ಜಲಾವೃತಗೊಂಡ ಸೇತುವೆ ದಾಟಲು ಹೋಗಿ 260 ಚೀಲ ಸಕ್ಕರೆ ನೀರುಪಾಲು!
ಬೆಳಗಾವಿ: ಲಾರಿ ಪಲ್ಟಿಯಾಗಿ 260 ಚೀಲ ಸಕ್ಕರೆ ನೀರುಪಾಲಾಗಿರುವ ಘಟನೆ ಗೋಕಾಕ್ ತಾಲೂಕಿನ ರಡ್ಡೇರಟ್ಟಿ ಬಳಿಯ ಚಿಕ್ಕ ಸೇತುವೆ ಮೇಲೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ರಡ್ಡೇರಟ್ಟಿ-ಯಾದವಾಡ ಸಂಪರ್ಕ ಕಲ್ಪಿಸುವ ಚಿಕ್ಕ ಸೇತುವೆ ಜಲಾವೃತವಾಗಿತ್ತು. ಈ ರೀತಿ ಜಲಾವೃತಗೊಂಡು ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಸುಮಾರು 260 ಸಕ್ಕರೆ ಚೀಲ […]
ಬೆಳಗಾವಿ: ಲಾರಿ ಪಲ್ಟಿಯಾಗಿ 260 ಚೀಲ ಸಕ್ಕರೆ ನೀರುಪಾಲಾಗಿರುವ ಘಟನೆ ಗೋಕಾಕ್ ತಾಲೂಕಿನ ರಡ್ಡೇರಟ್ಟಿ ಬಳಿಯ ಚಿಕ್ಕ ಸೇತುವೆ ಮೇಲೆ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ರಡ್ಡೇರಟ್ಟಿ-ಯಾದವಾಡ ಸಂಪರ್ಕ ಕಲ್ಪಿಸುವ ಚಿಕ್ಕ ಸೇತುವೆ ಜಲಾವೃತವಾಗಿತ್ತು. ಈ ರೀತಿ ಜಲಾವೃತಗೊಂಡು ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ಲಾರಿಯಲ್ಲಿದ್ದ ಸುಮಾರು 260 ಸಕ್ಕರೆ ಚೀಲ ನೀರಿಗೆ ಬಿದ್ದು ನೀರುಪಾಲಾಗಿದೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಮೂಲದ ವ್ಯಕ್ತಿಗೆ ಸೇರಿದ ಲಾರಿ ಇದಾಗಿದ್ದು, ರಡ್ಡೇರಟ್ಟಿ ಮಾರ್ಗವಾಗಿ ಯಾದವಾಡ ಗ್ರಾಮದತ್ತ ಲಾರಿ ಹೊರಟಿತ್ತು.
Published On - 9:50 am, Sun, 27 September 20