10 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ಸಾಗಿಸುತ್ತಿದ್ದವರ ಬಂಧನ, ಆ್ಯಂಬರ್ಗ್ರಿಸ್ಗೆ ಯಾಕಿಷ್ಟು ಡಿಮ್ಯಾಂಡ್?
ವಾಂತಿ ಅಂದಾಕ್ಷಣ ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ (Whale Vomit) ಎಂದಾಕ್ಷಣ, ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧೀಶನನ್ನಾಗಿಸುವ ಅದೃಷ್ಟವೊಂದು ಚಕ್ಕನೆ ಬಾಗಿಲು ಬಡಿದಂತಾಗುತ್ತದೆ. ಇದೇ ದುರಾಸೆಗೆ ಬಿದ್ದು ಕೆಲವರು ತಿಮಿಂಗಲ ವಾಂತಿ ಅಂದರೆ ಅಂದರೆ ಆ್ಯಂಬರ್‌ಗ್ರಿಸ್ ಕಳ್ಳಸಾಗಾಟ ಮಾಡುತ್ತಾರೆ. ಅದರಂತೆ 10 ಕೋಟಿ ರೂ. ಮೌಲ್ಯದ ಆ್ಯಂಬರ್‌ಗ್ರಿಸ್ ಸಾಗಿಸುತ್ತಿದ್ದವರ ಮಡಿಕೇರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ತಿಮಿಂಗಲದ ವಾಂತಿಗೆ ಯಾಕಿಷ್ಟು ಡಿಮ್ಯಾಂಡ್ ಎನ್ನುವುದನ್ನು ತಿಳಿದುಕೊಳ್ಳಿ.
Updated on:Apr 10, 2025 | 6:15 PM

ಸ್ಪಮ್‌ರ್‍ವೇಲ್ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕಾರಣ ಭಾರತ, ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳಲ್ಲಿ ಆ್ಯಂಬರ್‌ಗ್ರಿಸ್ (Ambergris) ಮಾರಾಟಕ್ಕೆ ನಿಷೇಧವಿದೆ. ಆದರೂ ಕದ್ದುಮುಚ್ಚಿ ಈ ಆ್ಯಂಬರ್‌ಗ್ರಿಸ್ ಸಾಗಾಟ ನಡೆಯುತ್ತಲೇ ಇದೆ. ಅದರಂತೆ ಒಂದು ಗ್ಯಾಂಗ್ ಆ್ಯಂಬರ್‌ಗ್ರಿಸ್ ಸಾಗಿಸುತ್ತಿದ್ದಾಗ ಮಡಿಕೇರಿಯಲ್ಲಿ ಸಿಕ್ಕಿದ್ದಿದೆ.

ಬರೋಬ್ಬರಿ 10 ಕೋಟಿ ರೂ. ಮೌಲ್ಯದ 10 10 ಕೆ.ಜಿ ಆ್ಯಂಬರ್‌ಗ್ರಿಸ್ ಅಂದರೆ ತಿಮಿಂಗಲ ವಾಂತಿಯನ್ನು ಕೇರಳದ ತಿರುವನಂತಪುರಂನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದವರು ಮಡಿಕೇರಿಯಲ್ಲಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ.

ಸ್ಪಮ್‌ರ್‍ವೇಲ್ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿರುವ ಕಾರಣ ಭಾರತ, ಅಮೆರಿಕ, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳಲ್ಲಿ ಆ್ಯಂಬರ್‌ಗ್ರಿಸ್ (Ambergris) ಮಾರಾಟಕ್ಕೆ ನಿಷೇಧವಿದೆ. ಆದರೂ ಕದ್ದುಮುಚ್ಚಿ ಈ ಆ್ಯಂಬರ್‌ಗ್ರಿಸ್ ಸಾಗಾಟ ನಡೆಯುತ್ತಲೇ ಇದೆ. ಅದರಂತೆ ಒಂದು ಗ್ಯಾಂಗ್ ಆ್ಯಂಬರ್‌ಗ್ರಿಸ್ ಸಾಗಿಸುತ್ತಿದ್ದಾಗ ಮಡಿಕೇರಿಯಲ್ಲಿ ಸಿಕ್ಕಿದ್ದಿದೆ.

