ಬಾಗಲಕೋಟೆ: ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಶೂರ್ಪಾಲಿ ಗ್ರಾಮದ ತೋಟದ ಮನೆಗಳು, ಪುನರ್‌ವಸತಿ ಕೇಂದ್ರದ ಬಳಿಯಿರುವ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ.
ಹೊಲಗಳು ನೀರಿನಿಂದ ತುಂಬಿ ಹೋಗಿವೆ. ಮನೆಗಳು, ಬೆಳೆಗಳು ಜಲಾವೃತವಾಗಿವೆ. ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಹೈರಾಣಾಗಿದ್ದಾರೆ. ಕಳೆದ ವರ್ಷ ಆದ ಕೃಷ್ಣಾ ಪ್ರವಾಹ ಮಾಸುವ ಮುನ್ನವೇ ಈಗ ಮತ್ತೆ ಇಂತಹ ಸಂಕಷ್ಟ ಎದುರಿಸುತ್ತಿರುವುದು ಜನರಿಗೆ ಆತಂಕ ತಂದಿದೆ.
Published On - 11:20 am, Fri, 10 July 20