ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನಕ್ಕೆ ಬಂದ ಖದೀಮರು ಬರಿಗೈ ವಾಪಸ್ ಆದ್ರು
ವಿಜಯಪುರ: ಮುತ್ತೂಟ್ ಫೈನಾನ್ಸ್‌ನಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಲು ಹೋಗಿ ಏನೂ ಸಿಗದೇ ವಾಪಸ್ ಆಗಿರುವ ಘಟನೆ ನಗರದ ಬಿಎಲ್‌ಡಿಇ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಮುತ್ತೂಟ್ ಫೈನಾನ್ಸ್ ಕಚೇರಿಯ ಬಾಗಿಲು ಒಡೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ರು. ಈ ವೇಳೆ ನಗದು ಹಾಗೂ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ. ಕಚೇರಿಯಲ್ಲಿ ಎಷ್ಟೇ ಹುಡುಕಿದರೂ ಏನೂ ಸಿಗದೇ ಬರಿಗೈ ವಾಪಸ್ ಹೋಗಿದ್ದಾರೆ. ಹಿಂದೊಮ್ಮೆ ಇದೇ ಪೈನಾನ್ಸ್ನಲ್ಲಿ ಕಂಟ್ರೀ ಪಿಸ್ತೂಲ್ ತೋರಿಸಿ […]

ವಿಜಯಪುರ: ಮುತ್ತೂಟ್ ಫೈನಾನ್ಸ್‌ನಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಲು ಹೋಗಿ ಏನೂ ಸಿಗದೇ ವಾಪಸ್ ಆಗಿರುವ ಘಟನೆ ನಗರದ ಬಿಎಲ್‌ಡಿಇ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಮುತ್ತೂಟ್ ಫೈನಾನ್ಸ್ ಕಚೇರಿಯ ಬಾಗಿಲು ಒಡೆದು ಖದೀಮರು ಕಳ್ಳತನಕ್ಕೆ ಯತ್ನಿಸಿದ್ರು. ಈ ವೇಳೆ ನಗದು ಹಾಗೂ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ. ಕಚೇರಿಯಲ್ಲಿ ಎಷ್ಟೇ ಹುಡುಕಿದರೂ ಏನೂ ಸಿಗದೇ ಬರಿಗೈ ವಾಪಸ್ ಹೋಗಿದ್ದಾರೆ.
ಹಿಂದೊಮ್ಮೆ ಇದೇ ಪೈನಾನ್ಸ್ನಲ್ಲಿ ಕಂಟ್ರೀ ಪಿಸ್ತೂಲ್ ತೋರಿಸಿ ದರೋಡೆ ಯತ್ನ ನಡೆದಿತ್ತು. ಆಗ ಸಿಬ್ಬಂದಿ ಕರ್ತವ್ಯ ಪ್ರಜ್ಞೆಯಿಂದ ಅಂದೂ ಕೂಡ ದರೋಡೆ ಕೃತ್ಯ ವಿಫಲವಾಗಿತ್ತು. ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




