Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಹುಟ್ಟುಹಬ್ಬ ಆಚರಿಸಲು ಹೋದವ.. ಹೆಣವಾಗಿ ಪತ್ತೆ, ಎಲ್ಲಿ?

ಬಾಗಲಕೋಟೆ: ಮಾರಕಾಸ್ತ್ರಗಳಿಂದ ಕೊಚ್ಚಿ ಟಂಟಂ ವಾಹನದ ಚಾಲಕನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ನೀರಲಕೇರಿ ಗ್ರಾಮದ ಬಳಿ ನಡೆದಿದೆ. ಮೊನ್ನೆ ರಾತ್ರಿ ನಡೆದ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಂಗಪ್ಪ ಚಂದ್ರಶೇಖರ ದಳವಾಯಿ(22) ಕೊಲೆಯಾದ ಚಾಲಕ. ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಮೊನ್ನೆ ರಾತ್ರಿ ರಂಗಪ್ಪ ಸ್ನೇಹಿತ ಕೃಷ್ಣಗೌಡರ‌ ಹುಟ್ಟುಹಬ್ಬವನ್ನ ಆಚರಿಸಿದ್ದನು. ಬಳಿಕ ಮನೆಗೆ ಹೋಗೋದಾಗಿ ಹೇಳಿದ್ದ ಯುವಕನ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಕೊಲೆಗೈದವರು ಯಾರು ಎಂಬ ಬಗ್ಗೆ ಮಾಹಿತಿ ಸಿಗದ‌ ಹಿನ್ನೆಲೆಯಲ್ಲಿ ಪೊಲೀಸರು ಮೃತನ […]

ಗೆಳೆಯನ ಹುಟ್ಟುಹಬ್ಬ ಆಚರಿಸಲು ಹೋದವ.. ಹೆಣವಾಗಿ ಪತ್ತೆ, ಎಲ್ಲಿ?
Follow us
KUSHAL V
|

Updated on:Aug 01, 2020 | 9:25 AM

ಬಾಗಲಕೋಟೆ: ಮಾರಕಾಸ್ತ್ರಗಳಿಂದ ಕೊಚ್ಚಿ ಟಂಟಂ ವಾಹನದ ಚಾಲಕನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ನೀರಲಕೇರಿ ಗ್ರಾಮದ ಬಳಿ ನಡೆದಿದೆ. ಮೊನ್ನೆ ರಾತ್ರಿ ನಡೆದ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ರಂಗಪ್ಪ ಚಂದ್ರಶೇಖರ ದಳವಾಯಿ(22) ಕೊಲೆಯಾದ ಚಾಲಕ. ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಮೊನ್ನೆ ರಾತ್ರಿ ರಂಗಪ್ಪ ಸ್ನೇಹಿತ ಕೃಷ್ಣಗೌಡರ‌ ಹುಟ್ಟುಹಬ್ಬವನ್ನ ಆಚರಿಸಿದ್ದನು. ಬಳಿಕ ಮನೆಗೆ ಹೋಗೋದಾಗಿ ಹೇಳಿದ್ದ ಯುವಕನ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

ಕೊಲೆಗೈದವರು ಯಾರು ಎಂಬ ಬಗ್ಗೆ ಮಾಹಿತಿ ಸಿಗದ‌ ಹಿನ್ನೆಲೆಯಲ್ಲಿ ಪೊಲೀಸರು ಮೃತನ ಸ್ನೇಹಿತರು ಮತ್ತು ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ.

Published On - 9:24 am, Sat, 1 August 20