ಚಿಕಿತ್ಸೆ ಪಡೆದಿದ್ದ ವೃದ್ಧನಿಂದ ವೈದ್ಯ ದಂಪತಿಗೆ ಬಂತು ಕೊರೊನಾ!
ರಾಮನಗರ: ವೈದ್ಯೋ ನಾರಾಯಣೋ ಹರಿ ಅಂತಾರೆ. ಇದಕ್ಕೆ ತಕ್ಕಂತೆ ನಮ್ಮ ವೈದರು ತಮ್ಮ ಜೀವದ ಹಂಗು ತೊರೆದು ಜನಸೇವೆಯಲ್ಲಿ ತೊಡಗಿದ್ದಾರೆ. ಅದೂ ಕೊರೊನಾದಂಥ ಮಹಾಮಾರಿ ಸಿಕ್ಕ ಸಿಕ್ಕಲ್ಲೆಲ್ಲಾ ನುಸುಳುವಾಗ. ಆದ್ರೆ ಹೀಗೆ ಜನಸೇವೆಯಲ್ಲಿರುವಾಗಲೇ ಕನಕಪುರದ ವೈದ್ಯ ದಂಪತಿಗೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕಿತ್ಸೆ ಪಡೆದಿದ್ದ ವೃದ್ಧನಿಂದ ವೈದ್ಯರಿಗೆ ಬಂತು ಕೊರೊನಾ ಹೌದು ಕನಕಪುರದ ಎಂಜಿ ರಸ್ತೆಯಲ್ಲಿರುವ ನವೋದಯ ಆರೋಗ್ಯ ಕೇಂದ್ರದ ವೈದ್ಯ ದಂಪತಿ ಈಗ ಕೊರೊನಾ ಸೋಂಕಿಗೆ ತಗಲಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ 85 ವರ್ಷದ ವೃದ್ಧನಿಗೆ […]
ರಾಮನಗರ: ವೈದ್ಯೋ ನಾರಾಯಣೋ ಹರಿ ಅಂತಾರೆ. ಇದಕ್ಕೆ ತಕ್ಕಂತೆ ನಮ್ಮ ವೈದರು ತಮ್ಮ ಜೀವದ ಹಂಗು ತೊರೆದು ಜನಸೇವೆಯಲ್ಲಿ ತೊಡಗಿದ್ದಾರೆ. ಅದೂ ಕೊರೊನಾದಂಥ ಮಹಾಮಾರಿ ಸಿಕ್ಕ ಸಿಕ್ಕಲ್ಲೆಲ್ಲಾ ನುಸುಳುವಾಗ. ಆದ್ರೆ ಹೀಗೆ ಜನಸೇವೆಯಲ್ಲಿರುವಾಗಲೇ ಕನಕಪುರದ ವೈದ್ಯ ದಂಪತಿಗೆ ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿಕಿತ್ಸೆ ಪಡೆದಿದ್ದ ವೃದ್ಧನಿಂದ ವೈದ್ಯರಿಗೆ ಬಂತು ಕೊರೊನಾ ಹೌದು ಕನಕಪುರದ ಎಂಜಿ ರಸ್ತೆಯಲ್ಲಿರುವ ನವೋದಯ ಆರೋಗ್ಯ ಕೇಂದ್ರದ ವೈದ್ಯ ದಂಪತಿ ಈಗ ಕೊರೊನಾ ಸೋಂಕಿಗೆ ತಗಲಾಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ 85 ವರ್ಷದ ವೃದ್ಧನಿಗೆ ನೀಡಿದ್ದ ಚಿಕಿತ್ಸೆಯೇ ವೈದ್ಯರಿಗೆ ಮುಳುವಾಗಿ ಪರಿಣಮಿಸಿದೆ. ಯಾಕಂದ್ರೆ ಚಿಕಿತ್ಸೆ ನಂತರ ವೃದ್ಧ ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಮೃತರಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವೃದ್ಧನಿಗೆ ಕೋವಿಡ್ ಸೋಂಕಿರೋದು ಖಚಿತವಾಗಿದೆ.
ಇದಾದ ನಂತರ ವೈದ್ಯ ದಂಪತಿಯನ್ನ ಕ್ವಾರಂಟೈನ್ ಮಾಡಿ ಕೋವಿಡ್ ಟೆಸ್ಟ್‌ಗೊಳಪಡಿಸಲಾಗಿತ್ತು. ಈಗ ವರದಿ ಬಂದಿದ್ದು, ವೈದ್ಯ ದಂಪತಿಗೆ ಕೊರೊನಾ ಸೋಂಕಿರೋದು ಕನ್‌ಫರ್ಮ್ ಆಗಿದೆ. ಹೀಗಾಗಿ ಅವರನ್ನ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಟೆಸ್ಟ್‌ಗೊಳಪಡಲು ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಮನವಿ ಇದರ ಜೊತೆಗೆ ಜೀಲ್ಲಾಡಳಿತ ಈಗ ಸೋಂಕು ದೃಢಪಡುವ ಮೊದಲು ಈ ವೈದ್ಯ ದಂಪತಿ ಚಿಕಿತ್ಸೆ ನೀಡಿರೋ ನೂರಾರು ರೋಗಿಗಳನ್ನ ಪತ್ತೆ ಮಾಡುವ ಕಾರ್ಯಕ್ಕೆ ಕೈಹಾಗಿದೆ. ಈ ಸಂಬಂಧ ನವೋದಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ ರೋಗಿಗಳ ವಿವರಗಳನ್ನ ಕಲೆ ಹಾಕುತ್ತಿದ್ದೆ. ನವೋದಯ ಆಸ್ಪತ್ರೆಗೆ ಜೂನ್ 6ರ ನಂತರ ಭೇಟಿ ನೀಡಿದವರು ಸ್ವಯಂ ಪ್ರೇರಿತರಾಗಿ ಬಂದು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸಾರ್ವಜನಿಕರಲ್ಲಿ ರಾಮನಗರ ಜಿಲ್ಲಾಡಳಿತ ಮತ್ತು ಕನಕಪುರ ತಾಲೂಕಾಡಳಿತ ಮನವಿ ಕೂಡಾ ಮಾಡಿವೆ.