ಎಡಿನ್ಬರ್ಗ್ನ ಡ್ಯೂಕ್ ಮತ್ತು ರಾಣಿ ಎಲಜಬೆತ್ ಅವರ ಪತಿ ಪ್ರಿನ್ಸ್ ಫಿಲಿಪ್ ತಮ್ಮ 99 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಕ್ಕಿಂಗ್ಹ್ಯಾಮ್ ಅರಮನೆಯಿಂದ ಇಂದು ಹೊರಬಿದ್ದಿರುವ ಪ್ರಕಟಣೆ ಹೀಗೆ ಹೇಳುತ್ತದೆ: ಮಹಾರಾಣಿ ಅವರು ಪ್ರೀತಿಯ ಪತಿ ಎಡಿನ್ಬರ್ಗ್ನ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರ ಇಂದು ಬೆಳಗ್ಗೆ ವಿಂಡ್ಸರ್ ಕ್ಯಾಸಲ್ನಲ್ಲಿ ಶಾಂತ ರೀತಿಯಲ್ಲಿ ಕೊನೆಯುಸಿರೆಳೆದರು ಎಂದು ಬಹಳ ದುಃಖದಿಂದ ಪ್ರಕಟಿಸಿದ್ದಾರೆ.
ರಾಜಮನೆತನದ ಇತರ ಸದಸ್ಯರಿಗೆ ಪ್ರಿನ್ಸ್ ಫಿಲಿಪ್ ಅವರ ಮರಣದ ತಿಳಿಸಿಲಾಗಿದೆ ಮತ್ತು ದೇಶದಾದ್ಯಂತ ರಾಷ್ಟ್ರಧ್ವಜವನ್ನು ಆರ್ಧಕ್ಕೆ ಹಾರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಬ್ರಿಟಿಷ್ ಇತಿಹಾಸದಲ್ಲೇ ಸುದೀರ್ಘ ಅವಧಿವರೆಗೆ ಮಹಾರಾಣಿಯೊಬ್ಬರ ಸಂಗಾತಿಯೆನಿಸಿಕೊಂಡಿದ್ದ ಫಿಲಿಪ್ ಅವರು ಕಳೆದ ಕೆಲ ದಿನಗಳಿಂದ ಕಿಂಗ್ ಎ್ವಡ್ವರ್ಡ್ ಆಸ್ಪತ್ರೆಯಲ್ಲಿ ಸೋಂಕೊಂದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ತಿಂಗಳ ಕಾಲ ಚಿಕಿತ್ಸೆಯ ನಂತರ ಅವರು ಅರಮನೆಗೆ ವಾಪಸ್ಸಾಗಿ ಕುಟುಂಬವನ್ನು ಸೇರಿಕೊಂಡಿದ್ದರು. ರಾಜಮನೆತನದ ಮೂಲಗಳ ಪ್ರಕಾರ ಅವರು ಯಾವತ್ತೂ 30 ದಿನಗಳ ಕಾಲ ಆಸ್ಪತ್ರೆಯಲ್ಲಿರಲಿಲ್ಲ. ಅವರನ್ನು ಯಾವುದೋ ಸೋಂಕಿನ ಕಾರಣ ಅಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಹೃದ್ರೋಗದಿಂದ ಸಹ ಬಳಲುತ್ತಿದ್ದರಿಂದ ಹೃದಯದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಪ್ರಿನ್ಸ್ ಫಿಲಿಪ್ ಅವರು ತಮ್ಮ 70 ವರ್ಷಗಳ ಪತ್ನಿ ರಾಣಿ ಎಲಜಬೆತ್, ನಾಲ್ಕರು ಮಕ್ಕಳು- ಪ್ರಿನ್ಸ್ ಚಾರ್ಲ್ಸ್, ರಾಜಕುಮಾರಿ ಆ್ಯನ್, ಪ್ರಿನ್ಸ್ ಆಂಡ್ರ್ಯೂ ಮತ್ತು ಪ್ರಿನ್ಸ್ ಎಡ್ವರ್ಡ್ ಮತ್ತು18 ಮೊಮ್ಮಕ್ಕಳು ಮತ್ತು 9 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
It is with deep sorrow that Her Majesty The Queen has announced the death of her beloved husband, His Royal Highness The Prince Philip, Duke of Edinburgh.
