
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಹ ಉಸ್ತುವಾರಿಯಾಗಿ ಬಿಜೆಪಿಯ ತಂಡವನ್ನು ಮುನ್ನಡೆಸಲಿರುವ ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಗರದ ಬಿಜೆಪಿ ನಾಯಕರನ್ನು ಭಾನುವಾರ ಭೇಟಿಯಾದರು. ಸುಧಾಕರ್ ಅವರನ್ನು ದುಬ್ಬಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಎಂ.ರಘುನಂದನ್ರಾವ್ ಸ್ವಾಗತಿಸಿದರು.
Interacted with @BJP4Telangana
GHMC Election in-charges Shri @RaghunandanraoM garu (Malkajgiri), Shri @EPeddiReddy garu (Kukatpally), Shri Dharma Rao garu (Uppal) & Shri Chada Suresh Reddy garu (Quthbullapur) last night and discussed various strategies.#GHMCWithBJP @byadavbjp pic.twitter.com/SlCopj2ats— Dr Sudhakar K (@mla_sudhakar) November 22, 2020
ಹೈದರಾಬಾದ್ನಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಗಳಾದ ರಘುನಂದನ್ರಾವ್, ಪೆದ್ದಿರೆಡ್ಡಿ, ಧರ್ಮಾರಾವ್, ಚಡ ಸುರೇಶ್ ರೆಡ್ಡಿ ಅವರನ್ನು ಭೇಟಿಯಾದ ಸುಧಾಕರ್, ವಿವಿಧ ಚುನಾವಣಾ ಕಾರ್ಯತಂತ್ರಗಳನ್ನು ಚರ್ಚಿಸಿದರು. ರಘುನಂದನ್ರೊಂದಿಗಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಸುಧಾಕರ್ ತೆಲಂಗಾಣದ ಭ್ರಷ್ಟ ಟಿಆರ್ಎಸ್ ಸರ್ಕಾರದ ಅಂತ್ಯಕ್ಕೆ ದುಬ್ಬಾಕ ಕ್ಷೇತ್ರದಲ್ಲಿ ನಮ್ಮ ಪಕ್ಷವು ಸಾಧಿಸಿದ ಜಯವೇ ಮುನ್ನುಡಿಯಾಗಲಿದೆ. ತೆಲಂಗಾಣದ ಜನರು ಬಿಜೆಪಿಗೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದ್ದಾರೆ.
On my arrival at Hyderabad, met Shri @RaghunandanraoM garu who won the Dubbaka by-election recently in Telangana. Dubbaka is the beginning of the end of TRS and it's corrupt government. People of Hyderabad will bless @BJP4Telangana in the #GHMCElections.#GHMCWithBJP pic.twitter.com/GiYtjvfwhO
— Dr Sudhakar K (@mla_sudhakar) November 21, 2020
Published On - 1:18 pm, Sun, 22 November 20