‘ಜನರ ವಿಶ್ವಾಸ ಕಳೆದುಕೊಂಡ BSNL​ಗೆ ಭಾವಪೂರ್ಣ ಶ್ರದ್ಧಾಂಜಲಿ’: ರೈತ ಸಂಘದಿಂದ ಪ್ರತಿಭಟನೆ, ಯಾವೂರಲ್ಲಿ?

| Updated By: ಸಾಧು ಶ್ರೀನಾಥ್​

Updated on: Jan 29, 2021 | 1:29 PM

ಬ್ರಾಡ್ ಬ್ಯಾಂಡ್, ನೆಟ್ವರ್ಕ್ ಸಮಸ್ಯೆಯನ್ನು ಬಗೆ ಹರಿಸದ ಅಧಿಕಾರಿಗಳ ವಿರುದ್ದ ರೈತ ಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಜನರ ವಿಶ್ವಾಸ ಕಳೆದುಕೊಂಡ BSNL​ಗೆ ಭಾವಪೂರ್ಣ ಶ್ರದ್ಧಾಂಜಲಿ’: ರೈತ ಸಂಘದಿಂದ ಪ್ರತಿಭಟನೆ, ಯಾವೂರಲ್ಲಿ?
ರೈತ ಸಂಘ ಕಾರ್ಯಕರ್ತರಿಂದ ಪ್ರತಿಭಟನೆ
Follow us on

ಕೋಲಾರ: ನೆಟ್​​ವರ್ಕ್ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರೈತ ಸಂಘ ಕಾರ್ಯಕರ್ತರು ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತದ ಅತಿ ದೊಡ್ಡ, ಪುರಾತನ ಬಿಎಸ್ಎನ್ಎಲ್ ನೆಟ್​​ವರ್ಕ್ BSNL  ಸಮಸ್ಯೆಯಿಂದ ಜನ ಪರದಾಡುತ್ತಿದ್ದು, ಬ್ರಾಡ್ ಬ್ಯಾಂಡ್, ನೆಟ್​​ವರ್ಕ್ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ದ ರೈತ ಸಂಘ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. BSNL ಅಧಿಕಾರಿಗಳ ಪ್ರತಿಕೃತಿ ಮೇಲೆ ‘ಜನರ ವಿಶ್ವಾಸ ಕಳೆದುಕೊಂಡ ಬಿಎಸ್​ಎನ್​ಎಲ್​ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು  ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?

Published On - 1:28 pm, Fri, 29 January 21