ವೈದ್ಯರ ಎಡವಟ್ಟು, ಬಾಣಂತಿ ಜೀವ ತೆಗೆಯಿತಾ ಅನಸ್ತೇಶಿಯಾ?

ಉತ್ತರಕನ್ನಡ: ಸಹಜ ಹೆರಿಗೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ, 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಗೀತಾ ಶಿವನಾಥ್ ಬಾನಾವಳಿಕರ್ ( 28) ಮೃತ ದುರ್ದೈವಿಯಾಗಿದ್ದಾರೆ. ಕಾರವಾರ ಬಳಿಯ ಸರ್ವೋದಯ ನಗರದ ನಿವಾಸಿಯಾಗಿರುವ ಗೀತಾ, ಎರಡನೇ ಹೆರಿಗೆಯಾದ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದರು. ಹೀಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗೀತಾ, ಇದ್ದಕ್ಕಿದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗೀತಾರವರ ಸಾವಿನಿಂದ ರೊಚ್ಚಿಗೆದ […]

ವೈದ್ಯರ ಎಡವಟ್ಟು, ಬಾಣಂತಿ ಜೀವ ತೆಗೆಯಿತಾ ಅನಸ್ತೇಶಿಯಾ?
ಸಾಧು ಶ್ರೀನಾಥ್​

Updated on: Sep 03, 2020 | 7:04 PM

ಉತ್ತರಕನ್ನಡ: ಸಹಜ ಹೆರಿಗೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ, 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಗೀತಾ ಶಿವನಾಥ್ ಬಾನಾವಳಿಕರ್ ( 28) ಮೃತ ದುರ್ದೈವಿಯಾಗಿದ್ದಾರೆ. ಕಾರವಾರ ಬಳಿಯ ಸರ್ವೋದಯ ನಗರದ ನಿವಾಸಿಯಾಗಿರುವ ಗೀತಾ, ಎರಡನೇ ಹೆರಿಗೆಯಾದ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದರು.

ಹೀಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗೀತಾ, ಇದ್ದಕ್ಕಿದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗೀತಾರವರ ಸಾವಿನಿಂದ ರೊಚ್ಚಿಗೆದ ಕುಟುಂಬಸ್ಥರು, ವೈದ್ಯರ ಎಡವಟ್ಟಿನಿಂದ ಗೀತಾ ಸಾವನ್ನಪ್ಪಿದ್ದಾರೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಗೀತಾಗೆ ಆಸ್ಪತ್ರೆ ವೈದ್ಯರು ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಲು ಮುಂದಾಗಿದ್ದಾರೆ. ವೈದ್ಯರು ಅನಸ್ತೇಶಿಯಾ ನೀಡಿದರಿಂದಲೇ ಬಾಣಂತಿ ಸಾವಾಗಿದೆಯೆಂದು ಕುಟುಂಸಬಸ್ಥರ ಆರೋಪ ಮಾಡಿದ್ದು, ಕಾರವಾರ ಜಿಲ್ಲಾಸ್ಪತ್ರೆಯ ಡೆಲಿವರಿ ವಾರ್ಡ್‌ನ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು‌ಮುಟ್ಟಿತ್ತು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us