ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ ಮೂವರ ಸಾವು; ಓರ್ವ ಮಗುವಿನ ಸ್ಥಿತಿ ಗಂಭೀರ
ಬ್ಯಾಡಗಿ(Byadagi) ತಾಲೂಕಿನ ಮೊಟೇಬೆನ್ನೂರು ಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬೈಕ್ಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಭೀಕರ ರಸ್ತೆ ಅಪಘಾತ(Accident)ವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಹಾವೇರಿ, ಫೆ.27: ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬೈಕ್ಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಭೀಕರ ರಸ್ತೆ ಅಪಘಾತ(Accident)ವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬ್ಯಾಡಗಿ(Byadagi) ತಾಲೂಕಿನ ಮೊಟೇಬೆನ್ನೂರು ಬಳಿಯ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ, ಓರ್ವ ಪುರುಷ ಹಾಗೂ ಒಂದು ಮಗು ಕೊನೆಯುಸಿರೆಳೆದಿದೆ. ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಅಪಘಾತವಾಗುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಗುದ್ದಿದ ರಭಸಕ್ಕೆ ಮೃತದೇಹಗಳು ಛೀದ್ರ ಛಿದ್ರವಾಗಿದ್ದು, ಮೃತದೇಹಗಳು ಛಿದ್ರಗೊಂಡ ಹಿನ್ನೆಲೆ ಮೃತರ ಗುರುತುಗಳು ಪತ್ತೆಯಾಗುತ್ತಿಲ್ಲ.
ಆಕಸ್ಮಿಕವಾಗಿ ಮೇವಿನ ಬಣವಿಗೆ ಬೆಂಕಿ; ನಂದಿಸಲು ಹೋದ ವ್ಯಕ್ತಿ ಸಜೀವ ದಹನ
ಹಾವೇರಿ: ಸವಣೂರು ತಾಲೂಕಿನ ಶಿರಬಡಗಿಯ ಶೇವಲಾಪುರ ತಾಂಡಾದಲ್ಲಿ ಮೇವಿನ ಬಣವೆಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿದ್ದ ವ್ಯಕ್ತಯೋರ್ವ ಸಜೀವ ದಹನವಾದ ಘಟನೆ ನಡೆದಿದೆ. ಗಂಗಪ್ಪ ಮಾಂಗಳೆಪ್ಪ ಲಮಾಣಿ(68) ಮೃತ ರ್ದುದೈವಿ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಶರೆ. ಈ ಕುರಿತು ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮತ್ತೊಂದು ಭೀಕರ ಅಪಘಾತ; ಸ್ಥಳದಲ್ಲೇ ಐವರು ದುರ್ಮರಣ
ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು
ಬೆಂಗಳೂರು: ನಡೆದುಕೊಂಡು ಹೊಗುತಿದ್ದ ಹಿರಿಯ ವಕೀಲರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಹಿರಿಯ ವಕೀಲ ಕೆ.ಟಿ.ಡಾಕಪ್ಪ ಮೃತ ರ್ದುದೈವಿ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರ್ ನಿಲ್ಲಿಸಿ ಡಿವಿಜೆ ರಸ್ತೆಯ ಕಚೇರಿಗೆ ಹೋಗಿದ್ದ ವಕೀಲರು, ಬಳಿಕ ಮನೆಗೆ ಹೋಗಲು ವಾಪಸ್ ಕಾರ್ ಬಳಿ ಬರುವಾಗ ಈ ದುರ್ಘಟನೆ ನಡೆದಿದೆ. ಕೆಟಿಎಂ ಬೈಕ್ನಲ್ಲಿ ಅತೀ ವೇಗವಾಗಿ ಬಂದ ಆದಿತ್ಯಾ (21) ಎಂಬ ಬೈಕ್ ಸವಾರ ವಕೀಲರಿಗೆ ಡಿಕ್ಕಿ ಹೊಡೆದಿದ್ದಾನೆ. ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Tue, 27 February 24




