ಕಟಾವಿಗೆ ಬಂದ ಬಾಳೆ ಬೆಳೆಯನ್ನು ನಾಶ ಪಡಿಸಿದ ಗಜಪಡೆ: ಯಾವೂರಲ್ಲಿ?

ರೈತ ಮಹಿಳೆ ನಾಗಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ 1ಲಕ್ಷದ 60 ಸಾವಿರ ಖರ್ಚು ಮಾಡಿ ಬೆಳೆದಿದ್ದ ಬಾಳೆಯನ್ನು ನಾಲ್ಕು ಕಾಡಾನೆಗಳು ನಾಶಪಡಿಸಿವೆ.

ಕಟಾವಿಗೆ ಬಂದ ಬಾಳೆ ಬೆಳೆಯನ್ನು ನಾಶ ಪಡಿಸಿದ ಗಜಪಡೆ: ಯಾವೂರಲ್ಲಿ?
ಬಾಳೆ ಬೆಳೆ ನಾಶ
Updated By: ಸಾಧು ಶ್ರೀನಾಥ್​

Updated on: Feb 04, 2021 | 10:49 AM

ಮೈಸೂರು: ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ನಾಶ ಪಡಿಸಿದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ನಡೆದಿದೆ.

ರೈತ ಮಹಿಳೆ ನಾಗಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ 1 ಲಕ್ಷ 60 ಸಾವಿರ ಖರ್ಚು ಮಾಡಿ ಬೆಳೆದಿದ್ದ ಬಾಳೆಯನ್ನು ನಾಲ್ಕು ಕಾಡಾನೆಗಳು ನಾಶಪಡಿಸಿವೆ. ಕಟಾವಿಗೆ ಬಂದಿದ್ದ ಬಾಳೆ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿದ್ದು, ರೈತ ಮಹಿಳೆ ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದ ಭೀಮನಹಳ್ಳಿ ಗ್ರಾಮಸ್ಥರು ಪದೇ ಪದೇ ನಾಡಿಗೆ ಬರುವ ಆನೆಗಳನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.

ಮಗಳ Love Marriageಗೆ ವಿರೋಧ; ಕೋಪದಿಂದ ಅಳಿಯನಿಗೆ ಸೇರಿದ 250 ಅಡಿಕೆ ಮರ ಕಡಿದು ಬಿಸಾಕಿದ ಪೋಷಕರು!