ಇಂದು ಅಂಬೇಡ್ಕರ್​ ಮಹಾ ಪರಿನಿರ್ವಾಣ ದಿನ: ಸಂವಿಧಾನ ಕರ್ತೃವಿಗೆ ನಾಯಕರ ಕೃತಜ್ಞತೆ

ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ನಮ್ಮನ್ನಗಲಿ ಇಂದಿಗೆ 64ನೇ ವರ್ಷ. ಅವರ ನಿಧನದ ದಿನವನ್ನು ಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ.

  • Publish Date - 12:21 pm, Sun, 6 December 20 Edited By: Ghanashyam D M | ಡಿ.ಎಂ.ಘನಶ್ಯಾಮ
ಇಂದು ಅಂಬೇಡ್ಕರ್​ ಮಹಾ ಪರಿನಿರ್ವಾಣ ದಿನ: ಸಂವಿಧಾನ ಕರ್ತೃವಿಗೆ ನಾಯಕರ ಕೃತಜ್ಞತೆ
ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪ್ರಧಾನಿ ಮೋದಿ ನಮಸ್ಕರಿಸಿದರು.

ದೆಹಲಿ: ಡಾ. ಬಿ.ಆರ್. ಅಂಬೇಡ್ಕರ್ ಅವರ 64 ನೇ ಮಹಾ ಪರಿನಿರ್ವಾಣ ದಿನದಂದು ದೇಶದ ನಾಯಕರು, ರಾಜಕಾರಣಿಗಳು ಸಂವಿಧಾನ ಕರ್ತೃನನ್ನು ನೆನೆದಿದ್ದಾರೆ. ದೇಶದ ಜನರು ನಡೆಯಬೇಕಾದ ದಾರಿಯನ್ನು ತಮ್ಮ ಮಾತು, ಕೃತಿ, ಸಂವಿಧಾನದ ಮೂಲಕ ಸ್ಪಷ್ಟವಾಗಿ ದಾಖಲಿಸಿ ಹೋದ ವ್ಯಕ್ತಿತ್ವವನ್ನು ಟ್ವಿಟರ್​ನಲ್ಲಿ ನೆನಪು ಮಾಡಿಕೊಂಡಿದ್ದಾರೆ.

ಅಂಬೇಡ್ಕರ್ ಅವರ ಚಿಂತನೆ ಮತ್ತು ಆದರ್ಶಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ. ಅವರು ದೇಶದ ಕುರಿತು ಕಂಡಿದ್ದ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಿದೆ ಎಂದು ಪ್ರಧಾನಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.ತಾರತಮ್ಯ ನಿವಾರಣೆಯೇ ಅಂಬೇಡ್ಕರ್ ಆಶಯ: ರಾಹುಲ್ ಗಾಂಧಿ

ಡಾ ಅಂಬೇಡ್ಕರ್ ಅವರನ್ನು ಸ್ಮರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೇಶದಲ್ಲಿ ಎಲ್ಲಾ ಬಗೆಯ ತಾರತಮ್ಯಗಳನ್ನು ಇಲ್ಲವಾಗಿಸುವತ್ತ ಕಾರ್ಯೋನ್ಮುಖರಾಗುವುದು ಅಂಬೇಡ್ಕರ್​ರಿಗೆ ಗೌರವ ಸಲ್ಲಿಸಿದಂತೆ’ ಎಂದು ಬರೆದುಕೊಂಡಿದ್ದಾರೆ.

 

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಯಡಿಯೂರಪ್ಪ
ವಿಧಾನಸೌಧದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

ಅಂಬೇಡ್ಕರ್ ಚಿಂತನೆಗಳು ನಮ್ಮ ಅಸ್ತ್ರಗಳಾಗಬೇಕು: ಸಿದ್ದರಾಮಯ್ಯ
ಪರಿನಿರ್ವಾಣ ದಿನದಂದು ಅಂಬೇಡ್ಕರ್​ ಅವರನ್ನು ನೆನೆದಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ‘ಕೆಡವಿ ಹಾಕುವ, ಸುಟ್ಟುಹಾಕುವ ಮನುಷ್ಯ ವಿರೋಧಿ ಸಂಸ್ಕೃತಿ ವಿರುದ್ಧ ಹೋರಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಗಳು ನಮ್ಮ ಕೈಗಳಲ್ಲಿನ‌ ಅಸ್ತ್ರಗಳಾಗಬೇಕು. ಬಾಬಾಸಾಹೇಬರ ಪರಿನಿರ್ವಾಣದ ದಿನ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಮಾಡೋಣ’ ಎಂದು ಟ್ವೀಟ್ ಮಾಡಿದ್ದಾರೆ.

ಅಂಬೇಡ್ಕರ್ ಇರದಿದ್ದರೆ ಇಂತಹ ಸಂವಿಧಾನ ಬರ್ತಿರಲಿಲ್ಲ-ಸಿದ್ದರಾಮಯ್ಯ

ಇದನ್ನೂ ಓದಿ: ಹಿಂದೂ, ಮುಸ್ಲಿಂ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ತೇಜಸ್ವಿ ಸೂರ್ಯ-ಪ್ರಿಯಾಂಕ್ ಖರ್ಗೆ ಟ್ವಿಟರ್ ವಾರ್