ಫೀ ಕಟ್ಟುವಂತೆ ಒತ್ತಾಯಿಸುವ ಶಾಲೆ ಕಾಲೇಜುಗಳಿಗೆ ರಾಜ್ಯ ಸರ್ಕಾರ ಏನು ಮಾಡುತ್ತೆ ಗೊತ್ತಾ?

|

Updated on: Jul 18, 2020 | 9:04 PM

ಬೆಂಗಳೂರು: ರಾಜ್ಯ ಈಗ ಕೊರೊನಾ ಸಂಕಷ್ಟನ್ನು ಎದುರಿಸುತ್ತಿದೆ, ಹಾಗೇನೇ ಸಾಮನ್ಯ ಜನ ಕೂಡಾ, ಇಂಥ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಂದ ಫೀಯನ್ನು ಕಟ್ಟಿಸಿಕೊಳ್ಳಬಾರದು ಎಂದು ಸರ್ಕಾರ ಶಾಲಾ-ಕಾಲೇಜುಗಳಿಗೆ ಸೂಚಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡಾ, ಒಂದು ವೇಳೆ ಶಾಲಾ-ಕಾಲೆಜುಗಳು ಫೀ ಕಟ್ಟುವಂತೆ ನೋಟಿಸ್‌ ನೀಡಿದರೆ, ಒತ್ತಾಯ ಮಾಡಿದ್ರೆ ಕೂಡಾ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ ಎಂದಿದ್ದಾರೆ. ಇಷ್ಟೆ ಅಲ್ಲ ಕಟ್ಟಡ […]

ಫೀ ಕಟ್ಟುವಂತೆ ಒತ್ತಾಯಿಸುವ ಶಾಲೆ ಕಾಲೇಜುಗಳಿಗೆ ರಾಜ್ಯ ಸರ್ಕಾರ ಏನು ಮಾಡುತ್ತೆ ಗೊತ್ತಾ?
Follow us on

ಬೆಂಗಳೂರು: ರಾಜ್ಯ ಈಗ ಕೊರೊನಾ ಸಂಕಷ್ಟನ್ನು ಎದುರಿಸುತ್ತಿದೆ, ಹಾಗೇನೇ ಸಾಮನ್ಯ ಜನ ಕೂಡಾ, ಇಂಥ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಂದ ಫೀಯನ್ನು ಕಟ್ಟಿಸಿಕೊಳ್ಳಬಾರದು ಎಂದು ಸರ್ಕಾರ ಶಾಲಾ-ಕಾಲೇಜುಗಳಿಗೆ ಸೂಚಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡಾ, ಒಂದು ವೇಳೆ ಶಾಲಾ-ಕಾಲೆಜುಗಳು ಫೀ ಕಟ್ಟುವಂತೆ ನೋಟಿಸ್‌ ನೀಡಿದರೆ, ಒತ್ತಾಯ ಮಾಡಿದ್ರೆ ಕೂಡಾ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ ಎಂದಿದ್ದಾರೆ.

ಇಷ್ಟೆ ಅಲ್ಲ ಕಟ್ಟಡ ನಿಧಿ, ಮನರಂಜನಾ ನಿಧಿ, ಕ್ರೀಡಾ ನಿಧಿ, ಆ ನಿಧಿ, ಈ ನಿಧಿ ಅಂತಾ ಇತ್ಯಾದಿಗಳ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಪೋಷಕರಿಂದ ಶಾಲಾ ಕಾಲೇಜುಗಳು ವಸೂಲು ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಇನ್ನೆರಡು ಮೂರು ದಿನಗಳಲ್ಲಿ ಸುತ್ತೋಲೆ ಹೊರಡಿಸಲಿದೆ ಎಂದು ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

Published On - 8:56 pm, Sat, 18 July 20