ಮದುವೆ ಮನೆಯಲ್ಲಿ ಗುಂಡಿನ ಸದ್ದು; ಭಗ್ನ ಪ್ರೇಮಿಯ ಕೃತ್ಯಕ್ಕೆ ವಧು ಕುಟುಂಬ ಕಂಗಾಲು

ಮದುವೆ ಪೊಲೀಸ್ ಭದ್ರತೆಯಲ್ಲಿ ನೆರವೇರಿತು. ರಾಜೇಶ್​ ಈ ಹಿಂದೆ ಹಲವು ಕೇಸ್​ಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದಾನೆ. ಈಗ ಮತ್ತೊಮ್ಮೆ ಆತನ ವಿರುದ್ಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಮನೆಯಲ್ಲಿ ಗುಂಡಿನ ಸದ್ದು; ಭಗ್ನ ಪ್ರೇಮಿಯ ಕೃತ್ಯಕ್ಕೆ ವಧು ಕುಟುಂಬ ಕಂಗಾಲು
ಮದುವೆಮನೆ
Edited By:

Updated on: Jan 09, 2021 | 3:49 PM

ಕಾರವಾರ: ಭಗ್ನಪ್ರೇಮಿಯೊಬ್ಬ ಹುಡುಗಿಯ ಮದುವೆ ದಿನ, ಆಕೆಯ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ.

ಇಂದು ದಿವ್ಯಾ ಮತ್ತು ಪ್ರಕಾಶ್​ ಮದುವೆ ನಿಶ್ಚಯವಾಗಿತ್ತು. ಬೆಳಗ್ಗೆ ವಧುವಿನ ಮನೆಯಲ್ಲಿ ಭರ್ಜರಿ ಮದುವೆ ತಯಾರಿ ನಡೆದಿತ್ತು. ಆದರೆ ಒಮ್ಮೆಲೇ ಮನೆಗೆ ನುಗ್ಗಿದ ರಾಜೇಶ್​ ಗಣಪತಿ ಗಾಂವ್ಕರ್​ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಈ ರಾಜೇಶ್​ ದಿವ್ಯಾಳನ್ನು ಮದುವೆಯಾಗುವ ಆಸೆ ಹೊಂದಿದ್ದ.

ಅಷ್ಟೇ ಅಲ್ಲ, ಪದೇಪದೆ ತನ್ನನ್ನು ವಿವಾಹವಾಗುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಮದುವೆಗೆ ಒಪ್ಪಿರಲಿಲ್ಲ. ಇದೇ ಸಿಟ್ಟಿಗೆ ಇಂದು ವಧುವಿನ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಯುವತಿಯ ಕುಟುಂಬ ತೀವ್ರ ಆತಂಕ್ಕೆ ಒಳಗಾಗಬೇಕಾಯಿತು. ನಂತರ ಮದುವೆ ಪೊಲೀಸ್ ಭದ್ರತೆಯಲ್ಲಿ ನೆರವೇರಿತು.

ರಾಜೇಶ್​ ಈ ಹಿಂದೆ ಹಲವು ಕೇಸ್​ಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದಾನೆ. ಈಗ ಮತ್ತೊಮ್ಮೆ ಆತನ ವಿರುದ್ಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಟ್​ ಹಿಡಿದು ಸಕ್ರಿಯ ರಾಜಕೀಯಕ್ಕೆ ರೀಎಂಟ್ರಿ ಕೊಟ್ರ ಸಂತೋಷ್ ಲಾಡ್! ಕಾಂಗ್ರೆಸ್ಸಿಗೋ ಫುಲ್ ಕನ್ಫ್ಯೂಶನ್

Published On - 3:48 pm, Sat, 9 January 21