AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಬಂದ್ ವಿಫಲವಾಗಿದೆ, ಜನ ಜೀವನ ಯಥಾಸ್ಥಿತಿಯಲ್ಲಿದೆ: BJP

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ನಡುವೆ ಮಸೂದೆಗಳಿಂದ ರೈತರಿಗೆ ಲಾಭವಾಗುತ್ತದೆ, ನಷ್ಟವಾಗುವುದಿಲ್ಲ. ರೈತರಿಗೆ ಲಾಭವಾಗುತ್ತಿದ್ದರೂ ಏಕೆ ವಿರೋಧ ಮಾಡುತ್ತಿದ್ದೀರಿ? ಇದು ರೈತ ಪರವಾದ ಕಾಯ್ದೆ. ಬಂದ್ ಮಾಡುವ ಅಗತ್ಯವಿಲ್ಲ. ಇದು BJP ಸರ್ಕಾರಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರವಷ್ಟೇ. ಎಡಪಂಥೀಯರಿಗೆ ಕೆಲಸವೇ ಇಲ್ಲವಾಗಿದೆ. ಕರ್ನಾಟಕ ಬಂದ್ ವಿಫಲವಾಗಿದೆ. ಜನಜೀವನ ಯಥಾಸ್ಥಿತಿಯಲ್ಲಿದೆ ಎಂದು BJP ವಿಧಾನ ಪರಿಷತ್ […]

ರಾಜ್ಯದಲ್ಲಿ ಬಂದ್ ವಿಫಲವಾಗಿದೆ, ಜನ ಜೀವನ ಯಥಾಸ್ಥಿತಿಯಲ್ಲಿದೆ: BJP
KUSHAL V
| Updated By: ಸಾಧು ಶ್ರೀನಾಥ್​|

Updated on: Sep 28, 2020 | 12:05 PM

Share

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ನಡುವೆ ಮಸೂದೆಗಳಿಂದ ರೈತರಿಗೆ ಲಾಭವಾಗುತ್ತದೆ, ನಷ್ಟವಾಗುವುದಿಲ್ಲ. ರೈತರಿಗೆ ಲಾಭವಾಗುತ್ತಿದ್ದರೂ ಏಕೆ ವಿರೋಧ ಮಾಡುತ್ತಿದ್ದೀರಿ? ಇದು ರೈತ ಪರವಾದ ಕಾಯ್ದೆ. ಬಂದ್ ಮಾಡುವ ಅಗತ್ಯವಿಲ್ಲ. ಇದು BJP ಸರ್ಕಾರಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರವಷ್ಟೇ. ಎಡಪಂಥೀಯರಿಗೆ ಕೆಲಸವೇ ಇಲ್ಲವಾಗಿದೆ. ಕರ್ನಾಟಕ ಬಂದ್ ವಿಫಲವಾಗಿದೆ. ಜನಜೀವನ ಯಥಾಸ್ಥಿತಿಯಲ್ಲಿದೆ ಎಂದು BJP ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.

ಡಾಕ್ಟರ್ ಮಗ ಮಾತ್ರ ಡಾಕ್ಟರ್ ಆಗ್ಬೇಕಾ? ಇಂಜಿನಿಯರ್ ಮಗ ಮಾತ್ರ ಇಂಜಿನಿಯರ್ ಆಗ್ಬೇಕಾ ? ರೈತನ‌ ಮಗ ಡಾಕ್ಟರ್, ಇಂಜಿನಿಯರ್ ಆಗಬಾರದಾ? APMC ಕಾಯ್ದೆಯಿಂದ ರೈತರಿಗೆ ಲಾಭವಾಗುತ್ತೆ ವಿನಃ, ನಷ್ಟವಾಗಲ್ಲ. ರೈತನಿಗೆ ಲಾಭವಾಗೋದಾದರೆ ನೀವ್ಯಾಕೆ ವಿರೋಧ ಮಾಡ್ತೀರಾ? ಎಂದು BJP ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.

ನಿಮಗೆ ಹೋರಾಟ ಮಾಡೋ ಹಕ್ಕಿದೆ. ಹಾಗೆಯೇ, ತಾವು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಾಟ ಮಾಡುವ ಹಕ್ಕು ಅವರಿಗಿದೆ. ರೈತರ ಪರವಾಗಿರೋ ಕಾಯ್ದೆ ಇದು. ಇದಕ್ಕಾಗಿ ಬಂದ್ ಮಾಡೋದು ಸರಿಯಲ್ಲ. ಕಾಲ ಬದಲಾಗಿದೆ. ರಘುಪತಿ ರಾಘವ ರಾಜಾರಾಂ ‘ಪೂರಾ ವೇತನ್-ಆಧಾ ಕಾಮ್’ ಹಾಗಾಗಬಾರದು ಎಂದು BJP ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.

ಪ್ರಧಾನಿ ಎಷ್ಟು ಗಂಟೆ ಕೆಲಸ ಮಾಡ್ತಿದ್ದಾರೆ? ದೇವೇಗೌಡರು ಎಷ್ಟು ಗಂಟೆ ಕೆಲಸ ಮಾಡ್ತಾರೆ? ಸುಧಾಮೂರ್ತಿ ಎಷ್ಟು ಗಂಟೆ ಕೆಲಸ ಮಾಡ್ತಾರೆ? ಹಾಗೆಯೇ ಎಲ್ಲರೂ ಹೆಚ್ಚೆಚ್ಚು ಕೆಲಸ ಮಾಡಲು ರೆಡಿಯಾಗಬೇಕು. ಉದ್ದಿಮೆ ಮತ್ತು ಕಾರ್ಮಿಕ ಈ ಎರಡನ್ನೂ ಹೇಗೆ ಮೇಲೆತ್ತಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಬೇಕು ಅಂತಾ ರವಿಕುಮಾರ್ ಹೇಳಿದ್ದಾರೆ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