AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಹೆಡ್​ ಕಾನ್ಸ್​ಟೇಬಲ್​ ಸಾವು: ವೈದ್ಯರು, ಸಿಬ್ಬಂದಿಯಿಂದ ಪ್ರತಿಭಟನೆ

ಕೊಪ್ಪಳ: ಒಂದು ಕಡೆ ವೈದ್ಯರ ವಿರುದ್ಧ ಆಕ್ರೋಶ.. ಮತ್ತೊಂದು ಕಡೆ ಪೊಲೀಸರ ವಿರುದ್ಧ ವೈದ್ಯರ ಧಿಕ್ಕಾರ. ನಡುವೆ ಹಲ್ಲೆಗೊಳಗಾದ ವೈದ್ಯನ ಆಕ್ರಂದನ. ನಿನ್ನೆ ರಾತ್ರಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಹೆಡ್ ಕಾನ್ಸ್‌ಟೇಬಲ್ ಒಬ್ಬರ ಸಾವು. ಕಳೆದೊಂದು ವಾರದ ಹಿಂದೆ ಕೊಪ್ಪಳ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಮಣ್ಣ ಎಂಬೋರು, ಕೊರೊನಾ ಸೋಂಕಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು. ಈ ವಿಷ್ಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿ […]

ಕೊರೊನಾದಿಂದ ಹೆಡ್​ ಕಾನ್ಸ್​ಟೇಬಲ್​ ಸಾವು: ವೈದ್ಯರು, ಸಿಬ್ಬಂದಿಯಿಂದ ಪ್ರತಿಭಟನೆ
ಆಯೇಷಾ ಬಾನು
|

Updated on:Sep 03, 2020 | 8:44 AM

Share

ಕೊಪ್ಪಳ: ಒಂದು ಕಡೆ ವೈದ್ಯರ ವಿರುದ್ಧ ಆಕ್ರೋಶ.. ಮತ್ತೊಂದು ಕಡೆ ಪೊಲೀಸರ ವಿರುದ್ಧ ವೈದ್ಯರ ಧಿಕ್ಕಾರ. ನಡುವೆ ಹಲ್ಲೆಗೊಳಗಾದ ವೈದ್ಯನ ಆಕ್ರಂದನ. ನಿನ್ನೆ ರಾತ್ರಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಹೆಡ್ ಕಾನ್ಸ್‌ಟೇಬಲ್ ಒಬ್ಬರ ಸಾವು.

ಕಳೆದೊಂದು ವಾರದ ಹಿಂದೆ ಕೊಪ್ಪಳ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಮಣ್ಣ ಎಂಬೋರು, ಕೊರೊನಾ ಸೋಂಕಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು. ಈ ವಿಷ್ಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿ ಬಂದ ಕಾನ್ಸ್‌ಟೇಬಲ್ ಕುಟುಂಬಸ್ಥರು, ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಪೇಷೆಂಟ್ ಸ್ಥಿತಿ ಸೀರಿಯಸ್ ಆಗಿದ್ರೂ ಮನೆಯವರಿಗೆ ತಿಳಿಸಿಲ್ಲ ಎಂದು ಗರಂ ಆಗಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ವಿಷ್ಯ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರು, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ರು. ಸ್ಥಳಕ್ಕೆ ಡಿಸಿ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ವೈದ್ಯ ವೀರೇಶ್, ನಮ್ಮದೇನು ತಪ್ಪಿಲ್ಲ. ರೋಗಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರ ಸಂಪರ್ಕಕ್ಕೆ ಪ್ರಯತ್ನಿಸಿದ್ವಿ. ಆದ್ರೆ ಅವರು ನೀಡಿದ್ದ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಈ ಸಂಬಂಧ ನಮ್ಮ ಬಳಿ ದಾಖಲೆಗಳಿವೆ ಅಂದ್ರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಕಿಮ್ಸ್ ನಿರ್ದೇಶಕ ವಿಜಯನಾಥ್ ಇಟಗಿ ದೌಡಾಯಿಸಿ ಬಂದ್ರು. ಪರಿಸ್ಥಿತಿಯನ್ನು ಹತೋಟಿಗೆ ತಂದ್ರು. ವೈದ್ಯರು ಮತ್ತೆ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸಿದ್ರು. ಒಟ್ನಲ್ಲಿ, ಕಾನ್ಸ್‌ಟೇಬಲ್‌ ಸಾವಿನ ವಿಚಾರದಲ್ಲಿ ಪೊಲೀಸರು ಮತ್ತು ವೈದ್ಯರು ಕಿತ್ತಾಟ ಮಾತ್ರ ಜನರಲ್ಲಿ ಚಿಂತೆ ಉಂಟುಮಾಡಿತ್ತು.

Published On - 8:38 am, Thu, 3 September 20

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್