
ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಕೆರೆಯಲ್ಲಿ ಕುಳಿತಿದ್ದ ಹುಲಿಯನ್ನು ಆನೆ ಅಟ್ಟಾಡಿಸಿ ಓಡಿಸಿದ ಅಪರೂಪದ ದೃಶ್ಯ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾಹವನ್ನು ತೀರಿಸಲು ಆನೆ ಕೆರೆ ಬಳಿ ಬಂದಿತ್ತು. ಇದೇ ಸಮಯದಲ್ಲಿ ಕೆರೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಕಂಡು ಅದನ್ನು ಅಲ್ಲಿಂದ ಓಡಿಸಲು ಆನೆ ಅಟ್ಟಾಡಿಸಿಕೊಂಡು ಬೆನ್ನು ಹತ್ತಿದೆ. ಈ ದೃಶ್ಯಾವಳಿಗಳನ್ನು ಕಂಡ ಪ್ರವಾಸಿಗರು ಮಂತ್ರ ಮುಗ್ಧರಾದ್ರು.
ಸಫಾರಿಗೆ ಹೋಗುವ ಪ್ರವಾಸಿಗರಿಗೆ ಪ್ರಾಣಿಗಳ ಸಂಘರ್ಷ ದೃಶ್ಯಗಳನ್ನು ಸೆರೆಹಿಡಿಯುವುದು ಒಂದು ರೀತಿಯ ಹವ್ಯಾಸ. ಇಂತಹ ಪ್ರವಾಸಿಗರು ಮೈಸೂರಿನ ನಾಗರಹೊಳೆಗೆ ಬಂದಿದ್ದು, ಆನೆ ಮತ್ತು ಹುಲಿ ಸಂಘರ್ಷವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಕುರಿಗಾಹಿಯನ್ನು ತಿಂದು ಮುಗಿಸಿದ್ದ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Published On - 12:36 pm, Sun, 6 December 20