His Royal Highness passed away peacefully this morning at Windsor Castle. pic.twitter.com/XOIDQqlFPn
— The Royal Family (@RoyalFamily) April 9, 2021
ರಾಣಿ ಎಲಿಜಬೆತ್ ತಮ್ಮ 95ನೇ ಹುಟ್ಟುಹಬ್ಬ ಆಚರಿಸಿಕೊಂಡ 12 ದಿನಗಳ ನಂತರ ಮತ್ತು ತಮ್ಮ 100 ನೇ ಹುಟ್ಟುಹಬ್ದ ದ ಎರಡು ತಿಂಗಳು ಮೊದಲು ಪ್ರಾಣ ತ್ಯಜಿಸಿದ್ದಾರೆ. ಅವರ ಸಾವಿನ ನಂತರ ದೇಶದಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿಲಾಗಿದೆ.
ರಾಣಿ ಎಲಿಜಬೆತ್ ತಮ್ಮ ಪತಿಯನ್ನು ‘ನನ್ನ ಶಕ್ತಿ ಮತ್ತು ಬದುಕಿನ ಉದ್ದೇಶ’ ಎಂದು ಹೇಳುತ್ತಿದ್ದರು. ಇವರಿಬ್ಬರು ಮದುವೆಯಾಗಿದ್ದು 1947ರಲ್ಲಿ, ಆಗ ರಾಣಿಯ ವಯಸ್ಸು 21 ಮತ್ತು ಫಿಲಿಪ್ ವಯಸ್ಸು 26 ಆಗಿತ್ತು, ಗ್ರೀಸ್ ಮೂಲದವರಾಗಿದ್ದ ಫಿಲಿಪ್ ಮದುವೆಯ ನಂತರ ತಮ್ಮ ಮೂಲ ಪೌರತ್ವವನ್ನು ತ್ಯಜಿಸಿ ಬ್ರಿಟಷ್ ಪ್ರಜೆಯಾದರು. ನಂತರ ರಾಣಿ ತಂದೆಯಾಗಿದ್ದ 4ನೇ ಜಾರ್ಜ್, ಫಿಲಿಪ್ ಅವರನ್ನು ಎಡಿನ್ಬರ್ಗ್ನ ರಾಜನಾಗಿ ಘೋಷಿಸಿದರು.
ಬ್ರಿಟಿಷ್ ಮೂಲಗಳ ಪ್ರಕಾರ ರಾಣಿ ಎಲಿಜಬೆತ್ ಅವರ ತಾಯಿಗೆ, ಫಿಲಿಪ್ ಬ್ರಿಟಿಷ್ ಪ್ರಜೆಯಾಗಿರದ ಕಾರಣ ತಮ್ಮ ಮಗಳು ಅವರನ್ನು ವರಿಸುವುದು ಇಷ್ಟವಿರಲಿಲ್ಲ. ಅವರು ಫಿಲಿಪ್ರನ್ನು ‘ಅಲೆಮಾರಿ’ ಎಂದು ಉಲ್ಲೇಖಿಸುತ್ತಿದ್ದರು. ಅವರ ವಿರೋಧದ ನಡುವೆಯೂ ರಾಣಿ ಎಲಿಜಬೆತ್ ಮತ್ತು ಫಿಲಿಪ್ ಅವರ ಮದುವೆ ವೆಸ್ಟ್ಮಿನ್ಸ್ಟರ್ ಅಬ್ಬಿಯಲ್ಲಿ ಭಾರಿ ವಿಜೃಂಭಣೆಯೊಂದಿಗೆ ನಡೆಯಿತು. ದಂಪತಿಗೆ ಪ್ರಪಂಚದೆಲ್ಲೆಡೆಯಿಂದ ಸುಮಾರು 2,500 ಕ್ಕೂ ಹೆಚ್ಚು ಉಡುಗೊರೆಗಳು ಬಂದವೆಂದು ಹೇಳಲಾಗುತ್ತದೆ.
