
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಬಳಿಕ ಮಾತನಾಡಿದ ಸತೀಶ್ ಕ್ಯಾಡಬೋಮ್ಸ್ ನಟಿ ಸಂಜನಾ ಜೊತೆಗಿರುವ ನನ್ನ ಫೋಟೋ ನೋಡಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ಸಂಜನಾ ಗಲ್ರಾನಿ ನನ್ನ ಮುಂದೆ ಸಿಗರೇಟ್ ಕೂಡ ಸೇದಿಲ್ಲ. ನಾನು ಸಂಜನಾಗೆ ‘ಸುಲ್ತಾನ್’ ನಾಯಿ ಕೊಟ್ಟಿದ್ದೆ. ಅಲ್ಲಿಂದ ಈಚೆಗೆ ಸಂಜನಾಗೂ ನನಗೂ ಪರಿಚಯವಾಗಿದ್ದು. ಜೊತೆಗೆ, ನಾನು ನಾನ್‌ವೆಜ್ ಚೆನ್ನಾಗಿ ಮಾಡ್ತಿನೆಂದು ಅವರು ನನ್ನನ್ನ ಪಾರ್ಟಿಗೆ ಕರೀತಿದ್ರು. ಅವರ ಮನೆಯಲ್ಲಿ ನಾನ್‌ವೆಜ್ ಪಾರ್ಟಿ ಮಾಡುತ್ತಿದ್ದೆವು ಅಂತಾ ಹೇಳಿದ್ದಾರೆ.
ನನ್ನ ಎಲ್ಲಾ ಕಾಲ್ ರೆಕಾರ್ಡ್ ಸಿಸಿಬಿಗೆ ಕೊಟ್ಟಿದ್ದೇನೆ. ಡ್ರಗ್ಸ್ ಕೇಸ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಸಿಬಿ ವಿಚಾರಣೆ ಬಳಿಕ ಸತೀಶ್ ಕ್ಯಾಡಬೋಮ್ಸ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ Drugs ಜಾಲ: ‘ಕೋಟಿ ನಾಯಿ ಒಡೆಯ’ನಿಗೆ CCB ಬುಲಾವ್
Published On - 3:09 pm, Tue, 22 September 20