ಅಮಿತ್ ಶಾ ದಕ್ಷಿಣ ದಂಡಯಾತ್ರೆ: ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುತ್ತೇವೆ ಎಂದ AIDMK
ತಮಿಳುನಾಡು: ಚುನಾವಣಾ ಚಾಣಕ್ಯ ಅಮಿತ್ ಶಾನ ದಕ್ಷಿಣ ದಂಡಯಾತ್ರೆ ಶುರುವಾಗಿದೆ. ತಮಿಳುನಾಡಿಗೆ ಭೇಟಿ ನೀಡಿರೋ ಅಮಿತ್ ಶಾ, ಯೋಜನೆಗೆ ಚಾಲನೆ ನೀಡೋ ಜೊತೆಗೆ, ಮೆಗಾ ಪ್ಲ್ಯಾನ್‌ಗೆ ಕೈ ಹಾಕಿದ್ದಾರೆ. ತಮಿಳುನಾಡಿನಲ್ಲಿಂದು ಎರಡನೇ ದಿನದ ಪ್ರವಾಸ! ಹೌದು.. ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ತಮಿಳುನಾಡು ಪ್ರವಾಸದಲ್ಲಿದ್ದಾರೆ. ನಿನ್ನೆಯಿಂದ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಎಂಟ್ರಿ ಕೊಟ್ಟ ಮೊದಲ ದಿನವೇ ಅಮಿತ್ ಶಾ, ರಸ್ತೆಯಲ್ಲೇ ನಡೆದು ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ. […]
ತಮಿಳುನಾಡು: ಚುನಾವಣಾ ಚಾಣಕ್ಯ ಅಮಿತ್ ಶಾನ ದಕ್ಷಿಣ ದಂಡಯಾತ್ರೆ ಶುರುವಾಗಿದೆ. ತಮಿಳುನಾಡಿಗೆ ಭೇಟಿ ನೀಡಿರೋ ಅಮಿತ್ ಶಾ, ಯೋಜನೆಗೆ ಚಾಲನೆ ನೀಡೋ ಜೊತೆಗೆ, ಮೆಗಾ ಪ್ಲ್ಯಾನ್‌ಗೆ ಕೈ ಹಾಕಿದ್ದಾರೆ.
ತಮಿಳುನಾಡಿನಲ್ಲಿಂದು ಎರಡನೇ ದಿನದ ಪ್ರವಾಸ! ಹೌದು.. ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ತಮಿಳುನಾಡು ಪ್ರವಾಸದಲ್ಲಿದ್ದಾರೆ. ನಿನ್ನೆಯಿಂದ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಎಂಟ್ರಿ ಕೊಟ್ಟ ಮೊದಲ ದಿನವೇ ಅಮಿತ್ ಶಾ, ರಸ್ತೆಯಲ್ಲೇ ನಡೆದು ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ.
ತಮಿಳುನಾಡಲ್ಲಿ ‘ಕಮಲ’ ಅರಳಿಸಲು ಮೆಗಾ ಪ್ಲ್ಯಾನ್! ದಿಗ್ಗಜ ನಾಯಕರನ್ನು ಕಳೆದುಕೊಂಡ ಬಳಿಕ ಅಂದ್ರೆ, ಜಯಲಲಿತಾ ಮತ್ತು ಕರುಣಾನಿಧಿ ನಿಧನದ ನಂತ್ರ ತಮಿಳುನಾಡಲ್ಲಿ 2021ಕ್ಕೆ ಮೊದಲ ಸಾರ್ವತ್ರಿಕ ಚುನಾವಣೆ ನಡೀತಿದೆ. ಈ ಎಲೆಕ್ಷನ್‌ಗೆ ಈಗಲೇ ರಣತಂತ್ರ ಹೆಣೆದಿರೋ ಅಮಿತ್ ಶಾ, ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಇಂದು ಸೂಪರ್ ಸ್ಟಾರ್ ರಜಿನಿ ಕಾಂತ್ ಭೇಟಿಯಾಗ್ತಾರಾ ಅಮಿತ್ ಶಾ? ಇನ್ನೂ ಸೂಪರ್ ಸ್ಟಾರ್ ತಲೈವಾ ರಜಿನಿಕಾಂತ್‌ರನ್ನ ಅಮಿತ್ ಶಾ, ಭೇಟಿಯಾಗ್ತಾರೆ ಎನ್ನಲಾಗಿದೆ. ಆದ್ರೆ ಭೇಟಿಗೆ ಯಾವುದೇ ಟೈಮ್ ನಿಗದಿಯಾಗಿಲ್ಲ. ಒಂದ್ವೇಳೆ ಭೇಟಿಯಾದ್ರೆ, ರಜಿನಿಕಾಂತ್ ಜೊತೆಗೆ ಅಮಿತ್ ಶಾ ಮೈತ್ರಿ ಮಾತುಕತೆ ನಡೆಸ್ತಾರಾ.. ತಲೈವಾ ಬಿಜೆಪಿ ಸೇರ್ಪಡೆ ಬಗ್ಗೆ ಮಾತುಕತೆ ಮಾಡ್ತಾರಾ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.
ಬಿಜೆಪಿಯೊಂದಿಗೆ ಮುಂದುವರಿದ ಆಡಳಿತಾರೂಢ ಎಐಡಿಎಂಕೆ ಮೈತ್ರಿ ಮುಂದಿನ ನಾಲ್ಕೈದು ತಿಂಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುವುದಾಗಿ ತಮಿಳುನಾಡಿನ ಆಡಳಿತಾರೂಢ ಎಐಡಿಎಂಕೆ ಸ್ಪಷ್ಟಪಡಿಸಿದೆ. ಸಿಎಂ ಪಳನಿಸ್ವಾಮಿ ನಿನ್ನೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವುದಾಗಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಪ್ರವಾಸದಲ್ಲಿರುವ ಅಮಿತ್ ಶಾ ಚೆನ್ನೈ ಮೆಟ್ರೋ ಎರಡನೇ ಹಂತ ಮತ್ತು ನೂತನ ಜಲಾಶಯ ಸೇರಿ ವಿವಿಧ ಯೋಜನೆಗಳ ಒಟ್ಟು 67 ಸಾವಿರ ಕೋಟಿ ರೂಪಾಯಿಯ ಪ್ರಾಜೆಕ್ಟ್‌ಗೆ ಚಾಲನೆ ನೀಡಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ತಮಿಳುನಾಡಿನಲ್ಲಿ ಪಕ್ಷ ಬೇರೂರುವಂತೆ ಮಾಡಲು ಅಮಿತ್ ಶಾ ತಂತ್ರ ರೂಪಿಸುತ್ತಿದ್ದಾರೆ.