ಹ್ಯಾಂಡಿ ಕ್ರಾಫ್ಟ್​ಗೆ 15 ಕೋಟಿ ಹಣ ವಂಚಿಸಿದ್ದ ಆರೋಪಿ ED ಬಲೆಗೆ

ಬೆಂಗಳೂರು: ಹ್ಯಾಂಡಿಕ್ರಾಫ್ಟ್ ಎಫ್ ಡಿ ವಂಚನೆ ಪ್ರಕರಣ ಸಂಬಂಧ ನಾಗಲಿಂಗ ಸ್ವಾಮಿಯನ್ನು ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನಾಗಲಿಂಗಸ್ವಾಮಿ ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ಧ ಸುಮಾರು 15 ಕೋಟಿ ಹಣ ವಂಚನೆ ಮಾಡಿದ್ದ. ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ದ ಒಟ್ಟು ಹದಿನೈದು ಕೋಟಿ ಹಣವನ್ನು ವಿಜಯ ಬ್ಯಾಂಕ್​ನಲ್ಲಿ FD ಇಡಲಾಗಿತ್ತು. ಬ್ಯಾಂಕ್ ಮತ್ತು ಹ್ಯಾಂಡಿ ಕ್ರಾಫ್ಟ್ ನಡುವೆ ಮಧ್ಯವರ್ತಿ ಯಾಗಿದ್ದ ನಾಗಲಿಂಗ ಸ್ವಾಮಿ FD ಇಟ್ಟ ಏಳು ದಿನದಲ್ಲಿ ನಕಲಿ ಸರ್ಕಾರಿ ಲೆಟರ್ ಮತ್ತು MD ಸಹಿ ಬಳಿಸಿ ಹಣವನ್ನು […]

ಹ್ಯಾಂಡಿ ಕ್ರಾಫ್ಟ್​ಗೆ 15 ಕೋಟಿ ಹಣ ವಂಚಿಸಿದ್ದ ಆರೋಪಿ ED ಬಲೆಗೆ

Updated on: Sep 23, 2020 | 7:57 AM

ಬೆಂಗಳೂರು: ಹ್ಯಾಂಡಿಕ್ರಾಫ್ಟ್ ಎಫ್ ಡಿ ವಂಚನೆ ಪ್ರಕರಣ ಸಂಬಂಧ ನಾಗಲಿಂಗ ಸ್ವಾಮಿಯನ್ನು ED ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ನಾಗಲಿಂಗಸ್ವಾಮಿ ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ಧ ಸುಮಾರು 15 ಕೋಟಿ ಹಣ ವಂಚನೆ ಮಾಡಿದ್ದ. ಹ್ಯಾಂಡಿ ಕ್ರಾಫ್ಟ್​ಗೆ ಸೇರಿದ್ದ ಒಟ್ಟು ಹದಿನೈದು ಕೋಟಿ ಹಣವನ್ನು ವಿಜಯ ಬ್ಯಾಂಕ್​ನಲ್ಲಿ FD ಇಡಲಾಗಿತ್ತು. ಬ್ಯಾಂಕ್ ಮತ್ತು ಹ್ಯಾಂಡಿ ಕ್ರಾಫ್ಟ್ ನಡುವೆ ಮಧ್ಯವರ್ತಿ ಯಾಗಿದ್ದ ನಾಗಲಿಂಗ ಸ್ವಾಮಿ FD ಇಟ್ಟ ಏಳು ದಿನದಲ್ಲಿ ನಕಲಿ ಸರ್ಕಾರಿ ಲೆಟರ್ ಮತ್ತು MD ಸಹಿ ಬಳಿಸಿ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ..

ವಿಜಯ ಬ್ಯಾಂಕ್ ಮ್ಯಾನೇಜರ್ , ಹ್ಯಾಂಡಿ ಕ್ರಾಫ್ಟ್ ಎಂಡಿ ಸೇರಿ ಹಲವು ಜನರು ಈ ಅಕ್ರಮದಲ್ಲಿ ಭಾಗಿಯಾಗಿದ್ರು. ಈ ಕುರಿತು ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ 2019 ರ ಆಗಸ್ಟ್​ನಲ್ಲಿ ವಂಚನೆ ಕೇಸ್ ದಾಖಲಾಗಿತ್ತು. ಬಳಿಕ CIDಗೆ ಕೇಸ್ ವರ್ಗಾವಣೆ ಮಾಡಿಲಾಯಿತು. ಕೋಟಿ ಕೋಟಿ ಸರ್ಕಾರದ ಹಣ ವಂಚನೆ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತುಕೊಂಡಿದ್ದ ಇಡಿ ಅಧಿಕಾರಿಗಳು ಸದ್ಯ ನಾಗಲಿಂಗ ಸ್ವಾಮಿಯನ್ನು ಅರೆಸ್ಟ್ ಮಾಡಿದ್ದಾರೆ.