ನಂಬರ್ ಪ್ಲೇಟ್ ಇಲ್ಲದ Ferrari ಕಾರ್ನಲ್ಲಿ ವೀಕೆಂಡ್ ಶೋಕಿ: ಮಹಿಳೆಗೆ ಬಿತ್ತು ಫೈನ್!
ಬೆಂಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಐಷಾರಾಮಿ ಕಾರು ಚಾಲನೆ ಮಾಡಿದ ಮಹಿಳೆಯೊಬ್ಬರಿಗೆ ಸಂಚಾರ ಪೊಲೀಸರು ತಡೆದು ಫೈನ್ ಹಾಕಿದ ಘಟನೆ ವಿಲ್ಸನ್ ಗಾರ್ಡನ್ನಲ್ಲಿ ನಡೆದಿದೆ. ಪುದುಚೇರಿ ಮೂಲದ ಸೆಲ್ವರತ್ನಂ ಎಂಬುವವರಿಗೆ ಸೇರಿದ್ದ ಫೆರಾರಿ ಕಾರು ನಂಬರ್ ಪ್ಲೇಟ್ ಇಲ್ಲದೆ ವಿಲ್ಸನ್ ಗಾರ್ಡನ್ನಲ್ಲಿ ಸಂಚರಿಸುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾರು ಚಲಾಯಿಸುತ್ತಿದ್ದ ಪಲ್ಲವಿ ಸೆಲ್ವರತ್ನಂ ಎಂಬುವ ಮಹಿಳೆಯನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಪಲ್ಲವಿ ಈ ಫೆರಾರಿ ಕಾರನ್ನು ನಂಬರ್ ಪ್ಲೇಟ್ ಇಲ್ಲದೆಯೇ ಪುದುಚೇರಿಯಿಂದ […]

ಬೆಂಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಐಷಾರಾಮಿ ಕಾರು ಚಾಲನೆ ಮಾಡಿದ ಮಹಿಳೆಯೊಬ್ಬರಿಗೆ ಸಂಚಾರ ಪೊಲೀಸರು ತಡೆದು ಫೈನ್ ಹಾಕಿದ ಘಟನೆ ವಿಲ್ಸನ್ ಗಾರ್ಡನ್ನಲ್ಲಿ ನಡೆದಿದೆ.
ಪುದುಚೇರಿ ಮೂಲದ ಸೆಲ್ವರತ್ನಂ ಎಂಬುವವರಿಗೆ ಸೇರಿದ್ದ ಫೆರಾರಿ ಕಾರು ನಂಬರ್ ಪ್ಲೇಟ್ ಇಲ್ಲದೆ ವಿಲ್ಸನ್ ಗಾರ್ಡನ್ನಲ್ಲಿ ಸಂಚರಿಸುತ್ತಿರುವುದು ಪೊಲೀಸರಿಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾರು ಚಲಾಯಿಸುತ್ತಿದ್ದ ಪಲ್ಲವಿ ಸೆಲ್ವರತ್ನಂ ಎಂಬುವ ಮಹಿಳೆಯನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಪಲ್ಲವಿ ಈ ಫೆರಾರಿ ಕಾರನ್ನು ನಂಬರ್ ಪ್ಲೇಟ್ ಇಲ್ಲದೆಯೇ ಪುದುಚೇರಿಯಿಂದ ಬೆಂಗಳೂರಿಗೆ ಓಡಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾಳೆ.
ಇದನ್ನು ಕೇಳಿದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದ ಹಿನ್ನೆಲೆಯಲ್ಲಿ ಕಾರು ಚಲಾಯಿಸುತ್ತಿದ್ದ ಪಲ್ಲವಿ ಸೆಲ್ವರತ್ನಂಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ಅಂದ ಹಾಗೆ, ಫೆರಾರಿ ಕಾರಿಗೆ ನೋಂದಣಿ ಸಂಖ್ಯೆ (MH03 DK 9393) ನೀಡಲಾಗಿದ್ದರೂ ಅದನ್ನು ವಾಹನಕ್ಕೆ ಲಗತಿಸಿಲ್ಲ.




