ನೀವು ಫಾ..ಸ್ಟ್ ಫುಡ್ ಪ್ರಿಯರಾ? ಹಾಗಾದ್ರೆ ಹುಷಾರ್! ಮೊದಲು ಹೋಗಿ ಶ್ವಾಸಕೋಶದ ಆರೋಗ್ಯ ಪರೀಕ್ಷೆ ಮಾಡಿಸಿ

| Updated By: ಸಾಧು ಶ್ರೀನಾಥ್​

Updated on: Jan 29, 2021 | 9:55 AM

ರಾಜಧಾನಿಯಲ್ಲಿ ಮತ್ತೊಂದು ರೋಗದ ಅಬ್ಬರ ಹೆಚ್ಚಾಗುತ್ತಿದೆ. ಅದೊಂದು ಅಭ್ಯಾಸದಿಂದ ನೀವೂ ಸಹ ಆ ರೋಗದ ಬಲೆಯಲ್ಲಿ ಬೀಳ ಬಹುದು. ನೀವು ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಸಂಭವಿಸೋದು ಗ್ಯಾರಂಟಿ. ಹಾಗಾಗಿ ಎಚ್ಚರದಿಂದಿರಿ.

ನೀವು ಫಾ..ಸ್ಟ್ ಫುಡ್ ಪ್ರಿಯರಾ? ಹಾಗಾದ್ರೆ ಹುಷಾರ್! ಮೊದಲು ಹೋಗಿ ಶ್ವಾಸಕೋಶದ ಆರೋಗ್ಯ ಪರೀಕ್ಷೆ ಮಾಡಿಸಿ
Follow us on

ಬೆಂಗಳೂರು: ನೀವು ಫಾಸ್ಟ್ ಫುಡ್ ಪ್ರಿಯರಾ? ಬಾಯಿ ಚಪ್ಪರಿಸ್ಕೊಂಡು ಗೋಬಿ, ನೂಡಲ್ಸ್ ತಿಂತೀರಾ? ಹಾಗಾದ್ರೆ ಹುಷಾರ್! ಮೊದಲು ಹೋಗಿ ಶ್ವಾಸಕೋಶದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕಂದ್ರೆ ‘ಫಾಸ್ಟ್ ಫುಡ್’ ತಿನ್ನುವವರಿಗೆ ‘ಕ್ಯಾನ್ಸರ್’ ಶಾಕ್ ನೀಡುತ್ತಿದೆ.

ಹೌದು ಸಿಲಿಕಾನ್ ಸಿಟಿ ಜನರನ್ನ ಶ್ವಾಸಕೋಶದ ಕ್ಯಾನ್ಸರ್ ಕಾಡುತ್ತಿದೆ. ಫಾಸ್ಟ್ ಫುಡ್ ಸೇವಿಸುವವರಲ್ಲಿ ಈ ರೋಗ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆಯಂತೆ ಈ ಬಗ್ಗೆ ಟಿವಿ9ಗೆ ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರಿಂದ ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ.

ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಲು ಫಾಸ್ಟ್ ಫುಡ್ ಕಾರಣವಂತೆ. ಬಿಜಿ ಲೈಫ್​ನಿಂದಾಗಿ ಮನೆಯಲ್ಲಿ ಅಡುಗೆ ಮಾಡಲಾಗದೆ ಆಚೆ ಫಾಸ್ಟ್ ಫುಡ್ ತಿನ್ನುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ರಾಜಧಾನಿ ಬೆಂಗಳೂರಿನಲ್ಲೇ ಅತಿಹೆಚ್ಚು ‘ಕ್ಯಾನ್ಸರ್’ ಕೇಸ್​ಗಳು ಕಂಡು ಬಂದಿವೆ. ಹೀಗಾಗಿ ನೀವೂ ಕೂಡ ಫಾಸ್ಟ್ ಫುಡ್ ಪ್ರಿಯರಾಗಿದ್ದು ಇದರ ಸೇವನೆ ಹೆಚ್ಚಾಗಿ ಮಾಡ್ತಿದ್ರೆ ನಿಮ್ಮ ಶ್ವಾಸಕೋಶ ಆರೋಗ್ಯವಾಗಿದೆಯಾ ಅಂತಾ ಪರೀಕ್ಷಿಸಿಕೊಳ್ಳಿ.

ಹೊತ್ತು ಗೊತ್ತಿಲ್ಲದೆ ನಿದ್ದೆ ಮಾಡುವುದು ಒಳ್ಳೆಯದಲ್ಲ; ಮಲಗುವ ವಿಧಾನವನ್ನು ಹೀಗೆ ರೂಪಿಸಿಕೊಳ್ಳಿ