ಕೆಜಿಎಫ್ನ ಬಿಜಿಎಂಎಲ್ ಶಾಲೆಗೆ ಸಂಪೂರ್ಣ ಕಾಯಕಲ್ಪದ ಅಗತ್ಯವಿದೆ, ಸರ್ಕಾರ ಸಿದ್ಧವಿದೆಯೇ ಅನ್ನೋದೇ ಪ್ರಶ್ನೆ
ಶಾಲೆಯ ದುಸ್ಥಿತಿ ಬಗ್ಗೆ ಮುಖ್ಯ ಶಿಕ್ಷಕರು ಸವಿಸ್ತಾರವಾಗಿ ಮಾತಾಡಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಕಬಳಿಸುವ ಪ್ರಯತ್ನ ನಡೆಸಿ ಇಲ್ಲಿರುವ ಶಿಕ್ಷಕರಿಗೆ ಇನಿಲ್ಲದ ಕಿರುಕುಳ ನೀಡುತ್ತಿದ್ದಾರಂತೆ. ರಾಜ್ಯ ಸರ್ಕಾರ ಶಾಲೆಯ ಪುನಶ್ಚೇತನದ ಬಗ್ಗೆ ಯೋಚಿಸಿದಲ್ಲಿ ಮಾತ್ರ ಅದನ್ನು ಒಂದು ಹಂತಕ್ಕೆ ತರುವುದು ಸಾಧ್ಯ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಎಸ್ಎಸ್ಎಲ್ಸಿ ಯಲ್ಲಿ ಎಲ್ಲ ಮಕ್ಕಳು ಫೇಲಾಗಿರುವ ವಿಷಯ ಗೊತ್ತಿರುತ್ತದೆ.
ಕೋಲಾರ, ಮೇ 6: ಎಂಥ ವಿಪರ್ಯಾಸ ಇದು? ಕೋಲಾರದ ಕೆಜಿಎಫ್ ನಲ್ಲಿರುವ ಬಿಜಿಎಂಲ್ ಶಾಲೆಯ ಇತಿಹಾಸ ಕೇಳಿದರೆ ಹೆಮ್ಮೆಯೆನಿಸುತ್ತದೆ ಆದರೆ ಈಗಿನ ಸ್ಥಿತಿಯನ್ನು ನೋಡಿದರೆ ಮರುಕ ಹುಟ್ಟುತ್ತದೆ. ಕೆಜೆಎಫ್ ನಲ್ಲಿ ಚಿನ್ನದ ಅದಿರು ಸಿಗೋದು ನಿಂತುಹೋದ ಬಳಿಕ ಇಲ್ಲಿ ವಾಸವಾಗಿದ್ದ ಜನರ ಬದುಕು ಕೂಡ ಈ ಶಾಲೆಯಂತಾಗಿದೆ. ಸರ್ಕಾರೀ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರಾಗಿರುವ ಹಿರಿಯ ಮಹಿಳೆಯೊಬ್ಬರು (elderly woman) ಶಾಲೆಯ ಇತಿಹಾಸವನ್ನು ವಿಷಾದಭರಿತ ಟೋನ್ನಲ್ಲಿ ಹೇಳುತ್ತಾರೆ. ಶಾಲೆಯಲ್ಲಿ ದಾಖಲಾತಿಗಾಗಿ ಅರ್ಜಿಯನ್ನು ಪಡೆಯಲು ಪೋಷಕರು ರಾತ್ರಿಯಿಡೀ ಶಾಲಾ ಆವರಣದಲ್ಲಿ ಮಲಗಿ ಬೆಳಗ್ಗೆ ಸರದಿ ಸಾಲಲ್ಲಿ ನಿಲ್ಲುವ ಕಾಲವೊಂದಿತ್ತು. 1899 ರಲ್ಲಿ ಶುರುವಾದ ಶಾಲೆಯಲ್ಲಿ ಮೊದಲಿಗೆ ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರಿಗಳ ಮಕ್ಕಳು ಮತ್ತು ನಂತರ ಬಿಜಿಎಂಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ಮಕ್ಕಳು ಓದುತ್ತಿದ್ದ ಶಾಲೆ ಇದಂತೆ. ಇಲ್ಲಿ ಓದಿದವರು ಉನ್ನತ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ ಅಂತ ಅವರು ಹೇಳುತ್ತಾರೆ.
ಇದನ್ನೂ ಓದಿ: 126 ವರ್ಷಗಳ ಹಳೆಯ, ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಓದಿದ ಐತಿಹಾಸಿಕ ಕನ್ನಡ ಶಾಲೆಗೆ ಇದೆಂಥಾ ಸ್ಥಿತಿ..?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