ಪ್ರಿನ್ಸ್ ಫಿಲಿಪ್ ಅವರ ಸಾವಿಗೆ ಬ್ರಿಟಿಷ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಶೋಕ ವ್ಯಕ್ತಪಡಿಸಿದ್ದಾರೆ. ಪ್ರಿನ್ಸ್ ಫಿಲಿಪ್ ಅವರ ಸಾವು ಅತೀವ ದುಖಃವನ್ನುಂಟು ಮಾಡಿದೆ. ಅವರ ಅಸಾಧಾರಣ ಬದುಕು ಮತ್ತು ಮಾಡಿದ ಕೆಲಸ ಬಗ್ಗೆ ಯೋಚಿಸುತ್ತಿರುವೆ. ಮಹಾರಾಣಿಯವರಿಗೆ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಜಾನ್ಸನ್ ಹೇಳಿದ್ದಾರೆ.
‘ಒಬ್ಬ ನುರಿತ ಕ್ಯಾರೇಜ್ ಡ್ರೈವರ್ನಂತೆ ಅವರು ರಾಜಮನೆತ ಮತ್ತು ಅರಸೊತ್ತಿಗೆ ನಿಭಾಯಿಸಲು ನೆರವಾಗಿದ್ದರು ಮತ್ತು ಅವರ ಸಹಾಯವು ರಾಷ್ಟ್ರೀಯ ಬದುಕಿನ ಸಂತೋಷಕ್ಕೆ ಒಂದು ಸಂಸ್ಥೆಯಾಗಿ ಕೆಲಸ ಮಾಡಿದೆ. ಮಹಾರಾಣಿಯವರ ಶೋಕದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂತಾಪಗಳನ್ನು ಸೂಚಿಸುತ್ತೇವೆ, ಫಿಲಿಪ್ ಅವರ ಅಸಾಧಾರಣ ಬದುಕು ಮತ್ತು ಮಾಡಿದ ಕೆಲಸಕ್ಕೆ ನಾವು ಒಂದು ರಾಷ್ಟ್ರವಾಗಿ ಮತ್ತು ಒಂದು ಅರಸೊತ್ತಿಗೆಯಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದು ಜಾನ್ಸನ್ ಹೇಳಿದ್ದಾರೆ.
ಭಾರತದ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಫಿಲಿಪ್ ಅವರ ಸಾವಿನ ಬಗ್ಗೆ ದುಖಃ ವ್ಯಕ್ತಪಡಿಸಿದ್ದಾರೆ, ತಮ್ಮ ಟ್ವೀಟ್ನಲ್ಲಿ ಅವರು, ‘ಎಡಿನ್ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರ ನಿಧನ ಹೊಂದಿರುವ ಈ ಶೋಕದ ಸಮಯದಲ್ಲಿ ಬ್ರಿಟಿಷ್ ಜನತೆಗೆ ನನ್ನ ಸಂತಾಪಗಳನ್ನು ಸೂಚಿಸಿತ್ತೇನೆ. ಸೇನೆಯಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದ ನಂತರ ಅವರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಅವರ ಅತ್ಮಕ್ಕೆ ಶಾಂತಿ ಸಿಗಲಿ,’ ಎಂದಿದ್ದಾರೆ.
My thoughts are with the British people and the Royal Family on the passing away of HRH The Prince Philip, Duke of Edinburgh. He had a distinguished career in the military and was at the forefront of many community service initiatives. May his soul rest in peace.
— Narendra Modi (@narendramodi) April 9, 2021
(Duke of Edinburgh Prince Philip passes away at 99, PM Modi condoles his death)
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ
Published On - 7:22 pm, Fri, 9 April 21