‘ರಾಗಿಣಿ ಜೊತೆ ಲಿವ್​-ಇನ್ ​ರಿಲೇಷನ್‌ಶಿಪ್‌ನಲ್ಲಿದ್ದೆ, ದಿನಕ್ಕೆ 1ಲಕ್ಷ ಖರ್ಚು ಮಾಡ್ತಿದ್ದೆ’

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರಾಗಿಣಿ ಆಪ್ತ ರವಿಶಂಕರ್​ CCB ವಿಚಾರಣೆ ವೇಳೆ ಅಧಿಕಾರಿಗಳಿಗೆ ಸಾಕಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. Live-in Relationship ಮೋಜುಮಸ್ತಿಯಲ್ಲಿ..  ನಾನು ರಾಗಿಣಿ ಜೊತೆ ಲಿವ್​ ಇನ್​ ರಿಲೇಷನ್‌ಶಿಪ್‌ನಲ್ಲಿದ್ದೆ. ದಿನಕ್ಕೆ 1 ಲಕ್ಷ ರೂಪಾಯಿಯಷ್ಟು ಖರ್ಚು ಮಾಡ್ತಿದ್ದೆ ಎಂಬ ಮಾಹಿತಿ ನೀಡಿದ್ದಾನೆ. RTOನಲ್ಲಿ ಅಧಿಕಾರಿಯಾಗಿರುವ ರವಿಶಂಕರ್ ತನಗೆ ಬರುವ 30-35 ಸಾವಿರ ಸಂಬಳದಲ್ಲಿ ಹೇಗೆ ನಿಭಾಯಿಸುತ್ತಿದ್ದ ಎಂಬ ಅಧಿಕಾರಿಗಳಿಗೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಮತ್ತಷ್ಟು ಉತ್ತರ ಸಿಗಲು ರವಿಶಂಕರ್‌ನ ಕಸ್ಟಡಿಗೆ ಪಡೆದಿದ್ದಾರೆ. ಇದಲ್ಲದೆ, ಆರೋಪಿ ರವಿಶಂಕರ್ ಬಳಿ […]

‘ರಾಗಿಣಿ ಜೊತೆ ಲಿವ್​-ಇನ್ ​ರಿಲೇಷನ್‌ಶಿಪ್‌ನಲ್ಲಿದ್ದೆ, ದಿನಕ್ಕೆ 1ಲಕ್ಷ ಖರ್ಚು ಮಾಡ್ತಿದ್ದೆ’
Follow us
KUSHAL V
|

Updated on:Sep 04, 2020 | 3:53 PM

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ರಾಗಿಣಿ ಆಪ್ತ ರವಿಶಂಕರ್​ CCB ವಿಚಾರಣೆ ವೇಳೆ ಅಧಿಕಾರಿಗಳಿಗೆ ಸಾಕಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

Live-in Relationship ಮೋಜುಮಸ್ತಿಯಲ್ಲಿ..  ನಾನು ರಾಗಿಣಿ ಜೊತೆ ಲಿವ್​ ಇನ್​ ರಿಲೇಷನ್‌ಶಿಪ್‌ನಲ್ಲಿದ್ದೆ. ದಿನಕ್ಕೆ 1 ಲಕ್ಷ ರೂಪಾಯಿಯಷ್ಟು ಖರ್ಚು ಮಾಡ್ತಿದ್ದೆ ಎಂಬ ಮಾಹಿತಿ ನೀಡಿದ್ದಾನೆ.

RTOನಲ್ಲಿ ಅಧಿಕಾರಿಯಾಗಿರುವ ರವಿಶಂಕರ್ ತನಗೆ ಬರುವ 30-35 ಸಾವಿರ ಸಂಬಳದಲ್ಲಿ ಹೇಗೆ ನಿಭಾಯಿಸುತ್ತಿದ್ದ ಎಂಬ ಅಧಿಕಾರಿಗಳಿಗೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಮತ್ತಷ್ಟು ಉತ್ತರ ಸಿಗಲು ರವಿಶಂಕರ್‌ನ ಕಸ್ಟಡಿಗೆ ಪಡೆದಿದ್ದಾರೆ.

ಇದಲ್ಲದೆ, ಆರೋಪಿ ರವಿಶಂಕರ್ ಬಳಿ 3 ಮೊಬೈಲ್ ಇರುವ ಬಗ್ಗೆ ಮಾಹಿತಿ ದೊರೆತಿದ್ದು 2 ಮೊಬೈಲ್‌ಗಳನ್ನು CCB ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿದೆ. ಇನ್ನೊಂದು ಮೊಬೈಲ್ ಬೇರೆ ಯಾರಿಗೆ ಕೊಟ್ಟು ಕಳಿಸಲಾಗಿದೆ. ಹಾಗಾಗಿ, ಮೂರನೇ ಮೊಬೈಲ್‌ಗಾಗಿ ಅಧಿಕಾರಿಗಳಿಂದ ಶೋಧಕಾರ್ಯ ನಡೆಯುತ್ತಿದೆಯಂತೆ.

Published On - 6:15 pm, Thu, 3 September 20