AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ ಮತ್ತು ಅವರ ಒಂದು ವರ್ಷದ ಮಗು ಸ್ಥಳದಲ್ಲೇ ಸಾವು

ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ ಮತ್ತು ಅವರ ಒಂದು ವರ್ಷದ ಮಗು ಸ್ಥಳದಲ್ಲೇ ಸಾವು

ಅರುಣ್​ ಕುಮಾರ್​ ಬೆಳ್ಳಿ
|

Updated on:May 06, 2025 | 10:35 AM

ಅಪಘಾತ ನಡೆದು ಅರ್ಧ ಗಂಟೆಯ ನಂತರ ಅಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದೆ ಎಂದು ಸಂಬಂಧಿಕರು ಹೇಳುತ್ತಾರೆ. ಆದರೆ, ಅನಿಸಾ, ಅಯಾಜ್ ಮತ್ತು ಮಗು ಅಪಘಾತ ನಡೆದ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹುಡುಗಿಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಕರಿಂದ ಅಪಘಾತದ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿಲ್ಲ.

ಬೆಳಗಾವಿ, ಮೇ 6: ನಿನ್ನೆ ರಾತ್ರಿ ನಡೆದ ಭೀಕರ ರಸ್ತೆ ದುರ್ಘಟನೆಯೊಂದರಲ್ಲಿ ಪತಿ, ಪತ್ನಿ ಮತ್ತು ಅವರ ಒಂದು ವರ್ಷದ ಮಗು ಸಾವನ್ನಪ್ಪಿದ್ದಾರೆ. ದುರ್ದೈವಿಗಳ ಸಂಬಂಧಿಕರು ಹೇಳುವ ಪ್ರಕಾರ ತವರು ಮನೆಗೆ ಹೋಗಿದ್ದು ಪತ್ನಿಯನ್ನು ಮನೆಗೆ ಕರೆತರಲು ಬೆಳಗಾವಿಯಲ್ಲಿ ಬಟ್ಟೆ ಅಂಗಡಿ (cloth store) ಇಟ್ಟುಕೊಂಡಿರುವ ಅಯಾಜ್ ಕಾರಲ್ಲಿ ಹೋಗಿದ್ದರು. ವಾಪಸ್ಸು ಬರುವಾಗ ಕಾರೊಂದನ್ನು ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಅಯಾಜ್, ಅನಿಸಾ ಮತ್ತು ಅವರ ಮಗು ಸ್ಥಳದಲ್ಲೇ ಮೃತಪಟ್ಟರೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಹುಡುಗಿಯ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಇದನ್ನೂ ಓದಿ: ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ ಮೂವರ ಸಾವು; ಓರ್ವ ಮಗುವಿನ‌‌ ಸ್ಥಿತಿ ಗಂಭೀರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 06, 2025 10:14 AM