ಮಮತಾದೀ, ಯಾಕೆ ಅಷ್ಟು ಹೆದರಿದ್ದೀರಿ? ಏನಾಯಿತು?: ದೀದಿಗೆ ಕುಟುಕಿದ ಜೆ.ಪಿ. ನಡ್ಡಾ
ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಸದ್ದಡಗಿಸುವ ಕಾರ್ಯದಲ್ಲಿ ಎಡೆಬಿಡದೆ ತೊಡಗಿಕೊಂಡಂತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಕ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಇಂದು ಪಶ್ಚಿಮ ಬಂಗಾಳ ಭೇಟಿ ನೀಡಿದ್ದಾರೆ.
ಕೋಲ್ಕತ್ತಾ: ನಾವು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು. ಪಶ್ಚಿಮ ಬಂಗಾಳದ ಬರ್ಧಮನ್ ಎಂಬಲ್ಲಿ ನಡ್ಡಾ ಮಾತನಾಡಿದ್ದಾರೆ. ಮಮತಾದೀ, ಯಾಕೆ ಅಷ್ಟು ಹೆದರಿದ್ದೀರಿ? ಏನಾಯಿತು? ಎಂದು ಬೆಂಗಾಲಿ ಭಾಷೆಯಲ್ಲಿ ವ್ಯಂಗ್ಯವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯನ್ನು ಕುಟುಕಿದರು.
ಬರ್ಧಮನ್ನ ರಾಧಾ ಗೋವಿಂದ್ ದೇವಾಲಯದ ಭೇಟಿ ಬಳಿಕ ಮಾತನಾಡಿದ ನಡ್ಡಾ, ಇಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿರುವ ಜನರನ್ನು ನೋಡಿದರೆ ಮಮತಾ ಮನೆಗೆ ಹೋಗುತ್ತಾರೆ.. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಸದ್ದಡಗಿಸುವ ಕಾರ್ಯದಲ್ಲಿ ಎಡೆಬಿಡದೆ ತೊಡಗಿಕೊಂಡಂತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಕ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಇಂದು ಪಶ್ಚಿಮ ಬಂಗಾಳ ಭೇಟಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಪ್ರದೇಶದಲ್ಲಿ ‘ಏಕ್ ಮುತ್ತೊ ಚಾಲ್’ (ಬೊಗಸೆ ತುಂಬಾ ಅಕ್ಕಿ) ಎಂಬ ಹೊಸ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಈ ಆಂದೋಲನದಂತೆ, ಬಿಜೆಪಿ ಕಾರ್ಯಕರ್ತರು, ರಾಜ್ಯದ 48,000 ಹಳ್ಳಿಗಳ, ರೈತರ ಮನೆಗೆ ಭೇಟಿ ನೀಡಿ ಅಕ್ಕಿ ಸಂಗ್ರಹಿಸಲಿದ್ದಾರೆ. ಈ ಆಂದೋಲನವು ಇಂದು ಆರಂಭವಾಗಿ, ಜನವರಿ 24ರ ವರೆಗೆ ಸಾಗಲಿದೆ.
ಬಳಿಕ, ಸಂಗ್ರಹವಾದ ಅಕ್ಕಿಯನ್ನು ಬಳಸಿ, ಸಾರ್ವಜನಿಕ ಊಟ ತಯಾರಿಸಿ ಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜನವರಿ 25ರಿಂದ 30ರ ಅವಧಿಯಲ್ಲಿ, ಸಂಗ್ರಹವಾದ ಅಕ್ಕಿಯಿಂದ ತಯಾರಿಸಿದ ಊಟವನ್ನು ರೈತ ಕುಟುಂಬಗಳಿಗೆ ಮಾತ್ರವಲ್ಲದೆ, ಇತರ ಬಡ ಜನರಿಗೂ ಒದಗಿಸುವ ಬಗ್ಗೆ ಹೇಳಲಾಗಿದೆ.
ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಕಟು ಧೋರಣೆ ತೋರಿರುವ ಮಮತಾ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಈ ಅಸ್ತ್ರ ಪ್ರಯೋಗಿಸಿದೆ. ಈ ವರ್ಷ ಏಪ್ರಿಲ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಾಗೂ ಪ್ರಸ್ತುತ ನಡೆಯುತ್ತಿರುವ ರೈತರ ಚಳುವಳಿಯ ಹಿನ್ನೆಲೆಯಲ್ಲೂ ಈ ಕಾರ್ಯಕ್ರಮವು ವಿಶೇಷ ಪ್ರಾತಿನಿಧ್ಯ ಪಡೆದುಕೊಂಡಿದೆ.
ಮಧ್ಯಾಹ್ನ ರೈತರೊಬ್ಬರ ಮನೆಯಲ್ಲಿ ಭೋಜನ ಸ್ವೀಕರಿಸಿರುವ ಜೆ.ಪಿ. ನಡ್ಡಾ ಬಳಿಕ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಹಾಗೂ ಇತರ ರಾಜ್ಯ ಬಿಜೆಪಿ ನಾಯಕರು ಜೊತೆಗಿದ್ದಾರೆ.
Mamata Ji, ato bhoi keno? Ki hoyeche? (Mamata Ji, why so scared? What happened?) … BJP will come to power: BJP President JP Nadda during a rally in Bardhaman, #WestBengal pic.twitter.com/ljRrhBqHid
— ANI (@ANI) January 9, 2021
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ: ಪಶ್ಚಿಮ ಬಂಗಾಳದಲ್ಲಿ ಗುಡುಗಿದ ಅಮಿತ್ ಶಾ
Published On - 3:24 pm, Sat, 9 January 21