
ವಿಜಯಪುರ: ಮುತ್ತೂಟ್ ಫೈನಾನ್ಸ್‌ನಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಲು ಹೋಗಿ ಏನೂ ಸಿಗದೇ ವಾಪಸ್ ಆಗಿರುವ ಘಟನೆ ನಗರದ ಬಿಎಲ್‌ಡಿಇ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ನಡೆದಿದೆ.
ಹಿಂದೊಮ್ಮೆ ಇದೇ ಪೈನಾನ್ಸ್ನಲ್ಲಿ ಕಂಟ್ರೀ ಪಿಸ್ತೂಲ್ ತೋರಿಸಿ ದರೋಡೆ ಯತ್ನ ನಡೆದಿತ್ತು. ಆಗ ಸಿಬ್ಬಂದಿ ಕರ್ತವ್ಯ ಪ್ರಜ್ಞೆಯಿಂದ ಅಂದೂ ಕೂಡ ದರೋಡೆ ಕೃತ್ಯ ವಿಫಲವಾಗಿತ್ತು. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.