ರಾಜಧನ ಪಾವತಿಸದೇ ಇದ್ರೂ ಕಾರ್ಖಾನೆಗಳಿಗೆ ಪುಕ್ಸಟೆ ನೀರು, ಏನು ಕೇಳದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ರಾಯಚೂರು: ಆ ಜಲಾಶಯ ರಾಜ್ಯದ ತ್ರಿವಳಿ ಜಿಲ್ಲೆಯ ರೈತರ ಜೀವನಾಡಿ. ಆ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾದ್ರೂ ಜಲಾಶಯದ ಸುತ್ತಲೂ ಇರುವ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಹರಿಸಲಾಗುತ್ತಿದೆ. ಬೆಳೆಗೆ ನೀರು ಇಲ್ಲದಿದ್ದರು ಕಾರ್ಖಾನೆಗಳಿಗೆ ನೀರು ಹೋಗುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯನ್ನೆ ನಂಬಿ 6 ಲಕ್ಷಕ್ಕೂ ಅಧಿಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲುವೆಯ ಕೊನೆ ಭಾಗದ ರೈತರಿಗೆ ಇಂದಿಗೂ ಸಮರ್ಪಕವಾಗಿ ನೀರು ತಲುಪಿಸೋಕೆ ಸಾಧ್ಯವಾಗ್ತಿಲ್ಲ ಈ ನಡುವೆ ಕೆಲ ಕಾರ್ಖಾನೆಗಳು ಸರ್ಕಾರಕ್ಕೆ ಟೋಪಿ […]

ರಾಜಧನ ಪಾವತಿಸದೇ ಇದ್ರೂ ಕಾರ್ಖಾನೆಗಳಿಗೆ ಪುಕ್ಸಟೆ ನೀರು, ಏನು ಕೇಳದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

Updated on: Nov 11, 2020 | 9:01 AM

ರಾಯಚೂರು: ಆ ಜಲಾಶಯ ರಾಜ್ಯದ ತ್ರಿವಳಿ ಜಿಲ್ಲೆಯ ರೈತರ ಜೀವನಾಡಿ. ಆ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾದ್ರೂ ಜಲಾಶಯದ ಸುತ್ತಲೂ ಇರುವ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಹರಿಸಲಾಗುತ್ತಿದೆ. ಬೆಳೆಗೆ ನೀರು ಇಲ್ಲದಿದ್ದರು ಕಾರ್ಖಾನೆಗಳಿಗೆ ನೀರು ಹೋಗುತ್ತಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆಯನ್ನೆ ನಂಬಿ 6 ಲಕ್ಷಕ್ಕೂ ಅಧಿಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲುವೆಯ ಕೊನೆ ಭಾಗದ ರೈತರಿಗೆ ಇಂದಿಗೂ ಸಮರ್ಪಕವಾಗಿ ನೀರು ತಲುಪಿಸೋಕೆ ಸಾಧ್ಯವಾಗ್ತಿಲ್ಲ ಈ ನಡುವೆ ಕೆಲ ಕಾರ್ಖಾನೆಗಳು ಸರ್ಕಾರಕ್ಕೆ ಟೋಪಿ ಹಾಕಿ ವಂಚನೆ ಮಾಡುತ್ತಿರುವುದು ರೈತರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

ತುಂಗಭದ್ರಾ ವ್ಯಾಪ್ತಿಯ ಕಾರ್ಖಾನೆಗಳಿಗೆ 6 ಟಿಎಂಸಿ ನೀರು!
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಜಿಂದಾಲ್, ಕಲ್ಯಾಣಿ, ಕಿರ್ಲೋಸ್ಕರ್ ಸೇರಿದಂತೆ ಕೆಲ ಸ್ಟೀಲ್ ಕಾರ್ಖಾನೆಗಳು ವಿರುದ್ಧ ಸರ್ಕಾರ ಹೊಸದಾಗಿ ನಿಗಧಿಪಡಿಸಿದ ದರಪಟ್ಟಿಯಂತೆ ರಾಜಧನ ಪಾವತಿಸಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕಳೆದ 2018ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ಎಂಟಿಎಫ್‌ಸಿ ನೀರು ಬಳಕಗೆ 3 ಲಕ್ಷ ರೂಪಾಯಿ ದರ ನಿಗಧಿಪಡಿಸಿತ್ತು.

