
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಾಕ್‌ಡೌನ್ ವೇಳೆ ರಾಜ್ಯ ಸರ್ಕಾರ ಮಾಡಬೇಕಾದ ಕೆಲಸ ವಿಪಕ್ಷವಾಗಿ ನಾವು ಮಾಡಿದ್ದೇವೆ ಎಂದಿದ್ದಾರೆ.
ರೈತರ ಪರವಾಗಿ ರಾಜ್ಯಪಾಲರಿಗೆ ಮನವಿ
ರೈತರಿಂದ ನೇರವಾಗಿ ನಾವೇ ತರಕಾರಿಯನ್ನು ಖರೀದಿಸಿದ್ದೇವೆ. ರೈತರ ಎಲ್ಲ ಕಷ್ಟವನ್ನು ನಮ್ಮಿಂದ ಈಡೇರಿಸುವುದಕ್ಕೆ ಆಗಿಲ್ಲ. ಕನಿಷ್ಠ ಬಿತ್ತನೆ ಬೀಜ ಖರೀದಿಸುವುದಕ್ಕೆ ಸಹಾಯ ಮಾಡಿದ್ದೇವೆ. ಆದರೆ ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಡಿಕೆಶಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ರೈತರ ಪರವಾಗಿ ನಾವು ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ದೊಡ್ಡ ಬದಲಾವಣೆ ತರಲು ಹಸಿರುಕ್ರಾಂತಿ ಉಳಿಯಬೇಕು:
ಇವತ್ತು ಇಡೀ ದೇಶದಲ್ಲಿ ದೊಡ್ಡ ಬದಲಾವಣೆ ತರುವುದಕ್ಕೆ ಹಸಿರುಕ್ರಾಂತಿ ಉಳಿಯಬೇಕು. ರೈತರನ್ನು , ಅನ್ನದಾತರನ್ನು ಉಳಿಸಬೇಕು. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ CAA, NRC ಹೀಗೆ ಅನೇಕ ಪ್ರತಿಭಟನೆಗಳು ನಡೆದಿವೆ. ಅದೇ ರೀತಿಯಲ್ಲಿ ಈಗ ಪ್ರತಿಭಟನೆ ಸಿದ್ಧವಾಗುತ್ತಿದೆ. ಬ್ರಿಟಿಷರು ದೌರ್ಜನ್ಯ ಮಾಡಿದ ಪ್ರತಿಯಾಗಿ, ಆವತ್ತು ಹೋರಾಟ ಆದಾಗ ಕಾಂಗ್ರೆಸ್ ಅವರ ಬೆಂಬಲ ನೀಡಿತ್ತು. ಮಹಾತ್ಮಾ ಗಾಂಧಿ ಅವರು ಸತ್ಯಾಗ್ರಹವನ್ನು ಮಾಡಿ ಬ್ರಿಟಿಷರಿಂದ ಮುಕ್ತಿ ಹೊಂದುವುದಕ್ಕೆ ಹೋರಾಡ ಮಾಡಿದ್ರು. ಅದೇ ರೀತಿಯಲ್ಲಿ ಈಗ ಹೋರಾಟ ಮಾಡಬೇಕಿದೆ. ಸರ್ಕಾರ ರೈತರನ್ನು ಬಹುರಾಷ್ಟ್ರೀಯ ಕಂಪನಿಗಳ ಗುಲಾಮರಾಗಿಸಲು ಮುಂದಾಗಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಇದು ಜನರ ಧ್ವನಿ, ಈ ಧ್ವನಿ, ಈ ಕೂಗು ಯಶಸ್ವಿ ಆಗ್ಲಿ:
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತರಕಾರಿ ಬೆಳೆಯುತ್ತಾರೆ. ಆದ್ರೆ ಅತೀ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಾರೆ.ನಾವು ಹೇಳಿದ ಮೇಲೆ ಜಿಯೋ ಹೊರಡಿಸಿದ್ರು, ಸರ್ಕಾರ ಇದ್ದುಕೊಂಡು ಏನ್ ಮಾಡಿದೆ? ನಮ್ಮ ಹೋರಾಟ ಅನ್ನದಾತನ ಪರವಾಗಿ. ನೀವುಗಳು ಇತಿಹಾಸದಲ್ಲಿ ಉಳಿದುಹೋಗಿತ್ತೀರಾ. ಇದು ಜನರ ಧ್ವನಿ, ಈ ಧ್ವನಿ, ಈ ಕೂಗು ಯಶಸ್ವಿ ಆಗ್ಲಿ ಎಂದು ಮಾತನಾಡುದ್ರು.
ಪ್ರಜಾಪ್ರಭುತ್ವದಲ್ಲಿ ಹೆದರಿಸುವಂತಹ ಕೆಲಸ ಮಾಡಬಾರದು:
ಜನರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ಹೀಗಾಗಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಕಾಯ್ದೆಗೆ ಸಹಿ ಹಾಕದಂತೆ ಮನವಿ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹೆದರಿಸುವಂತಹ ಕೆಲಸ ಮಾಡಬಾರದು. ನಮ್ಮ ವಿರುದ್ಧವೂ ಹಲವು ಕೇಸ್‌ಗಳು ಇವೆ, ಫೇಸ್ ಮಾಡ್ತೀವಿ. ಆದರೆ ಹೆದರಿ, ಬೆದರಿಸುವ ಕೆಲಸವನ್ನು ಮಾಡಬಾರದು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಡಿ.ಕೆ.ಶಿವಕುಮಾರ್ ಹೇಳಿದ್ರು.
Published On - 12:28 pm, Mon, 28 September 20