Explainer | ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಹಿಂದಿದೆ ದೇಶಾಭಿಮಾನದ ಆಶಯ

ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಅರ್ಪಿಸುವ ಉದ್ದೇಶ ಕೂಡ ಆಚರಣೆಯ ಹಿಂದಿದೆ.

Explainer | ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಹಿಂದಿದೆ ದೇಶಾಭಿಮಾನದ ಆಶಯ
ಸಾಂದರ್ಭಿಕ ಚಿತ್ರ
Follow us
Skanda
| Updated By: ಆಯೇಷಾ ಬಾನು

Updated on: Dec 07, 2020 | 6:20 AM

ದೇಶಾದ್ಯಂತ ಇಂದು (ಡಿ.7) ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು (Armed Forces Flag Day) ನಡೆಯುತ್ತಿದೆ. ಭಾರತೀಯ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಅರ್ಪಿಸುವ ಉದ್ದೇಶ ಕೂಡ ಆಚರಣೆಯ ಹಿಂದಿದೆ.

ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶಕ್ಕಾಗಿ ಹೋರಾಡುತ್ತಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಡಿಸೆಂಬರ್​ ತಿಂಗಳಾದ್ಯಂತ ಆಚರಣೆ ಮಾಡುವುದಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಘೋಷಿಸಿದ್ದರು. ಆದಾಗ್ಯೂ ಔಪಚಾರಿಕವಾಗಿ ಡಿ.7ರಂದು ಧ್ವಜ ದಿನಾಚರಣೆ ಮಾಡಲಾಗುತ್ತಿದೆ.

ಆರಂಭವಾಗಿದ್ದು ಹೇಗೆ?

ಅದು 1949ರ ಸಮಯ. ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದು ಎರಡು ವರ್ಷಗಳು ಕಳೆದಿದ್ದವು. ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ದೊಡ್ಡ ಸವಾಲಾಗಿತ್ತು. ಜೊತೆಗೆ ಸೈನಿಕರ ಶ್ರೇಯೋಭಿವೃದ್ಧಿ ಮಾಡುವುದು ಕೂಡ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿತ್ತು. ಸೈನಿಕರಿಗಾಗಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲ ಸರ್ಕಾರಕ್ಕೆ ಹುಟ್ಟಿಕೊಂಡಿತ್ತು. ಆಗ ಡಿಸೆಂಬರ್​ 7ಅನ್ನು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು. ಅಂತೆಯೇ ಪ್ರತಿವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಪುಟ್ಟ ಧ್ವಜವನ್ನು ಜನರಿಗೆ ನೀಡಿ, ಅವರು ಕೊಡುವಷ್ಟು ದೇಣಿಗೆ ಪಡೆಯಲಾಗುತ್ತದೆ. ಹೀಗೆ ಸಂಗ್ರಹಿಸಿದ ಹಣವನ್ನು ಸೈನಿಕರು ಹಾಗೂ ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ.

ಕಳೆದ ವರ್ಷ ₹ 47 ಕೋಟಿ ಸಂಗ್ರಹ

ವರ್ಷದಿಂದ ವರ್ಷಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನದ ನಿಧಿಗೆ ಹರಿದು ಬರುತ್ತಿರುವ ಹಣದ ಪ್ರಮಾಣ ಹೆಚ್ಚುತ್ತಲೇ ಇದೆ. 2019-20ರ ಅವಧಿಯಲ್ಲಿ ಈ ನಿಧಿಗೆ ಬರೋಬ್ಬರಿ ₹ 47 ಕೋಟಿ ಬಂದಿತ್ತು. 2020-21ರ ಅವಧಿಯಲ್ಲಿ ಈ ಮೊತ್ತ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಬಾರಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ₹ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಉದ್ದೇಶ ಏನು?

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಣೆಯ ಹಿಂದೆ ನಾನಾ ಕಾರಣಗಳಿವೆ. ಸೈನಿಕರಿಗೆ ಗೌರವ ಸಲ್ಲಿಕೆ ಮಾಡುವುದು ಈ ದಿನದ ಆಚರಣೆಯ ಮೂಲ ಉದ್ದೇಶ. ಇದರ ಜೊತೆಗೆ, ಯುದ್ಧದಲ್ಲಿ ಗಾಯಗೊಂಡವರಿಗೆ ಪುನರ್ವಸತಿ, ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣ, ನಿವೃತ್ತ ಸೈನಿಕರು ಮತ್ತು ಅವರ ಕುಟುಂಬಗಳ ಪುನರ್ವಸತಿ ಮತ್ತು ಕಲ್ಯಾಣ ಈ ಆಚರಣೆಯ ಉದ್ದೇಶಗಳಲ್ಲೊಂದು.

– ರಾಜೇಶ

ಕೋವಿಡ್‌ ಸಂಕಷ್ಟದಲ್ಲೂ 22222 ಅಡಿ ಶಿಖರದ ಮೇಲೆ ಭಾರತದ ಧ್ವಜ ಹಾರಿಸಿದ ಸೈನಿಕರು