಮಾಡಿದೆ.

ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ, ಸದಸ್ಯರಾದ ಜಿ. ಎಸ್.ಕಲ್ಯಾಣಿ ಮತ್ತು ಮಹಿಳಾ ಸದಸ್ಯೆ ವಿ.ಬಿ.ಮುತಾಲಿಕ ದೇಸಾಯಿರವರನ್ನೊಳಗೊಂಡ ಆಯೋಗ ಈ ಆದೇಶ ಹೊರಡಿಸಿದೆ. ಗ್ರಾಹಕ ಮಹೇಶ ಪರವಾಗಿ ನ್ಯಾಯವಾದಿ ಆರ್.ಎಸ್.ಯಾಳಸಂಗಿಮಠ ವಾದ ಮಂಡಿಸಿದ್ದರು.

ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!