ಗೋಲಿಬಾರ್ ಮೃತರಿಗೆ ಮೊದಲು ಕೊವಿಡ್ ಟೆಸ್ಟ್, ನಂತರ ಮರಣೋತ್ತರ ಪರೀಕ್ಷೆ
ಬೆಂಗಳೂರು: ನಗರದ ಈಶಾನ್ಯ ಭಾಗದ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿ ಪೊಲೀಸ್ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದರು. ಮೃತಪಟ್ಟ ಮೂವರ ಪೈಕಿ ಇಬ್ಬರು ಡಿ.ಜೆ.ಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 20 ವರ್ಷದ ವಾಜಿದ್ ಹಾಗೂ ಏರಿಯಾದ ಶಾಂಪುರ ಮುಖ್ಯರಸ್ತೆಯ 22 ವರ್ಷದ ನಿವಾಸಿ ಯಾಸಿನ್ ಪಾಷಾ ಗೋಲಿಬಾರ್ನಲ್ಲಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಮೂರನೇ ಮೃತನ ಮಾಹಿತಿ ಇನ್ನು ದೊರೆತಿಲ್ಲ. ಇದಲ್ಲದೆ, ಗೋಲಿಬಾರ್ನಲ್ಲಿ ಸುಮಾರು 15 ಜನರಿಗೆ ಗುಂಡು ತಗಲಿದೆ ಎಂದು ತಿಳಿದುಬಂದಿದೆ. […]

ಬೆಂಗಳೂರು: ನಗರದ ಈಶಾನ್ಯ ಭಾಗದ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿ ಪೊಲೀಸ್ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದರು.
ಮೃತಪಟ್ಟ ಮೂವರ ಪೈಕಿ ಇಬ್ಬರು ಡಿ.ಜೆ.ಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 20 ವರ್ಷದ ವಾಜಿದ್ ಹಾಗೂ ಏರಿಯಾದ ಶಾಂಪುರ ಮುಖ್ಯರಸ್ತೆಯ 22 ವರ್ಷದ ನಿವಾಸಿ ಯಾಸಿನ್ ಪಾಷಾ ಗೋಲಿಬಾರ್ನಲ್ಲಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಮೂರನೇ ಮೃತನ ಮಾಹಿತಿ ಇನ್ನು ದೊರೆತಿಲ್ಲ.
ಇದಲ್ಲದೆ, ಗೋಲಿಬಾರ್ನಲ್ಲಿ ಸುಮಾರು 15 ಜನರಿಗೆ ಗುಂಡು ತಗಲಿದೆ ಎಂದು ತಿಳಿದುಬಂದಿದೆ. ಇದರಲ್ಲಿ, 5ರಿಂದ 6 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಮನೆಯಲ್ಲಿ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ಸಹ ದೊರೆತಿದೆ. ಬಂಧನದ ಭೀತಿಯಿಂದ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ನರಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇವರ ಪರಿಚಯ ಪೊಲೀಸರಿಗೂ ಸಹ ಸ್ಪಷ್ಟವಾಗಿ ಸಿಗುತ್ತಿಲ್ಲ.
ಇದೀಗ, ಗೋಲಿಬಾರ್ನಲ್ಲಿ ಮೃತಪಟ್ಟವರ ಶವ ಪರೀಕ್ಷೆ ನಡೆಯಲಿದೆ. ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ FSL ವೈದ್ಯರ ತಂಡವು ಆಗಮಿಸಿದೆ.
ಮರಣೋತ್ತರ ಪರೀಕ್ಷೆಗೆ ಮುನ್ನ ಮೃತರ ಕೊವಿಡ್ ಟೆಸ್ಟ್ ಮಾಡಲಾಗುವುದು. ರಿಪೋರ್ಟ್ ಬಂದ ಮೇಲೆ ಶವ ಪರೀಕ್ಷೆ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದ ಬಳಿ ಮೃತರ ಕುಟುಂಬ ಸದಸ್ಯರು ಬಂದಿದ್ದಾರೆ. ಶವಾಗಾರದ ಬಳಿ ಯಾಸೀನ್, ವಾಜಿದ್ ಕುಟುಂಬಸ್ಥರು ಆಗಮಿಸಿದರು.
Published On - 11:42 am, Wed, 12 August 20



