ಈ ಕುಡುಕ ಟೈಟ್ ಆದ ಬಾಡಿನ ಹಾಲ್ಟ್ ಮಾಡಿದ್ದೆಲ್ಲಿ ಗೊತ್ತಾ?

|

Updated on: May 05, 2020 | 1:17 PM

ಬೆಂಗಳೂರು: ಎಣ್ಣೆ ಅಂಗಡಿ ಓಪನ್ ಆಗಿದ್ದೇ ತಡ ಮದ್ಯಪ್ರಿಯರು ಫುಲ್ ಖುಷ್ ಆಗಿದ್ದಾರೆ. ಕಂಠಪೂರ್ತಿ ಎಣ್ಣೆ ಬಿಡ್ಕೊಂಡು, ಬಾಡಿ ಬ್ಯಾಲೆನ್ಸ್ ಮಾಡ್ಕೊಂಡು ತೆಲಾಡಿದ್ದಾರೆ. ಮದ್ಯದ ಅಮಲಿನಲ್ಲಿ ಮನೆಗೆ ಹೋಗಲಾಗದೆ ರಸ್ತೆಗಳಲ್ಲೇ ಮಲಗಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಎಣ್ಣೆ ಕುಡಿದು ಫುಲ್ ಟೈಟ್ ಆಗಿ ವಿದ್ಯುತ್ ಕಂಬದ ಮೇಲೆ ಮಲಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಮೂತ್ತೂರು ರೈಲ್ವೆ ಹಳಿ ಪಕ್ಕದ ಕಂಬವನ್ನು ಹತ್ತಿ ತೆಲಾಡಿದ್ದಾನೆ. ಅದೃಷ್ಟವಶಾತ್ ಕಂಬಕ್ಕೆ ವಿದ್ಯುತ್ ಸಂಪರ್ಕ ನೀಡಿರದ ಕಾರಣ ಭಾರಿ ಅನಾಹುತ ತಪ್ಪಿದೆ. ಗೌರಿಬಿದನೂರು ಮೂಲದ […]

ಈ ಕುಡುಕ ಟೈಟ್ ಆದ ಬಾಡಿನ ಹಾಲ್ಟ್ ಮಾಡಿದ್ದೆಲ್ಲಿ ಗೊತ್ತಾ?
Follow us on

ಬೆಂಗಳೂರು: ಎಣ್ಣೆ ಅಂಗಡಿ ಓಪನ್ ಆಗಿದ್ದೇ ತಡ ಮದ್ಯಪ್ರಿಯರು ಫುಲ್ ಖುಷ್ ಆಗಿದ್ದಾರೆ. ಕಂಠಪೂರ್ತಿ ಎಣ್ಣೆ ಬಿಡ್ಕೊಂಡು, ಬಾಡಿ ಬ್ಯಾಲೆನ್ಸ್ ಮಾಡ್ಕೊಂಡು ತೆಲಾಡಿದ್ದಾರೆ. ಮದ್ಯದ ಅಮಲಿನಲ್ಲಿ ಮನೆಗೆ ಹೋಗಲಾಗದೆ ರಸ್ತೆಗಳಲ್ಲೇ ಮಲಗಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಎಣ್ಣೆ ಕುಡಿದು ಫುಲ್ ಟೈಟ್ ಆಗಿ ವಿದ್ಯುತ್ ಕಂಬದ ಮೇಲೆ ಮಲಗಿದ್ದಾನೆ. ದೊಡ್ಡಬಳ್ಳಾಪುರ ನಗರದ ಮೂತ್ತೂರು ರೈಲ್ವೆ ಹಳಿ ಪಕ್ಕದ ಕಂಬವನ್ನು ಹತ್ತಿ ತೆಲಾಡಿದ್ದಾನೆ.

ಅದೃಷ್ಟವಶಾತ್ ಕಂಬಕ್ಕೆ ವಿದ್ಯುತ್ ಸಂಪರ್ಕ ನೀಡಿರದ ಕಾರಣ ಭಾರಿ ಅನಾಹುತ ತಪ್ಪಿದೆ. ಗೌರಿಬಿದನೂರು ಮೂಲದ ಈ ಕುಡುಕನ ಹುಚ್ಚಾಟ ನೋಡಿದ ಜನ ಭಯಭೀತರಾಗಿದ್ದರು. ಕೂಡಲೇ ಸ್ಥಳೀಯರು ಕಂಬವೇರಿದ್ದ ಕುಡುಕನನ್ನ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ನಂತರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

Published On - 11:32 am, Tue, 5 May 20