ಬೆಂಗಳೂರು: ಒಂಬತ್ತು ವರ್ಷಗಳ ಬಳಿಕ ನಾಳೆ ಅಪರೂಪದಲ್ಲಿ ಅಪರೂಪವಾದ ಕಂಕಣ ಸೂರ್ಯ ಗ್ರಹಣ ಗೋಚರಿಸುತ್ತೆ. ಇದನ್ನು ಕಣ್ತುಂಬಿಕೊಳ್ಳಬೇಕು ಅಂತಾ ವಿಜ್ಞಾನಿಗಳು, ಜನ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ದೃಶ್ಯ ಕಣ್ತುಂಬಿಕೊಳ್ಳೋಕೆ ಕಂಟಕ ಎದುರಾಗಿದೆ. ಸದ್ಯ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರೋದ್ರಿಂದ ಕಂಕಣ ಸೂರ್ಯ ಗ್ರಹಣ ಗೋಚರವಾಗೋದು ಡೌಟ್ ಆಗಿದೆ. ಮೋಡಗಳು ಸೂರ್ಯನನ್ನು ಸುತ್ತುವರೆದಿವೆ.
ನಿನ್ನೆ ನೆಹರೂ ತಾರಾಲಯದ ನಿರ್ದೇಶಕರು 90 ರಷ್ಟು ಗ್ರಹಣ ಗೋಚರವಾಗುತ್ತೆ. ಆದರೆ ಹೆಚ್ಚು ಮೋಡಗಳಿದ್ದರೆ ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದರು. ಇಂದೂ ಕೂಡ ನಗರದೆಲ್ಲೆಡೆ ಮೋಡ ಮುಸುಕಿದ ವಾತಾವರಣ ಇದೆ. ಅಲ್ಲದೆ ಇನ್ನೂ ಎರಡು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ನಾಳೆ ಗ್ರಹಣ ಗೋಚರವಾಗೋದು ಅನುಮಾನವಾಗಿದೆ.