ಬಿಜೆಪಿ ಸರ್ಕಾರ ಮತ್ತೊಮ್ಮೆ ದರ ಪರಿಷ್ಕರಿಸಿದ್ದು, ಸಧ್ಯ ಪ್ರತಿ ಎಂಟಿಎಫ್‌ಸಿಗೆ 2 ಲಕ್ಷ ರೂಪಾಯಿ ದರ ನಿಗಧಿಪಡಿಸಿ ಆದೇಶಿಸಿದೆ. ಆದ್ರೆ ಇಂದಿಗೂ ಕಾರ್ಖಾನೆಗಳು ಹೊಸ ದರಪಟ್ಟಿಯಂತೆ ಸರ್ಕಾರಕ್ಕೆ ರಾಜಧನ ಪಾವತಿಸಿಲ್ಲವೆಂದು ರೈತರು ಆರೋಪಿಸ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ರೂ ತುಂಗಭದ್ರಾ ವಲಯದ ನೀರಾವರಿ ಅಧಿಕಾರಿಗಳು ಕಾರ್ಖಾನೆಗಳಿಗೆ 6 ಟಿಎಂಸಿಗೂ ಅಧಿಕ ಪುಗ್ಸಟ್ಟೆ ನೀರು ಪೂರೈಕೆ ಮಾಡುತ್ತಿರೋದು ರೈತರನ್ನ ರೊಚ್ಚಿಗೆಬ್ಬಿಸಿದೆ.

ನೀರಾವರಿ ಇಲಾಖೆಯ ಅಧಿಕಾರಿಗಳ ಈ ನಡೆ ಮೂರು ಜಿಲ್ಲೆಯ ರೈತರನ್ನ ರೊಚ್ಚಿಗೆಬ್ಬಿಸಿದೆ. ಈ ನಡುವೆ ಪ್ರಸಕ್ತ ವರ್ಷ ಎರಡನೇ ಬೆಳೆಗೆ ನೀರು ಹರಿಸಬೇಕೆಂದು ರೈತರು ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೆ ಜಲಾಶಯದಲ್ಲಿ 98 ಟಿಎಂಸಿ ನೀರಿನ ಲಭ್ಯವಿದ್ದು, ಡಿಸೆಂಬರವರೆಗೂ ಕಾಲುವೆಗೆ ನೀರು ಹರಿಯಲಿದೆ.

ಜಲಾಶಯದಲ್ಲಿ ಲಭ್ಯ ಇರುವ ನೀರನ್ನ ಮುಂದಿನ ಬೇಸಿಗೆಗೆ ಕುಡಿಯುವ ನೀರಿಗಾಗಿ ಕಾಯ್ದಿರಿಸುವ ಲೆಕ್ಕಾಚಾರ ನಡದಿದೆ. ಇನ್ನು 48 ಟಿಎಂಸಿಗೂ ಅಧಿಕ ನೀರು ಜಲಾಶಯದಲ್ಲಿ ಉಳಿದ್ರೆ ಮಾತ್ರ ರೈತರ ಎರಡನೇ ಬೆಳೆಗೆ ನೀರು ಸಿಗಲಿದೆ ಎಂಬ ಅಭಿಪ್ರಾಯಕ್ಕೆ ಅಧಿಕಾರಿಗಳು ಬಂದಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ರೂ ಅಧಿಕಾರಿಗಳು ಮಾತ್ರ ಕಾರ್ಖಾನೆಗಳಿಗೆ ಪುಗ್ಸಟ್ಟೆ ನೀರು ಪೂರೈಕೆ ಮಾಡ್ತಿರುವುದು ರೈತರಲ್ಲಿ ಮತ್ತಷ್ಟು ಆಕ್ರೋಶ ಮೂಡಿಸಿದೆ.

ಒಟ್ನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರು ಹನಿ ಹನಿ ನೀರಿಗೂ ಪರದಾಡ್ತಿದ್ದಾರೆ. ಇನ್ನೊಂದ್ಕಡೆ ಕಾರ್ಖಾನೆಗಳು ರಾಜಧನ ನೀಡದೇ ಇದ್ರೂ ಪುಗ್ಸಟ್ಟೆ ನೀರು ದೊಚುತ್ತಿವೆ. ಮತ್ತೊಂದ್ಕಡೆ ರೈತರು ಎರಡನೇ ಬೆಳೆಗೆ ನೀರು ಕೇಳುತ್ತಿದ್ದಾರೆ. ಆದಷ್ಟು ಬೇಗ ಹಿರಿಯ ಅಧಿಕಾರಿಗಳು ಈ ಸಮಸ್ಯೆಗಳಿಗೆ ಪರಿಹಾರ ಹುಡಕಬೇಕಿದೆ.