Budget 2021 | ನಿರುದ್ಯೋಗಿಗಳಿಗೆ ಮನೋಬಲ ಒದಗಿಸಲಿ
ಕೆಲಸ ಕಳೆದುಕೊಂಡವರ ಸಂಖ್ಯೆ ಒಂದೆಡೆಯಾದರೆ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸ ಸಿಗದಿರುವ ಯುವಕ ಯುವತಿಯರ ಸಂಖ್ಯೆಯೂ ಊಹಿಲಸಾಧ್ಯ. ಇವರೆಲ್ಲರ ನಿರುದ್ಯೋಗ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರದಿರದು. ಈ ವರ್ಗ ಮಾನಸಿಕವಾಗಿ ದೃಢವಾಗಿರಬೇಕು. ಆಶಾವಾದದ ಚೈತನ್ಯ ಇವರಲ್ಲಿ ಹುಟ್ಟಬೇಕು.

ಆರ್ಥಿಕವಾಗಿ ಎಷ್ಟೇ ಅಭಿವೃದ್ಧಿಯಾಗಲಿ. ಆರೋಗ್ಯವೊಂದಿರದಿದ್ದರೆ ಏನಿದ್ದರೂ ಕ್ಷುಲ್ಲಕವೇ ಸರಿ. ಒಂದು ದೇಶವನ್ನು ಸಬಲಗೊಲಿಸುವ ಪ್ರಮುಖ ಅಂಶ ನಾಗರಿಕರ ಆರೋಗ್ಯ. ದೇಶ ಸುಭಿಕ್ಷವಾಗಿದೆಯೋ ಇಲ್ಲವೋ ಎಂಬುದನ್ನು ಅಳೆಯುವ ಮಾಪನವಾಗಿ ಜನರ ಆರೋಗ್ಯ ಸಹ ಪರಿಗಣಿಸಲ್ಪಡುತ್ತದೆ. ಆದರೆ, ಮಾನಸಿಕ ಆರೋಗ್ಯ, ಮಾನಸಿಕ ಕಾಯಿಲೆ ಎಂಬ ಬಗ್ಗೆ ಯೋಚಿಸುವವರ ಸಂಖ್ಯೆ ಬಹಳ ಕಡಿಮೆ. ದೇಶದಲ್ಲಿ ಮಾನಸಿಕ ಆರೋಗ್ಯಕ್ಕೆ ಮಹತ್ವವನ್ನು ಪ್ರತಿ ಆಡಳಿತವೂ ನೀಡಲೇಬೇಕು.
ದೇಶದ ಎಲ್ಲ ನಾಗರಿಕರಿಗೂ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಬೇಕೆಂಬ ನಿಟ್ಟಿನಲ್ಲಿ 2017ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಜಾರಿಗೊಳಿಸಿತು. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮಹತ್ತರ ಉದ್ದೇಶ ಹೊಂದಿದ್ದ ಈ ನೀತಿಯತ್ತ ಸರ್ಕಾರ ಮತ್ತೊಮ್ಮೆ ಗಮನ ಹರಿಸಬೇಕಿದೆ.
ಮಾನಸಿಕ ಆರೋಗ್ಯ: ಈ ವರ್ಷದ ನಿರೀಕ್ಷೆಗಳೇನು? ಜನಸಾಮಾನ್ಯರ ವಲಯದಲ್ಲಿ ಮಾನಸಿಕ ಆರೋಗ್ಯ ಕಡೆಗಣಿಸಲ್ಪಟ್ಟ ವಲಯ. ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಜನಸಂಖ್ಯೆಗೆ ಅನುಗುಣವಾಗಿ ಮಾನಸಿಕ ತಜ್ಞರನ್ನು ನೇಮಿಸುವುದು ನಮ್ಮೆದುರಿಗಿನ ಅತಿ ದೊಡ್ಡ ಸವಾಲು. ಸುಮಾರು 1 ಲಕ್ಷ ಜನರಿಗೆ ಓರ್ವ ಮಾನಸಿಕ ತಜ್ಞ ನಮ್ಮಲ್ಲಿ ಲಭ್ಯವಿಲ್ಲ. ದೇಶದಲ್ಲಿ ಕೇರಳದಲ್ಲೇ ಅಡ್ಡಿಲ್ಲ ಎಂಬಂತಹ ಸ್ಥಿತಿ. ಕೇರಳದಲ್ಲಿ ಲಕ್ಷಕ್ಕೆ 1.2 ಮಾನಸಿಕ ತಜ್ಞರು ಲಭ್ಯರಿದ್ದರೆ ಮಧ್ಯಪ್ರದೇಶದಲ್ಲಿ ಈ ಪ್ರಮಾಣದ ಸಂಖ್ಯೆ ಅತಿ ಕಡಿಮೆ, ಲಕ್ಷಕ್ಕೆ 0.05 ಮಾತ್ರ.
ಇದನ್ನೂ ಓದಿ: Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!
ಬಜೆಟ್ 2021ರಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅತಿಯಾದ ಪ್ರಾಮುಖ್ಯತೆ ನೀಡಬೇಕು. ಲಾಕ್ಡೌನ್ನಿಂದ ದೇಶದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆಯನ್ನು ಊಹಿಸಿದರೆ ಮಂಕು ಹಿಡಿಯುತ್ತದೆ. ಕೆಲಸ ಕಳೆದುಕೊಂಡವರ ಸಂಖ್ಯೆ ಒಂದೆಡೆಯಾದರೆ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸ ಸಿಗದಿರುವ ಯುವಕ ಯುವತಿಯರ ಸಂಖ್ಯೆಯೂ ಸಾಕಷ್ಟಿದೆ. ನಿರುದ್ಯೋಗವು ಇವರ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರದಿರದು. ಈ ವರ್ಗ ಮಾನಸಿಕವಾಗಿ ದೃಢವಾಗಿರಬೇಕು. ಆಶಾವಾದದ ಚೈತನ್ಯ ಇವರಲ್ಲಿ ಹುಟ್ಟಬೇಕು. ಉದ್ಯೋಗ ಸೃಷ್ಟಿಯ ಜತೆ ನಿರುದ್ಯೋಗಿಗಳ ಮನೋಬಲವನ್ನು ಹೆಚ್ಚಿಸಲು ಮಾನಸಿಕ ತಜ್ಞರ ಸಂಖ್ಯೆಯೂ ಅಷ್ಟೇ ಅವಶ್ಯ.
ಬಜೆಟ್ 2021ರಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವುದು ದೇಶದ ಹಿತದೃಷ್ಟಿಯ ನಿಟ್ಟಿನಲ್ಲಿ ಅವಶ್ಯ, ಅನಿವಾರ್ಯ.
Budget 2021 ನಿರೀಕ್ಷೆ: ಕೃಷಿ ಸಬ್ಸಿಡಿ ಬದಲು ನೇರ ನಗದು ವರ್ಗಾವಣೆಗೆ ಸಿಗಲಿ ಆದ್ಯತೆ
Published On - 4:56 pm, Fri, 29 January 21