ಕ್ರಿಸ್​​ಮಸ್ ವೇಳೆ ಚರ್ಚ್​ಗೆ ಭೇಟಿಕೊಟ್ಟರೆ ಥಳಿಸುತ್ತೇವೆ -ಹಿಂದೂಗಳಿಗೆ ಭಜರಂಗ ದಳದ ವಾರ್ನಿಂಗ್​

ಕ್ರಿಸ್​​ಮಸ್​ ಸಮಯದಲ್ಲಿ ಚರ್ಚ್​​ಗಳಿಗೆ ಭೇಟಿ ನೀಡುವ ಹಿಂದೂಗಳನ್ನು ಥಳಿಸುತ್ತೇವೆ ಎಂದು ಭಜರಂಗ ದಳದ ನಾಯಕ ನೀಡಿರುವ ಹೇಳಿಕೆ ಈಗ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕ್ರಿಸ್​​ಮಸ್ ವೇಳೆ ಚರ್ಚ್​ಗೆ ಭೇಟಿಕೊಟ್ಟರೆ ಥಳಿಸುತ್ತೇವೆ -ಹಿಂದೂಗಳಿಗೆ ಭಜರಂಗ ದಳದ ವಾರ್ನಿಂಗ್​
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: Dec 06, 2020 | 12:44 PM

ಡಿಸ್ಪೂರ್: ಕ್ರಿಸ್​​ಮಸ್​ ಸಮಯದಲ್ಲಿ ಚರ್ಚ್​​ಗಳಿಗೆ ಭೇಟಿ ನೀಡುವ ಹಿಂದೂಗಳನ್ನು ಥಳಿಸುತ್ತೇವೆ ಎಂದು ಭಜರಂಗ ದಳದ ನಾಯಕ ನೀಡಿರುವ ಹೇಳಿಕೆ ಈಗ ವೈರಲ್​ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಸ್ಸಾಂನ ಕಚರ್​ ಜಿಲ್ಲೆಯ ಸಿಲ್ಚಾರ್​ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಜರಂಗ ದಳದ ನಾಯಕ ಹಾಗೂ ವಿಶ್ವ ಹಿಂದೂ ಪರಿಷತ್​ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಥು ನಾಥ್​ ಈ ಹೇಳಿಕೆ ನೀಡಿದ್ದಾರೆ. ಈ ಬಾರಿ ಕ್ರಿಸ್​ಮಸ್​ನಲ್ಲಿ ಯಾವುದೇ ಹಿಂದುಗಳು ಚರ್ಚ್​​ಗೆ ತೆರಳಬಾರದು. ಹಾಗೆ ಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮವರು ಚರ್ಚ್​​ಗೆ ಹೋಗುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಹೀಗಾಗಿ, ಈ ಬಾರಿ ಕ್ರಿಸ್​ಮಸ್​ಗೆ ತೆರಳುವ ಹಿಂದುಗಳಿಗೆ ನಾವು ಏಟು ಹಾಕುತ್ತೇವೆ ಎಂದು ಮಿಥು ನಾಥ್​ ಎಚ್ಚರಿಕೆ ರವಾನಿಸಿದರು.

ನಾನು ಈ ರೀತಿ ಹೇಳಿಕೆ ನೀಡುವುದರಿಂದ ನಾಳೆ ಸುದ್ದಿವಾಹಿನಿಗಳಲ್ಲಿ ಗೂಂಡಾ ದಳ ಎನ್ನುವ ಹೆಡ್​ಲೈನ್​ ಬರುತ್ತದೆ ಎಂಬುದು ನನಗೆ ಗೊತ್ತಿದೆ. ಆದರೆ, ಅದು ನಮಗೆ ಮುಖ್ಯವಲ್ಲ. ಹಿಂದೂಗಳು, ಚರ್ಚ್​ಗಳಿಗೆ ಹೋಗಬಾರದು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಮಿಥು ನಾಥ್​ ಹೇಳಿದರು.

ಲವ್​ ಜಿಹಾದ್​ ವಿಚಾರದಲ್ಲೂ ಮಿಥು ನಾಥ್​ ಸಿಟ್ಟಾಗಿದ್ದು ನಮ್ಮ ಅಮ್ಮಂದಿರು ಹಾಗೂ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಎಲ್ಲ ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಮಿಥು ನಾಥ್ ಹೇಳಿದರು.

ಡಿಜೆ ಹಳ್ಳಿ-ಕೆಜಿ ಹಳ್ಳಿ ವ್ಯಾಪ್ತಿಯ ಹಿಂದೂಗಳ ರಕ್ಷಣೆಗೆ ಭಜರಂಗದಳ ಆಗ್ರಹ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