ಯಾದಗಿರಿ: ಬುಲೆರೊ ಹಾಗೂ ಸಾರಿಗೆ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಬುಲೆರೊ ಮತ್ತು ಬಸ್ ನಡುವಿನ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಯಾದಗಿರಿ, ಏಪ್ರಿಲ್ 11: ಬುಲೆರೊ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ (accident) ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದವರಾದ ಬುಲೆರೊ ಚಾಲಕ ಶರಣಪ್ಪ(30), ಸುನೀತಾ(19), ಸೋಮವ್ವ(50) ಮತ್ತು ತಂಗಮ್ಮ(55) ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಜವಳ ಕಾರ್ಯಕ್ಕೆ ಕುಟುಂಬಸ್ಥರು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬುಲೆರೋ ವಾಹನದಲ್ಲಿದ್ದ ಇನ್ನು ಹಲವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ನೀರುಪಾಲಾಗಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ತಾಲೂಕಿನ ಸಿಡಿಗಿನಮೊಳ ಗ್ರಾಮದಲ್ಲಿ ನಡೆದಿದೆ. ಸಿಡಿಗಿನಮೊಳ ಗ್ರಾಮದ ರಾಜೇಶ್(11) ಮತ್ತು ಶಿವಶಂಕರ್ (12) ಮೃತರು. ಪರಮದೇವನಹಳ್ಳಿ(ಪಿ.ಡಿ ಹಳ್ಳಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Accidents: ಕರಾಳ ಗುರುವಾರ: ಕರ್ನಾಟಕದಾದ್ಯಂತ ಸರಣಿ ಅಪಘಾತಗಳಲ್ಲಿ 17 ಜನ ಸಾವು
ನಿನ್ನೆ ಕ್ರಿಕೆಟ್ ಆಡಿದ ನಂತರ ಕೃಷಿಹೊಂಡದಲ್ಲಿ ಈಜಲು ಇಬ್ಬರು ತೆರಳಿದ್ದಾರೆ. ಆದರೆ ಈಜುಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಬಾಲಕರ ಶವ ಹೊರತೆಗೆದಿದ್ದಾರೆ.
ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವು
ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದ ಬಳಿ ನಡೆದಿದೆ. ಮಂಜುನಾಥ್(48) ಮತ್ತು ಗೋವಿಂದಪ್ಪ ಮ್ಯಾಗಲಮನಿ(62) ಮೃತರು.
ಇದನ್ನೂ ಓದಿ: 10 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ಸಾಗಿಸುತ್ತಿದ್ದವರ ಬಂಧನ, ಆ್ಯಂಬರ್ಗ್ರಿಸ್ಗೆ ಯಾಕಿಷ್ಟು ಡಿಮ್ಯಾಂಡ್?
ನಿನ್ನೆ ಸಂಜೆ ಮಳೆ ಸುರಿಯುತ್ತಿದ್ದಾಗ ಮನೆಯ ಕಿಟಕಿ, ಬಾಗಿಲು ಕ್ಲೋಸ್ ಮಾಡುವಾಗ ಸಿಡಿಲು ಹೊಡೆದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಬಳಿ ನಿಂತಿದ್ದಾಗ ಸಿಡಿಲು ಬಡಿದು ಬಾಲಕ ಸಾವು
ಇತ್ತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡಾದಲ್ಲಿ ಕೂಡ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮನೆ ಬಳಿ ನಿಂತಿದ್ದಾಗ ಸಿಡಿಲು ಬಡಿದು ಪಾಂಡುನಾಯ್ಕ್(16) ಮೃತಪಟ್ಟಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Fri, 11 April 25