ದಾವಣಗೆರೆ: ಮದುವೆ ವಿಚಾರಕ್ಕಾಗಿ ಮಗಳು, ಮಗ ಮತ್ತು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದ ಬಳಿ ಘಟನೆ ನಡೆದಿದೆ.
ಶೃತಿ ಮದುವೆಗಾಗಿ ಹುಡುಗನನ್ನು ನೋಡಲಾಗಿತ್ತು. ಆದರೆ ಯಾವುದೇ ಸಂಬಂಧ ಗಟ್ಟಿಯಾಗಲಿಲ್ಲ. ಇದಕ್ಕಾಗಿ ಮನೆಯಲ್ಲಿ ಜಗಳವಾಗಿತ್ತು. ಇದೇ ಕಾರಣಕ್ಕೆ ಮೂರು ಜನ ಸೂಳೆಕೆರೆ ಬಳಿ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಶೃತಿ (21) ಮತ್ತು ಸಹೋದರ ಸಂಜಯ್ (20) ಶವ ಪತ್ತೆಯಾಗಿದೆ. ತಾಯಿ ಕಮಲಮ್ಮ (56) ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಭೀಕರ ಅಪಘಾತ; ಆಟೋದಲ್ಲಿದ್ದ ಮದುಮಗಳು ಸೇರಿ ಆರು ಜನರ ದುರ್ಮರಣ