ದಿಂಬಂ ಘಾಟ್ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ಚಾಮರಾಜನಗರ ತಮಿಳುನಾಡು ಗಡಿ ಭಾಗದ ದಿಂಬಂ ಘಾಟ್ನಲ್ಲಿ ಕಾಡಾನೆ ಹಾವಳಿ ಸಾಮಾನ್ಯ. ಆಗಾಗ್ಗೆ ವಾಹನ ಸಾವರರಿಗೆ ಕಾಡಾನೆಗಳು ಕಾಣಿಸಿಕೊಳ್ಳುವುದು, ಕೆಲವು ಬಾರಿ ಅವು ವಾಹನಗಳನ್ನು ಅಟ್ಟಾಡಿಸಿಕೊಂಡು ಹೋದ ವಿದ್ಯಮಾನಗಳೂ ನಡೆದಿವೆ. ಇದೀಗ, ಕಾಡಾನೆಯೊಂದು ಘಾಟ್ ರಸ್ತೆಯಲ್ಲಿ ಬಿದ್ದಿದ್ದ ರಾಶಿ ರಾಶಿ ಟೊಮೆಟೋವನ್ನು ಖಾಲಿ ಮಾಡಿದೆ.
ಚಾಮರಾಜನಗರ, ಮೇ 6: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆ ಹವಾ ಮುಂದುವರಿದಿದೆ. ಕರ್ನಾಟಕ ಹಾಗೂ ತಮಿಳುನಾಡು ಬೆಸೆಯುವ ದಿಂಬಂ ಘಾಟ್ನಲ್ಲಿ ಬೊಲೆರೊ ವಾಹನ ಪಲ್ಟಿಯಾಗಿ ಟೊಮ್ಯಾಟೊ ಲೋಡ್ ರಸ್ತೆಯಲ್ಲಿ ಬಿದ್ದಿತ್ತು. ರಾಶಿ ರಾಶಿ ಟೊಮೆಟೊ ಚೆಲ್ಲಿತ್ತು. ಬಳಿಕ ವಾಹನ ಹಾಗೂ ಕ್ರೇಟ್ಗಳನ್ನು ತೆಗೆದುಕೊಂಡು ಹೋಗಲಾಗಿತ್ತು. ರಸ್ತೆಯಲ್ಲಿ ಬಿದ್ದು ಅಪ್ಪಚ್ಚಿಯಾಗಿದ್ದ ಟೊಮೆಟೋವನ್ನು ಅಲ್ಲೇ ಬಿಡಲಾಗಿತ್ತು. ಟೊಮೆಟೋ ವಾಸನೆ ಹಿಡಿದು ರಸ್ತೆಗೆ ನುಗ್ಗಿದ ಕಾಡಾನೆಯೊಂದು ಅವುಗಳನ್ನೆಲ್ಲ ತಿಂದು ಖಾಲಿ ಮಾಡಿದೆ. ಕಾಡಾನೆ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
Follow Us
Latest Videos
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

