ಶೋಕಿಗಾಗಿ ಕಳ್ಳತನ ಮಾಡ್ತಿದ್ದ ನಾಲ್ವರು ಅರೆಸ್ಟ್
ಮೈಸೂರು: ಶೋಕಿಗಾಗಿ ಕಳ್ಳತನ ಮಾಡ್ತಿದ್ದ ನಾಲ್ವರು ಕಳ್ಳರನ್ನು ಮೈಸೂರು ಕೆ.ಆರ್. ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕದ್ದ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಮೊಹಮ್ಮದ್ ಫರಜ್, ಅರ್ಬಾಜ್ ಖಾನ್, ಜಿಬ್ರಾನ್ ಖಾನ್, ಇಮ್ರಾನ್ ಖಾನ್ ಬಂಧಿತರು. ಇವರಿಂದ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೆ.ಆರ್ ಠಾಣೆ ಆರಕ್ಷಕದ ನಿರೀಕ್ಷಕರಾದ ಶ್ರೀನಿವಾಸ್, ಉಪನಿರೀಕ್ಷಕರಾದ ಸುನೀಲ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಳ್ಳತನ ಮಾಡಿ ಜೈಲಿನಲ್ಲಿ ಸ್ನೇಹಿತರಾಗಿ ತಂಡ ಕಟ್ಟಿಕೊಂಡು ಸರಗಳ್ಳತನ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. […]

ಮೈಸೂರು: ಶೋಕಿಗಾಗಿ ಕಳ್ಳತನ ಮಾಡ್ತಿದ್ದ ನಾಲ್ವರು ಕಳ್ಳರನ್ನು ಮೈಸೂರು ಕೆ.ಆರ್. ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕದ್ದ ಬೈಕ್‌ನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಮೊಹಮ್ಮದ್ ಫರಜ್, ಅರ್ಬಾಜ್ ಖಾನ್, ಜಿಬ್ರಾನ್ ಖಾನ್, ಇಮ್ರಾನ್ ಖಾನ್ ಬಂಧಿತರು. ಇವರಿಂದ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆ.ಆರ್ ಠಾಣೆ ಆರಕ್ಷಕದ ನಿರೀಕ್ಷಕರಾದ ಶ್ರೀನಿವಾಸ್, ಉಪನಿರೀಕ್ಷಕರಾದ ಸುನೀಲ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಳ್ಳತನ ಮಾಡಿ ಜೈಲಿನಲ್ಲಿ ಸ್ನೇಹಿತರಾಗಿ ತಂಡ ಕಟ್ಟಿಕೊಂಡು ಸರಗಳ್ಳತನ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. A1 ಆರೋಪಿ ಮೇಲೆ ಬರೋಬ್ಬರಿ 50ಕ್ಕೂ ಹೆಚ್ಚು ಕೇಸ್ಗಳಿವೆ. ಮೈಸೂರು ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಈ ನಾಲ್ಕು ಆರೋಪಿಗಳು ಭಾಗಿಯಾಗಿದ್ದಾರೆ.
A1 ಮಹಮ್ಮದ್ ಫರಜ್, A2 ಅರ್ಬಾಜ್ ಖಾನ್, A3ಜಿಬ್ರಾನ್ ಖಾನ್, A4 ಇಮ್ರಾನ್ ಖಾನ್ ಇದೀಗಾ 6 ಸರಗಳ್ಳತನ ಮತ್ತು 7 ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಕಷ್ಟ ಪಡದೆ ಐಶರಾಮಿ ಜೀವನ ನಡೆಸೋಕೆ ಇವರು ಕಳ್ಳತನ ಮಾಡುತ್ತಿದ್ದರು. ಇದುವರೆಗೆ ಐದು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡ ನಂತರ ಜೈಲಿನಿಂದ ಸುಲಭವಾಗಿ ಹೊರಬರುತ್ತಿದ್ರು. ಮತ್ತೆ ಅದೇ ಚಾಳಿ ಮುಂದುವರೆಸುತ್ತಿದ್ದರು.




