ಗಿನ್ನೆಸ್ ಪುಟ ಸೇರಿತು ಭಾರತದ ಯುವಕ ತಯಾರಿಸಿದ ಉಂಗುರ.. ಇದರಲ್ಲಿರುವ ವಜ್ರದ ಹರಳುಗಳೆಷ್ಟು?!

ಗಿನ್ನೆಸ್ ಪುಟ ಸೇರಿತು ಭಾರತದ ಯುವಕ ತಯಾರಿಸಿದ ಉಂಗುರ.. ಇದರಲ್ಲಿರುವ ವಜ್ರದ ಹರಳುಗಳೆಷ್ಟು?!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಜ್ರದ ಉಂಗುರ

ಇದು ಒಂದೆರಡು ವಜ್ರದ ಹರಳುಗಳು ಇರುವ ಆಭರಣವಲ್ಲ. ಬರೋಬ್ಬರಿ 12,638 ವಜ್ರದ ಹರಳುಗಳ, ಹೂವಿನ ಆಕಾರದ ಉಂಗುರ. ಹರ್ಷಿತ್ ಬನ್ಸಾಲ್ (25) ಇದನ್ನು ವಿನ್ಯಾಸ ಮಾಡಿದ್ದಾರೆ

TV9kannada Web Team

| Edited By: ganapathi bhat

Apr 07, 2022 | 5:40 PM

ನವದೆಹಲಿ: ವಜ್ರ ಎಂಬ ಹೆಸರು ಕೇಳುವಾಗಲೇ ಚಕಿತರಾಗುವ ನಾವು, ವಜ್ರದ ಆಭರಣಗಳತ್ತ ಮತ್ತಷ್ಟು ಆಕರ್ಷಿತರಾಗುತ್ತೇವೆ. ಅವುಗಳ ವಿನ್ಯಾಸದ ಬಗ್ಗೆ ಕನಸು ಕಾಣುತ್ತೇವೆ. ಇಲ್ಲೀಗ ಅಂಥದ್ದೇ ವಿಶೇಷ ಆಭರಣದ ವಿಷಯವೊಂದಿದೆ.

ಗಿನ್ನೆಸ್ ವಿಶ್ವ ದಾಖಲೆ ಮಾಡಿತು ಈ ಉಂಗುರ ಇದು ಒಂದೆರಡು ವಜ್ರದ ಹರಳುಗಳು ಇರುವ ಆಭರಣವಲ್ಲ. ಬರೋಬ್ಬರಿ 12,638 ವಜ್ರದ ಹರಳುಗಳ, ಹೂವಿನ ಆಕಾರದ ಉಂಗುರ. ಆಭರಣ ವಿನ್ಯಾಸದಲ್ಲಿ ಹೆಸರು ಮಾಡಿರುವ ಈ ಉಂಗುರ ಗಿನ್ನೆಸ್ ವಿಶ್ವ ದಾಖಲೆಯಲ್ಲೂ ಸ್ಥಾನ ಪಡೆದುಕೊಂಡಿದೆ.

ದಿ ರಿಂಗ್ ಆಫ್ ಪ್ರಾಸ್ಪರಿಟಿ ಉಂಗುರದಲ್ಲಿ ಅತಿ ಹೆಚ್ಚು ವಜ್ರದ ಹರಳುಗಳನ್ನು ಹೊಂದಿರುವ ಬಗ್ಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಈ ಉಂಗುರ ನಿರ್ಮಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ‘ದಿ ಮಾರಿಗೋಲ್ಡ್ – ದಿ ರಿಂಗ್ ಆಫ್ ಪ್ರಾಸ್ಪರಿಟಿ’ (The Marigold – The Ring of Prosperity) ಎಂದು ಕರೆಯಲಾದ ಈ ಆಭರಣವು 165 ಗ್ರಾಂ ತೂಕ ಹೊಂದಿದೆ.

ಈ ಉಂಗುರವನ್ನು ವಿನ್ಯಾಸ ಮಾಡಿದವರು ಯಾರು? ಇದನ್ನು ಗುಜರಾತ್​ನ ಸೂರತ್​ನಲ್ಲಿ, 2 ವರ್ಷ ಆಭರಣ ವಿನ್ಯಾಸ ಕಲಿತಿರುವ ಹರ್ಷಿತ್ ಬನ್ಸಾಲ್ (25) ಎಂಬವರು ವಿನ್ಯಾಸ ಮಾಡಿದ್ದಾರೆ. ಇದು ಧರಿಸಲು ಯೋಗ್ಯ ಮತ್ತು ಆರಾಮದಾಯಕವಾಗಿದೆ ಎಂದೂ ಅವರು ಹೇಳಿದ್ದಾರೆ.

10 ಸಾವಿರ ವಜ್ರದ ಹರಳುಗಳ ಆಭರಣ ತಯಾರಿಸುವುದು ನನ್ನ ಗುರಿಯಾಗಿತ್ತು ಎಂದು ಬನ್ಸಾಲ್ ತಮ್ಮ ಉದ್ದೇಶವನ್ನು ಹೇಳಿಕೊಂಡಿದ್ದಾರೆ. ಈ ಆಭರಣ ತಯಾರಿಗೆ ಎರಡು ವರ್ಷಗಳ ಕಾಲ ಹಲವಾರು ವಿನ್ಯಾಸಗಳನ್ನು ರಚಿಸಿರುವ ಬಗ್ಗೆ ಹೇಳಿದ್ದಾರೆ. ಕೊನೆಗೂ ಈ ಉಂಗುರ ರಚಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಉಂಗುರ ಯಾರ ಪಾಲಾಗಲಿದೆ? ಉಂಗುರವನ್ನು ಕೊಂಡುಕೊಳ್ಳುವುದಾಗಿ ಹಲವರು ಹೇಳಿದ್ದಾರೆ. ಆದರೆ, ಈ ಉಂಗುರ ನಮ್ಮ ಹೆಮ್ಮೆಯ ವಸ್ತುವಾಗಿದ್ದು, ಸದ್ಯ ಅದನ್ನು ಮಾರುವ ಯೋಚನೆ ಇಲ್ಲ ಎಂದು ಹರ್ಷಿತ್ ಬನ್ಸಾಲ್ ತಿಳಿಸಿದ್ದಾರೆ.

ಹಿಂದಿನ ದಾಖಲೆ ಏನಾಗಿತ್ತು? ಈ ಹಿಂದಿನ ಗಿನ್ನೆಸ್ ವಿಶ್ವ ದಾಖಲೆಯು 7,801 ವಜ್ರದ ಹರಳುಗಳನ್ನು ಹೊಂದಿದ್ದ ಉಂಗುರದ್ದಾಗಿತ್ತು. ಅದೂ ಕೂಡ ಭಾರತದಲ್ಲಿ ತಯಾರಾದ ಆಭರಣ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.

ಚಿನ್ನ ಖರೀದಿ ಮಾಡೋರಿಗೆ ಗುಡ್ ನ್ಯೂಸ್; ಐತಿಹಾಸಿಕ ಕುಸಿತ ಕಂಡ ಆಭರಣ ಬೆಲೆ

Follow us on

Most Read Stories

Click on your DTH Provider to Add TV9 Kannada