ಅಮೂಲ್ಯ ತಿಮಿಂಗಲ ವಾಂತಿಯನ್ನು 2 ವಾಹನಗಳಲ್ಲಿ ಸಾಗಿಸುತ್ತಿದ್ದವರನ್ನು ವಿರಾಜಪೇಟೆ ಪೊಲೀಸರ ಸೆರೆಹಿಡಿದಿದ್ದಾರೆ. ಎರಡು ವಾಹನಗಳಲ್ಲಿ ಆ್ಯಂಬರ್‌ಗ್ರಿಸ್ ಸಾಗಿಸುತ್ತಿದ್ದ ಸಂಶುದ್ದೀನ್, ನವಾಜ್, ಬಾಲಚಂದ್ರ ಸೇರಿದಂತೆ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಬರೋಬ್ಬರಿ 10 ಕೋಟಿ ರೂ ಮೌಲ್ಯದ 10 ಕೆ ಜಿ ತಿಮಿಂಗಲ ವಾಂತಿ ವಶಪಡಿಸಿಕೊಂಡಿದ್ದಾರೆ. ಒಟ್ಟು ಹತ್ತು ಜನ ಆರೋಪಿಗಳು ಎರಡು ವಾಹನದಲ್ಲಿ ಬರೋಬ್ಬರಿ 10 ಕೋಟಿ ಮೌಲ್ಯದ 10 ಕೆ.ಜಿ ಆ್ಯಂಬರ್‌ಗ್ರಿಸ್ ಅನ್ನು ಕೇರಳದ ತಿರುವನಂತಪುರಂನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು.

ವಾಂತಿಯನ್ನು ಹೇಗ್ಗಳ ಗ್ರಾಮದಲ್ಲಿ ಹಿಡಿದಿದ್ದಾರೆ. ಆರೋಪಿಗಳು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬೆಂಗಳೂರಿನಿಂದ ಯಾವ ಕಡೆ ಈ ಆ್ಯಂಬರ್‌ಗ್ರಿಸ್ ಹೋಗುತ್ತಿತ್ತು ಎನ್ನುವುದು ತಿಳಿದುಬಂದಿಲ್ಲ.

ತಮಿಳುನಾಡಿನ ಕರಾವಳಿವರೆಗೂ ಸದ್ಯದ ಮಟ್ಟಿಗೆ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಲುದುಬಾರಿಯಾದ ಕಳ್ಳ ಸಾಗಣೆ ವಸ್ತು ಅಂದರೆ ಅದು ಆ್ಯಂಬರ್‌ಗ್ರಿಸ್ . ಆದರೆ ಇದನ್ನು ಸಾಗಿಸಲು ನಿಷೇಧ ಇದೆ. ಆದರೂ ಸಹ ಕೆಲವರು ಹಣದ ಆಸೆಗೆ ಬಿದ್ದು ಸಾಗಿಸಲು ಹೋಗಿ ಸಿಕ್ಕಿಬಿದ್ದಿರುವ ಸಾಕಷ್ಟು ಪ್ರಕರಣಗಳು ಇವೆ.

ಮುಂಬೈ, ಬೆಂಗಳೂರಿನಂತಹ ಮಹಾನಗರಗಳು ಮಾತ್ರವೇ ಅಲ್ಲದೆ, ಹೊಸಪೇಟೆಯಂತಹ ಪುಟ್ಟನಗರಗಳಲ್ಲೂ ಇದರ ಕಳ್ಳ ಸಾಗಣೆ ಪತ್ತೆಯಾಗಿದೆ. ಸದ್ಯ 1 ಕೆ.ಜಿ. ತಿಮಿಂಗಿಲ ವಾಂತಿಗೆ ಒಂದು ಕೋಟಿ ರು.ಗಿಂತ ಅಧಿಕ ಬೆಲೆ ಇದೆ.

New Project (3)
Published On - 6:15 pm, Thu, 10 April 25



















